ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳನ್ನು ನೀಡಲು ಒತ್ತಾಯಿಸಿ ಪ್ರತಿಭಟನೆ

Last Updated 25 ಜನವರಿ 2012, 5:40 IST
ಅಕ್ಷರ ಗಾತ್ರ

ಮೈಸೂರು: ಕಡುಬಡವರಿಗೆ, ಅಂಗವಿಕ ಲರಿಗೆ ನರ್ಮ್ ಯೋಜನೆಯಡಿ ನಿರ್ಮಾಣವಾದ ಮನೆಗಳನ್ನು ನೀಡದೆ ಸರ್ಕಾರ ಅನ್ಯಾಯ ಎಸಗಿದೆ ಎಂದು ಆರೋಪಿಸಿ ಮೈಸೂರು ನಗರ ಮಹಿಳಾ ಮತ್ತು ಮಕ್ಕಳ, ಅಂಗವಿಕಲರ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಮಾಜ ಸೇವಾ ಸಮಿತಿ ಕಾರ್ಯಕರ್ತರು ಹೈವೇ ವೃತ್ತದ ಬಳಿ ಇರುವ ಕೊಳಚೆ ನಿರ್ಮೂಲನಾ ಮಂಡಳಿ ಎದುರು ಮಂಗಳವಾರ ಪ್ರತಿಭಟನೆ ಮಾಡಿದರು.

ನರ್ಮ್ ಯೋಜನೆಯಡಿ ಕಟ್ಟಲಾಗಿರುವ ಮನೆಗಳನ್ನು ನೀಡುವಂತೆ ಬಡವರು, ಅಂಗವಿಕಲರು, ವಿಧವೆಯರು, ಮನೆ ಕೆಲಸದವರು, ಬೀಡಿ ಕಟ್ಟುವವರು ಅರ್ಜಿ ಸಲ್ಲಿಸಿದರು. ಆದರೆ ಇವರೆಲ್ಲರ ಅರ್ಜಿಗಳನ್ನು ಪಟ್ಟಿಗೆ ಸೇರಿಸದೆ ಅನ್ಯಾಯ ಮಾಡಲಾಗಿದೆ. ಬಡವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 6 ದಶಕಗಳೇ ಕಳೆದಿದ್ದರೂ ಬಡವರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಕಟ್ಟ ಕಡೆಯ ಮನುಷ್ಯನಿಗೆ ನ್ಯಾಯ ಒದಗಿ ಸಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಸರ್ಕಾರದ ಸವಲತ್ತುಗಳು ಬಡ ಜನತೆಗೆ ತಲುಪುತ್ತಿಲ್ಲ. ಸರ್ಕಾರಿ ಕಚೇರಿಗಳಿಗೆ ಅರ್ಜಿಗಳನ್ನು ಹಿಡಿದು ಚಪ್ಪಲಿ ಸವೆಸುವುದರಲ್ಲೇ ಬಡವರು ಕಾಲ ಕಳೆಯುತ್ತಿದ್ದಾರೆ. ಇನ್ನಾದರೂ ಬಡವರ ಅಭಿವೃದ್ಧಿಗೆ ಬಗ್ಗೆ ಸರ್ಕಾರ ಗಮನ ಹರಿಸಬೇಕು. ನರ್ಮ್ ಯೋಜನೆಯಡಿ ಮನೆಗಳನ್ನು ನೀಡಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿ ಸಲಾಗು ವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಸಮಿತಿ ಅಧ್ಯಕ್ಷ ಯೂಸುಫ್ ಮಿರ್ಜಾ, ಕಾರ್ಯದರ್ಶಿ ಇಮ್ರಾನ್, ಉಪಾಧ್ಯಕ್ಷ ಇಲಿಯಾಸ್ ಉಲ್ಲಾ ಬೇಗ್, ಖಜಾಂಚಿ ವಜೀರ್ ಉಲ್ಲಾ ಷರೀಫ್, ನಿರ್ದೇಶಕರಾದ ಮಹದೇವ, ರಾಮಚಂದ್ರ, ಶಾಂತಿ, ಪುಟ್ಟರಾಜು, ಮೊಹ್ಸಿನಾ ತಾಜ್, ಸರಸ್ವತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT