ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದಲ್ಲಿ ಮೂಡಿತು ನಂದಿ ಮುಖ!

Last Updated 27 ಫೆಬ್ರುವರಿ 2011, 20:00 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಇಲ್ಲಿನ ದೇವನಹಳ್ಳಿ ಮುಖ್ಯರಸ್ತೆಯ ಮಲ್ಲಪ್ಪ ಎಸ್ಟೇಟ್ ಸಮೀಪ ಮರದವೊಂದರ ನಂದಿ (ಬಸವ)ಯ ಆಕೃತಿ ಮೂಡಿದ್ದು ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.ಮರದ ಕಾಂಡದಲ್ಲಿ ಮೂಡಿರುವ ನಂದಿ ಆಕೃತಿಗೆ ಸಾರ್ವಜನಿಕರು ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಮುಂಜಾನೆಯಿಂದ ದೊಡ್ಡಬಳ್ಳಾಪುರ-ದೇವನಹಳ್ಳಿ ಮುಖ್ಯರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಈ ಮರದ ಬಳಿ ಸ್ವಲ್ಪ ಹೊತ್ತು ನಿಂತು ಮುಂದೆ ಹೋಗುವಂತಾಗಿದೆ. 

ಮರದ ಆಕೃತಿಗೆ ಹೂವಿನ ಹಾರ, ಅರಿಶಿನ ಕುಂಕುಮ ಹಚ್ಚಿ ಅಲಂಕಾರ ಮಾಡಲಾಗಿದೆ. ಕೆಲವರು ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಮರದ ಆಕೃತಿ ಕುರಿತು ವಿವಿಧ ಕಥೆಗಳನ್ನು ಸೃಷ್ಟಿಸಿ ಹೇಳಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಪರಿಸರಾಕ್ತರು ಇದು ಮರದಲ್ಲಿ ಸಹಜವಾಗಿ ಆಗಿರುವ ಬೆಳೆವಣಿಗೆಯೇ ಹೊರತು ವಿಶೇಷವೇನು ಇಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT