ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಟಿಪರ್ಪಸ್ ಸರ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಲೆ ಎಷ್ಟೇ ಇರಲಿ ಚಿನ್ನ, ಬೆಳ್ಳಿಯ ಒಡವೆ ನೋಡಿದಾಗ ಹೆಣ್ಣಿನ ಚೂಪು ಕಂಗಳು ಅರಳುತ್ತವೆ. ಆಕೆಯ ಮನದ ಇಂಗಿತ ಅರಿತ ಆಭರಣ ಕಂಪೆನಿಗಳು ಕಣ್ಣು ಕುಕ್ಕುವ, ವಿನೂತನ ಡಿಸೈನ್‌ನ ಫ್ಯಾಷನೆಬಲ್ ಒಡವೆಗಳನ್ನು ಮಾರುಕಟ್ಟೆಗೆ ತರಲು ಪೈಪೋಟಿಯನ್ನೂ ನಡೆಸುತ್ತಿವೆ. ವೈವಿಧ್ಯಮಯ ಡಿಸೈನ್‌ನ ಚಿನ್ನದ ಆಭರಣ ಕೊಳ್ಳುವ ಕನಸು ಹೆಣ್ಣಿನದು.

ನೆಕ್ಲೆಸ್, ಕಿವಿಯೋಲೆ, ಬ್ರೇಸ್‌ಲೆಟ್, ಪದಕಗಳ ಡಿಸೈನ್‌ಗಳನ್ನು ಆಭರಣ ಮಳಿಗೆಯಲ್ಲಿ ಎಷ್ಟು ನೋಡಿದರೂ ಸಾಲದು. ಖರೀದಿಗೆ ಮುನ್ನ ತಿರುಗಿಸಿ ತಿರುಗಿಸಿ ಡಿಸೈನ್, ತೂಕ ನೋಡಿ, ಹಣ ಅಳೆದು ತೂಗಿ ಏನಾದರೂ ಖರೀದಿ ಮಾಡಲೇಬೇಕೆಂಬ ತವಕ. ಅದಕ್ಕಾಗಿಯೇ ವಿವಿಧ ಆಭರಣ ಕಂಪೆನಿಗಳು ಹಲವು ವಿನ್ಯಾಸದ ಕಣ್ಸೆಳೆಯುವ ಒಡವೆ ಹೊರತರುತ್ತಿವೆ.

ಇದೀಗ ದೀಪಾವಳಿ ಸಂಭ್ರಮ ಹೆಚ್ಚಿಸಲೆಂದೇ ಕಮರ್ಷಿಯಲ್ ಸ್ಟ್ರೋಟ್‌ನಲ್ಲಿನ ಪ್ರತಿಷ್ಠಿತ `ಓರಾ~ ಆಭರಣ ಮಳಿಗೆ `ಮಲ್ಟಿ ಪರ್ಪಸ್~ ಒಡವೆ ಸೆಟ್ ಹೊರತಂದಿದೆ. ಒಂದೇ ನೆಕಲೇಸ್‌ನಲ್ಲಿ ಎರಡು ಮೂರು ಜೋಡಣೆ ಹುಕ್‌ಗಳಿರುತ್ತವೆ. ಅದನ್ನು ಬಿಡಿಸಿ ಒಂದು ಭಾಗವನ್ನು ಬ್ರೇಸ್‌ಲೆಟ್ ಆಗಿ ಬಳಸಬಹುದು, ಉಳಿದ ಭಾಗವನ್ನು ಕತ್ತಿನ ಕಿರು ಹಾರವಾಗಿ ಧರಿಸಬಹುದು. ಮನಕ್ಕೆ ಒಪ್ಪುವಂತೆ ಉದ್ದ ನೆಕ್ಲೆಸ್, ಚಿಕ್ಕ ನೆಕ್ಲೆಸ್ ಆಗಿಯೂ ಹಾಕಿಕೊಳ್ಳಬಹುದು.

ಬಿಐಎಸ್ ಹಾಲ್‌ಮಾರ್ಕ್ ಇರುವ 22 ಕ್ಯಾರಟ್ ಚಿನ್ನದ ಆಭರಣದ ಈ ಸೆಟ್ ಹಲವು ರೀತಿಯಲ್ಲಿ ಬಳಸಬಹುದು. ಇದು ಇಂದಿನ ಆಭರಣ ಜಗತ್ತಿನಲ್ಲಿ ಅತ್ಯಂತ ವಿನೂತನ ಪ್ರಯೋಗ ಎನ್ನುತ್ತಾರೆ ಓರಾದ ಮಾರುಕಟ್ಟೆ ಮತ್ತು ಮಾರಾಟ ಉಪಾಧ್ಯಕ್ಷ ಸೆಸಿಲ್ ಡೇಸಾಂಟಮಾರಿಯಾ ಅವರು.

ಇದರ ಜತೆಗೆ ಹಬ್ಬದ ಸಂದರ್ಭದಲ್ಲಿ 5 ಸಾವಿರ ರೂ ಮೇಲ್ಪಟ್ಟ ವಜ್ರದ ಆಭರಣ ಖರೀದಿಗೆ ಬೆಳ್ಳಿ ನಾಣ್ಯ, 10 ಸಾವಿರ ರೂ ಮೇಲಿನ ಖರೀದಿಗೆ ಚಿನ್ನದ ನಾಣ್ಯ ಉಚಿತವಾಗಿ ನೀಡುತ್ತಿದೆ.

ಓರಾ ಸದಾ ಪ್ರಸ್ತುತವಾದ ವಿನ್ಯಾಸ, ಗುಣಮಟ್ಟ, ನಿಖರವಾಗಿ ಕತ್ತರಿಸಿದ ಆಭರಣ ಮತ್ತು ಸಾಲಿಟೇರ್ ವಜ್ರಗಳಿಗೆ ಹೆಸರಾಗಿದೆ. ವಜ್ರದ ಓಲೆ, ಬಳೆ, ಉಂಗುರ, ನೆಕ್ಲೆಸ್, ಸರ ಆ್ಯಂಟಿಕ್ ಮತ್ತು ಟೆಂಪಲ್ ಆಭರಣಗಳು ಇಲ್ಲಿನ ಸ್ಪೆಷಾಲಿಟಿ. ಆಭರಣದ ಕುಸುರಿ ಕಲೆಯೂ ಆಕರ್ಷಕವಾಗಿವೆ.

 ಕೋಲ್ಕತ್ತ, ಮುಂಬೈಯ ಕುಸುರಿಯನ್ನು ಟೆಂಪಲ್ ಜ್ಯುವೆಲ್ಲರಿಗಳಲ್ಲಿ ಕಾಣಬಹುದು. ಕುಂದನ್‌ಪೊಲ್ಕ, ಬಣ್ಣದ ಕಲ್ಲುಗಳಲ್ಲಿ ಮಾಡಿದ ಆಭರಣಗಳಂತೂ ಮದುವೆ ಹೆಣ್ಣಿಗೆ ಹೇಳಿ ಮಾಡಿಸಿದಂತಿವೆ. ಅಲ್ಲದೆ ಬೆಲ್ಜಿಯಂ ವಜ್ರ, ಕಟ್, ಪಾಲಿಶ್ ಇಲ್ಲದ ಆಭರಣಗಳು ವಿಶೇಷ ಶೈಲಿ ಮತ್ತು ವಿನ್ಯಾಸಗಳಿಂದ ಗಮನ ಸೆಳೆಯುತ್ತವೆ. ವಜ್ರ, ಪ್ಲಾಟಿನಂ ನಂತರ ಈಗ ಚಿನ್ನದ ಆಭರಣಗಳನ್ನು ಹೊರ ತಂದಿದೆ.

ಇವೆಲ್ಲದರಲ್ಲೂ ಮಲ್ಟಿಪರ್ಪಸ್ ಒಡವೆ ಮಾತ್ರ ಆಕರ್ಷಕ ಮತ್ತು ಒಂದೇ ಆಭರಣ ಖರೀದಿಸಿ ಬಹುಬಳಕೆ ಮಾಡುವುದು ಅದ್ಭುತ..! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT