ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಶೇ 37ರಷ್ಟು ಬಿತ್ತನೆ

Last Updated 1 ಆಗಸ್ಟ್ 2012, 7:40 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿಯೂ ಮುಂಗಾರು ಮಳೆಯ ಕೊರತೆ ಕಂಡು ಬಂದಿದೆ. ಆದರೆ ಅಲ್ಪ-ಸ್ವಲ್ಪ ಮಳೆಯಿಂದಾಗಿ ರೈತರು ಉತ್ತಮ ಮಳೆಯ ಭರವಸೆಯಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.  ಜುಲೈ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಕೇವಲ ಶೇ 37ರಷ್ಟು ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 2,52,500 ಹೆಕ್ಟೇರ್ ಸಾಗುವಳಿ ಕ್ಷೇತ್ರವಿದೆ. ಈ ಪೈಕಿ 94459 ಹೆ. ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 94 ಮಿ.ಮೀ ನಷ್ಟು ಮಳೆ ಬಿದ್ದಿದ್ದರೆ, ಈ ವರ್ಷ 48.8 ಮಿ.ಮೀ.ನಷ್ಟು ಮಳೆ ಬಿದ್ದಿದೆ.

ಮಳೆ: ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಯ 222 ಮಿ.ಮೀ. ಮಳೆಯ ಬದಲಿಗೆ 113. 65 ಮಿ.ಮೀ. ಮಳೆಯಾಗಿದ್ದು, 108.35 ಮಿ.ಮೀ. ಮಳೆಯ ಕೊರತೆ ಕಂಡು ಬಂದಿದೆ. ಕೊಪ್ಪಳ ತಾಲ್ಲೂಕಿನಲ್ಲಿ 144.8 ಮಿ.ಮೀ., ಕುಷ್ಟಗಿ- 104.9. ಯಲಬುರ್ಗಾ- 118 ಹಾಗೂ ಗಂಗಾವತಿ ತಾಲ್ಲೂಕಿನಲ್ಲಿ 86.9 ಮಿ.ಮೀ. ಮಳೆಯಾಗಿದೆ. 

ಬಿತ್ತನೆ: ಕೊಪ್ಪಳ ತಾಲ್ಲೂಕಿನಲ್ಲಿ 64,600 ಹೆ. ಗುರಿಯ ಬದಲಿಗೆ 31,924 ಹೆ. (ಶೇ 49), ಕುಷ್ಟಗಿ- 68250 ಹೆ. ಗುರಿಯ ಎದುರು 26,674 ಹೆ. (ಶೇ 39), ಯಲಬುರ್ಗಾ- 55,520 ಹೆ. ಗುರಿಯ ಬದಲಿಗೆ 22,787 ಹೆ. (ಶೇ 41) ಹಾಗೂ ಗಂಗಾವತಿ ತಾಲೂಕಿನಲ್ಲಿ 64,130 ಹೆ. ಗುರಿಯ ಬದಲಿಗೆ 13,074 ಹೆ. (ಶೇ 20) ನಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT