ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವಕಪ್ ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಗೆಲುವು

ಕೊನೆಯಲ್ಲಿ ಎಡವಿದ ಇಂಗ್ಲೆಂಡ್
Last Updated 8 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಅಲ್ಪ ಮೊತ್ತದ ಗುರಿಯಿದ್ದರೂ ಮುಟ್ಟಲು ಪರದಾಡಿದ ಇಂಗ್ಲೆಂಡ್ ತಂಡದವರು ಗೆಲುವಿನ ಹೊಸ್ತಿಲಲ್ಲಿ ಎಡವಿದರು. ಅದರೆ, ಚುರುಕಿನ ಬೌಲಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡದವರು ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯ `ಸೂಪರ್ ಸಿಕ್ಸ್' ಹಂತದ ಮೊದಲ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದರು.

ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದವರು ಫೀಲ್ಡಿಂಗ್ ಆಯ್ದುಕೊಂಡರು.

ನಾಯಕಿ ಚಾರ್ಲಟ್ ಎಡ್ವರ್ಡ್ಸ್ ಅವರ ನಿರ್ಧಾರವನ್ನು ಸಮರ್ಥಿಸುವಂತೆ ಈ ತಂಡ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು 44.4 ಓವರ್‌ಗಳಲ್ಲಿ 147 ರನ್‌ಗೆ ಆಲ್ ಔಟ್ ಮಾಡಿತು. ಆದರೆ, ಈ ಸಣ್ಣ ಗುರಿಗೆ ಉತ್ತರವಾಗಿ ಇಂಗ್ಲೆಂಡ್ 47.3 ಓವರ್‌ಗಳಲ್ಲಿ 145 ರನ್ ಮಾತ್ರ ಕಲೆ ಹಾಕಿತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಒಂದು ಹಂತದಲ್ಲಿ 114 ರನ್‌ಗಳಿಗೆ ಒಂಬತ್ತು ವಿಕೆಟ್ ಕಳೆದುಕೊಂಡಿತ್ತು. ಆದರೆ, ಹೊಲಿ ಕೊಲ್ವಿನ್ (16) ಹಾಗೂ ಅನ್ಯಾ ಶ್ರುಬಸೊಲೆ (ಔಟಾಗದೆ 13) ಹತ್ತನೇ ವಿಕೆಟ್ ಜೊತೆಯಾಟದಲ್ಲಿ 31 ರನ್ ಕಲೆ ಹಾಕಿತು. ಆಗ ತಂಡದ ಮೊತ್ತ 145. ಆದರೆ, ಕೊನೆಯ ಎರಡು ರನ್‌ಗಳನ್ನು ಗಳಿಸಲು ಆಸೀಸ್ ಬೌಲರ್‌ಗಳು ಅವಕಾಶ ನೀಡಲಿಲ್ಲ. ಕೊಲ್ವಿನ್ ಅವರನ್ ವಿಕೆಟನ್ನು ಐರಿನ್ ಒಸ್ಬೊರ್ನೆ ಪಡೆದು, ಇಂಗ್ಲೆಂಡ್ ತಂಡದ ಗೆಲುವಿನ ಆಸೆಯನ್ನು ನುಚ್ಚುನೂರು ಮಾಡಿದರು. ಆಸೀಸ್ ತಂಡದ ಲೀಸಾ ಸ್ಟಾಲೆಕರ್ (41) ಪಂದ್ಯಶ್ರೇಷ್ಠ ಆಟಗಾರ್ತಿ ಗೌರವ ಪಡೆದರು.

ಮುಂಬೈಯ ಬಿಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಇನ್ನೊಂದು `ಸೂಪರ್ ಸಿಕ್ಸ್' ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾದ ಎದುರು ಎರಡು ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು.

ಕಟಕ್ ವರದಿ: ದಕ್ಷಿಣ ಆಫ್ರಿಕಾ ನೀಡಿದ್ದ 230 ರನ್‌ಗಳ ಗುರಿಯನ್ನು ಸುಲಭವಾಗಿ ಮುಟ್ಟಿದ ವೆಸ್ಟ್ ಇಂಡೀಸ್ ತಂಡದವರು ಎರಡು ವಿಕೆಟ್‌ಗಳ ಗೆಲುವು ಸಾಧಿಸಿದರು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ 44.4 ಓವರ್‌ಗಳಲ್ಲಿ 147. (ಮೆಗ್ ಲ್ಯಾನಿಂಗ್ 17, ಲೀಸಾ ಸ್ಟಾಲೆಕರ್ 41, ಸರಹ್ ಕಾಯ್ಟೆ 44, ಜೂಲಿಯಾ ಹಂಟರ್ ಔಟಾಗದೆ 16; ಅನ್ಯಾ ಶ್ರುಬಸೊಲೆ 24ಕ್ಕೆ3). ಇಂಗ್ಲೆಂಡ್ 47.3 ಓವರ್‌ಗಳಲ್ಲಿ 145. (ಲಿಡಿಯಾ ಗ್ರೀನ್‌ವೇ 49, ಲಾರಾ ಮಾರ್ಷ್ 22, ಹೊಲಿ ಕೊಲ್ವಿನ್ 16; ಜೂಲಿಯಾ ಹಂಟರ್ 15ಕ್ಕೆ2, ಹೊಲಿ ಫೆರ್ಲಿಂಗ್ 35ಕ್ಕೆ3). ಫಲಿತಾಂಶ: ಆಸ್ಟ್ರೇಲಿಯಾಕ್ಕೆ ಎರಡು ಜಯ ಹಾಗೂ ಎರಡು ಪಾಯಿಂಟ್.

ಶ್ರೀಲಂಕಾ 42 ಓವರ್‌ಗಳಲ್ಲಿ 103. (ದೀಪಿಕಾ ರಸಂಗಿಕಾ 34, ದಿನಾಲಿ ಮನೊದರಾ 34; ಸಿನ್ ರಕ್ 16ಕ್ಕೆ3, ಲೀ ತಹುಬು 27ಕ್ಕೆ4, ಫ್ರಾನ್ಸಿಸ್ ಮೆಕೆ 18ಕ್ಕೆ2). ನ್ಯೂಜಿಲೆಂಡ್: 23 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 108. (ಫ್ರಾನ್ಸಿಸ್ ಮೆಕೆ ಔಟಾಗದೆ 39, ಸೋಫಿಯಾ ಡೆವಿನ್ ಔಟಾಗದೆ 29; ಇನೊಕಾ ರಣವೀರಾ 27ಕ್ಕೆ2). ಫಲಿತಾಂಶ: ನ್ಯೂಜಿಲೆಂಡ್‌ಗೆ ಎಂಟು ವಿಕೆಟ್ ಜಯ.

ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 230 (ತ್ರಿಶಾ ಚೆಟ್ಟಿ 45, ಮಿಗ್ನಾನ್ ಡು ಪ್ರೆಜ್ 31, ಕ್ರಿ ಬ್ರಿಟ್ಸ್ 44; ಟ್ರೆಮಿನಿ ಸ್ಮಾರ್ಟ್ 43ಕ್ಕೆ2). ವೆಸ್ಟ್‌ಇಂಡೀಸ್: 45.3 ಓವರ್‌ಗಳಲ್ಲಿ 8 ವಿಕೆಟ್‌ಗೆ 234 (ಕೇಸಿಯಾ ನೈಟ್ 46, ಸ್ಟೆಫಾನಿ ಟೇಲರ್ 75, ಶೆಮೈನ್ ಕ್ಯಾಂಪ್‌ಬೆಲ್ 33, ಡೇನ್ ವಾನ್ ನಿಕೆರ್ಕ್ 47ಕ್ಕೆ 3, ಮೆರಿಜಾನ್ ಕಪ್ 42ಕ್ಕೆ 2) ಫಲಿತಾಂಶ:  ವೆಸ್ಟ್‌ಇಂಡೀಸ್‌ಗೆ 2 ವಿಕೆಟ್ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT