ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಕೈಯಲ್ಲಿಯೇ ಇದೆ

Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಶಾಸಕ ಸಂಸದ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲು ಬೇಕೆಂದು ಒತ್ತಾಯಿಸುವ ರಾಜಕೀಯ ಪಕ್ಷಗಳೇ ಶೇ ಐದು, ಹತ್ತು ಮಹಿಳಾ ಅಭ್ಯರ್ಥಿಗಳನ್ನೂ ಚುನಾವಣೆಯಲ್ಲಿ ನಿಲ್ಲಿಸಲು ಮನಸ್ಸು ಮಾಡುತ್ತಿಲ್ಲ ಎನ್ನುವುದು ಸತ್ಯ.

ಇದು ಶೇ 50 ಮಹಿಳಾ ಮತದಾರರ ಕಣ್ಣು ತೆರೆಸಬೇಕು. ತಮ್ಮ ಹಕ್ಕಿಗಾಗಿ ಪುರುಷರನ್ನು ನಂಬಿದರೆ ಎಂದೂ ಮೀಸಲಾತಿ ಸಿಗುವುದಿಲ್ಲ ಎಂಬ ಜ್ಞಾನೋದಯ ಈಗ ಆದರೂ ತಮ್ಮ ಗುರಿಯನ್ನು ಸಾಧಿಸಲು ಅವರಿಗೆ ಅವಕಾಶವಿದೆ.

ಈಗ ನೋಡಿ ಕರ್ನಾಟಕ ಚುನಾವಣೆಯಲ್ಲಿಯೂ ಮಹಿಳಾ ಅಭ್ಯರ್ಥಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ. ಅಲ್ಲಲ್ಲಿ ಮಹಿಳೆಯರಿಗೆ ಟಿಕೆಟ್ ಕೊಡದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಆದರೆ ಇದನ್ನು ಗಮನಿಸಿ ಮಹಿಳೆಯರಿಗೆ ನ್ಯಾಯ ಒದಗಿಸುವಷ್ಟು ನಮ್ಮ ರಾಜಕೀಯ ಪಕ್ಷಗಳು ಸೂಕ್ಷ್ಮ ಚರ್ಮಿಗಳಲ್ಲ. ಇದೊಂದು ಅರಣ್ಯರೋದನ ಎಂದು ಅವರಿಗೆ ಗೊತ್ತು. ಆದ್ದರಿಂದ ಈಗಲಾದರೂ ಈ ಚುನಾವಣೆ ಪಕ್ಷಗಳ ಮಧ್ಯದ ಸೆಣಸಾಟ ಎಂದು ಭಾವಿಸದೆ ಇದೊಂದು ಮಹಿಳೆ ಪುರುಷರ ಸ್ಪರ್ಧೆ ಎಂದು ಪರಿಗಣಿಸಿ ಯಾವುದೇ ಪಕ್ಷ ಮಹಿಳಾ ಅಭ್ಯರ್ಥಿಯನ್ನು ನಿಲ್ಲಿಸಿದರೆ ಪಕ್ಷಭೇದ ಮರೆತು ಆ ಮಹಿಳೆಯನ್ನು ಗೆಲ್ಲಿಸಲಿ.

ಪಕ್ಷಗಳು ಮಹಿಳೆಯನ್ನು ನಿಲ್ಲಿಸದಿದ್ದರೆ ಪಕ್ಷೇತರ ಮಹಿಳಾ ಅಭ್ಯರ್ಥಿಗೆ ಮತ ನೀಡಲಿ. ಅಂತೂ ಒಂದೇ ಒಂದು ಮತ ಪುರುಷರಿಗೆ ದೊರೆಯದಂತೆ ಮನಸ್ಸು ಮಾಡಿದರೆ ಮಹಿಳೆಯರಿಗೆ ಮೀಸಲು ನೀಡಲು ಯಾವ ಸಂಸತ್ತಿನ ಅನುಮೋದನೆಯೂ ಬೇಡ.

ಇದು ಖಂಡಿತಾ ಪಕ್ಷಗಳ ಕಣ್ಣು ತೆರೆಸಿ ಮಹಿಳೆಯರನ್ನು ಕಡೆಗಣಿಸಿದರೆ ತಮಗೆ ಉಳಿಗಾಲವಿಲ್ಲ ಎಂಬ ಸತ್ಯ ಅರಿವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT