ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸಿಎಂ ಯಡಿಯೂರಪ್ಪ ಭೇಟಿ -ಗಂಟೆಗಟ್ಟಲೆ ಕಾದ ಡಿವಿಎಸ್

Last Updated 14 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೇಟಿಗಾಗಿ ಹಾಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಗಂಟೆಗಟ್ಟಲೆ ಕಾದ ಪ್ರಸಂಗ ಇತ್ತೀಚೆಗೆ ನಡೆದಿದೆ.

ಮನೆಗೆ ಬಂದ ಮುಖ್ಯಮಂತ್ರಿಯನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯಿಸಿದ ಯಡಿಯೂರಪ್ಪ ಅವರು ನಂತರ ತಮ್ಮ ಮನೆಯವರ ಒತ್ತಡಕ್ಕೆ ಮಣಿದು ಭೇಟಿ ಮಾಡಿದರು ಎಂದು ಗೊತ್ತಾಗಿದೆ.

ಇಬ್ಬರ ನಡುವಿನ ಸಂಬಂಧ ಹಳಸಿದ್ದು, ಹೇಳಿದ ಕೆಲಸಗಳನ್ನು ಸಿಎಂ ಮಾಡುತ್ತಿಲ್ಲ ಎನ್ನುವ ಅಸಮಾಧಾನ ಯಡಿಯೂರಪ್ಪ ಅವರಲ್ಲಿದೆ ಎನ್ನಲಾಗಿದೆ.

ಯಡಿಯೂರಪ್ಪ ಅವರ ಬೇಡಿಕೆಗಳು:
* ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ಕೋರ್ ಕಮಿಟಿ ಸದಸ್ಯರನ್ನಾಗಿ ಮಾಡಬೇಕು.

* ಬೆಂಗಳೂರು ನಗರ ಅಥವಾ ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನು ಶೋಭಾ ಅವರಿಗೆ ನೀಡಬೇಕು.

* ಸಚಿವ ಮುರುಗೇಶ ನಿರಾಣಿ ಅವರಿಗೆ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ನೀಡಬೇಕು.

* ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು.

ಇವು ಯಡಿಯೂರಪ್ಪ ಅವರ ಸದ್ಯದ ಬೇಡಿಕೆಗಳು. ಇದಕ್ಕೆ ಸದಾನಂದ ಗೌಡರು ಸ್ಪಂದಿಸಿಲ್ಲ ಎನ್ನುವ ಕಾರಣಕ್ಕೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. 

`ನನ್ನಿಂದ ಮುಖ್ಯಮಂತ್ರಿಯಾದ ನೀವು ನಾನು ಹೇಳಿದ ಕೆಲಸ ಏಕೆ ಮಾಡುತ್ತಿಲ್ಲ. ಹೀಗಾಗಿ ನಿಮ್ಮ ಜತೆ ಮಾತನಾಡುವುದಿಲ್ಲ~ ಎಂದೂ ಅಸಮಾಧಾನ ವ್ಯಕ್ತಪಡಿಸಿ, ಭೇಟಿಯಿಂದ ದೂರ ಉಳಿದಿದ್ದರು ಎಂದು ಗೊತ್ತಾಗಿದೆ.

ನಂತರ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರೇ ಯಡಿಯೂರಪ್ಪ ಅವರನ್ನು ಮನೆ ಮಹಡಿಯಿಂದ ಕರೆತಂದು ಭೇಟಿ ಮಾಡಿಸಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT