ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಪಕ್ಷದ ವಿರುದ್ಧ ನಂಜೇಗೌಡ ಕಿಡಿ!

ಲೋಕಸಭಾ ಚುನಾವಣೆ– 1989
Last Updated 5 ಏಪ್ರಿಲ್ 2014, 5:57 IST
ಅಕ್ಷರ ಗಾತ್ರ

ಹಾಸನ: 198*ರ ಚುನಾವಣೆಯಲ್ಲಿ ಕೆಲವು ಮುಖಂಡರ ವಿರೋಧದ ಹೊರತಾಗಿಯೂ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದುಕೊಂಡು, ಅನುಕಂಪದ ಅಲೆಯಿಂದ ಗೆಲುವು ಸಾಧಿಸಿದ್ದ ಎಚ್‌.ಎನ್‌. ನಂಜೇಗೌಡರು ಕೇಂದ್ರದಲ್ಲಿ ಸಚಿವ ಸ್ಥಾನ ಲಭಿಸಿಲ್ಲ ಎಂಬ ಕಾರಣಕ್ಕೆ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ತಿರುಗಿಬಿದ್ದರು. ಆರಂಭದಲ್ಲಿ ಒಳಗಿಂದೊಳಗೆ ಸಿಟ್ಟು ವ್ಯಕ್ತಪಡಿಸುತ್ತಿದ್ದ ಅವರು ಕೊನೆಗೊಮ್ಮೆ ಎಲ್ಲ ಕಟ್ಟೆಗಳನ್ನೂ ಒಡೆದು ಸಂಸತ್ತಿನ ಅಧಿವೇಶನದಲ್ಲೇ ಠಕ್ಕರ್‌ ವರದಿ ವಿರುದ್ಧ ಹಾಗೂ ಬೋಫೋರ್ಸ್‌ ಹಗರಣದ ಬಗ್ಗೆ ಕಾಂಗ್ರೆಸ್‌ಗೆ ಮುಜುಗರವಾಗುವಂತೆ ಮಾತನಾಡಿದರು. ಪರಿಣಾಮವಾಗಿ ಪಕ್ಷದಿಂದಲೇ ಉಚ್ಛಾಟನೆಗೊಂಡರು.

ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡ ನಂಜೇಗೌಡರು ಆಶ್ರಯ ಪಡೆದಿದ್ದು, ದೇವೇಗೌಡ ನೇತೃತ್ವದ ಸಮಾಜವಾದಿ ಜನತಾ ಪಕ್ಷದಲ್ಲಿ.
ದೇವೇಗೌಡ ಅವರೂ ಆಗ ವಿಧಾನಸಭಾ ಚುನಾವಣೆ ಯಲ್ಲಿ ಸ್ಪರ್ಧಿಸಿ ಸೋತಿದ್ದರು. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್‌ ಅಲೆ ಇತ್ತು. ಜಿಲ್ಲೆಯಲ್ಲೂ ಕಾಂಗ್ರೆಸ್‌ ಬಲಿಷ್ಠವಾಗಿತ್ತು. ಸಾಲದೆಂಬಂತೆ ಹಾಸನದಲ್ಲಿ ನಂಜೇಗೌಡ ವಿರುದ್ಧದ ಅಲೆಯೂ ತೀವ್ರವಾಗಿತ್ತು.

ನಂಜೇಗೌಡರನ್ನು ಉಚ್ಚಾಟಿಸಿದ್ದ ಕಾಂಗ್ರೆಸ್‌ ಆ ಚುನಾವಣೆಯಲ್ಲಿ ಪಕ್ಷದ ಪ್ರಭಾವಿ ನಾಯಕ ಶ್ರೀಕಂಠಯ್ಯ ಅವರಿಗೆ ಟಿಕೆಟ್‌ ನೀಡಿತು. ನಂಜೇಗೌಡರಿಗೆ ಕ್ಷೇತ್ರದಲ್ಲಿ ವಿರೋಧವೂ ಇದ್ದುದರಿಂದ ಶ್ರೀಕಂಠಯ್ಯ ಅವರ ಗೆಲುವು ಅತಿ ಸುಲಭವಾಯಿತು. 1,89,155 ಮತಗಳ ಅಂತರದಲ್ಲಿ ನಂಜೇಗೌಡರನ್ನು ಸೋಲಿಸಿದರು. ಬಿಜೆಪಿಗೆ ಅಭ್ಯರ್ಥಿಯೇ ಇರಲಿಲ್ಲ. ಹಿಂದೆಯೂ ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಎಸ್‌. ನಂಜೇಶಗೌಡ 1.10 ಲಕ್ಷ ಮತಗಳನ್ನು ಗಳಿಸಿದದ್ದರು. ಉಳಿದಂತೆ ಕಣದಲ್ಲಿದ್ದ ಪಕ್ಷೇತರರು ಅಲ್ಪ ಸ್ವಲ್ಪ ಮತಗಳನ್ನು ಮಾತ್ರ ಪಡೆದಿದ್ದರು.

1989ರ ಚುನಾವಣೆ ವಿವರ
*ಒಟ್ಟು ಮತದಾರರು: 10,*9,009

*ಚಲಾವಣೆಯಾದ ಮತ: 7,73,96*
*ಅರ್ಹ ಮತಗಳು: 7,**,73*

*ಎಚ್‌.ಸಿ. ಶ್ರೀಕಂಠಯ್ಯ *.03.286
*ಎಚ್‌.ಎನ್‌. ನಂಜೇಗೌಡ 2,1*,131
*ಎಸ್‌. ನಂಜೇಶಗೌಡ 1.10.121
*ಮ.ಬ. ಚನ್ನಬಸಪ್ಪ 7,862
*ಎಚ್‌.ಬಿ.ಶಿವರಾಮ ಶೆಟ್ಟಿ *,576
*ಎಂ. ತಿಮ್ಮೇಗೌಡ 2,*85
*ಪುಟ್ಟಲಿಂಗೇಗೌಡ 2,273

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT