ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಾಟ ರದ್ದು ಪಡಿಸಿದ ಖೇಮ್ಕ: ವಾದ್ರಾ ಭೂವ್ಯವಹಾರಕ್ಕೆ ಹೊಸ ತಿರುವು

Last Updated 16 ಅಕ್ಟೋಬರ್ 2012, 12:00 IST
ಅಕ್ಷರ ಗಾತ್ರ

ಚಂಡಿಗಡ (ಪಿಟಿಐ): ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ಡಿಎಲ್ ಎಫ್ ಗೆ ಮಾರಲಾದ ಮೂರು ಎಕರೆಗೂ ಹೆಚ್ಚಿನ ಮಾರಾಟವನ್ನು ತಮ್ಮ ಹುದ್ದೆಯಿಂದ ವರ್ಗ ಮಾಡಿದ ಬಳಿಕ ಹರ್ಯಾಣದ ಹಿರಿಯ  ಐಎಎಸ್ ಅಧಿಕಾರಿ ಅಶೋಕ ಖೇಮ್ಕ ಅವರು ರದ್ದು ಪಡಿಸುವುದುರೊಂದಿಗೆ ರಾಬರ್ಟ್ ವಾದ್ರಾ ಅವರಿಗೆ ಸಂಬಂಧಿಸಿದ ಭೂ ವ್ಯವಹಾರಗಳ ಹಗರಣ ಹೊಸ ತಿರುವು ಪಡೆದುಕೊಂಡಿದೆ.

ಹರ್ಯಾಣದ ನಾಲ್ಕು ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯನ ಎಲ್ಲ ಭೂ ವ್ಯವಹಾರಗಳ ತನಿಖೆಗೆ ಆಜ್ಞಾಪಿಸಿದ ಹಿನ್ನೆಲೆಯಲ್ಲಿ ಇನ್ ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಹುದ್ದೆಯಿಂದ ಪದಚ್ಯುತರಾದ ಖೇಮ್ಕ ಅವರ ತಮ್ಮ ವಿರುದ್ಧದ ಈ ಕ್ರಮ ಸಂಪೂರ್ಣ ಅಪ್ರಾಮಾಣಿಕತನದ್ದು ಹಾಗೂ ಹಗರಣಗಳನ್ನು ಬಯಲುಗೊಳಿಸಿದ್ದಕ್ಕಾಗಿ ನೀಡಿದ ಶಿಕ್ಷೆ~ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಚುಚ್ಚಿದ್ದಾರೆ.

~20 ವರ್ಷಗಳ ಸೇವಾ ಅವಧಿಯಲ್ಲಿ ಇದು ನನ್ನ 43ನೇ ವರ್ಗಾವಣೆ~ ಎಂದು ಹೇಳಿರುವ 1991ರ ತಂಡದ ಐಎಎಸ್ ಅಧಿಕಾರಿ ಖೇಮ್ಕ ವಾದ್ರಾ ಅವರು ಡಿಎಲ್ ಎಫ್ ಗೆ 58 ಕೋಟಿ ರೂಪಾಯಿಗಳಿಗೆ ಮಾಡಿದ ಮಾನೆಸರ್-ಶಿಕೋಹ್ ಪುರ ದ 3,5 ಎಕರೆ ಭೂಮಿಯ ಮಾರಾಟವನ್ನು ರದ್ದು ಪಡಿಸಿದ್ದಾರೆ.

ಈ ಮೊದಲೇ ಆರಂಭಿಸಿದ್ದ ತನಿಖೆಯನ್ನು ಅನುಸರಿಸಿ ಖೇಮ್ಕ ಅವರು ಶ್ರೀ ರಾಬರ್ಟ್ ವಾದ್ರಾ ಅವರು ಅಥವಾ ಅವರಿಂದ ಭೂಮಿ ಖರೀದಿಸಿದ ಇಲ್ಲವೇ ಮಾರಾಟ ಮಾಡಿದ ಕಂಪೆನಿಗಳು ನಡೆಸಿದ ಭೂ ವ್ವವಹಾರಗಳಲ್ಲಿ ಕೆಲವು ಆಸ್ತಿಪಾಸ್ತಿಗಳಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಮೌಲ್ಯ ದಾಖಲಿಸಿದ ಆಪಾದನೆಗಳ ಹಿನ್ನೆಲೆಯಲ್ಲಿ ತನಿಖೆಗೆ ಆಜ್ಞಾಪಿಸಿ ಔಪಚಾರಿಕ ಪತ್ರ ನೀಡಿದ್ದರು. ಪತ್ರವು ವಾದ್ರಾ ವಿರುದ್ಧ ಕೇಜ್ರಿವಾಲ್ ಅವರು ಮಾಡಿದ ಕೆಲವು ಆರೋಪಗಳನ್ನು ಪ್ರಸ್ತಾಪಿಸಿತ್ತು.

ಖೇಮ್ಕ ಅವರ ವರ್ಗಾವಣೆಗೆ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆಯೇ ~ವರ್ಗಾವಣೆಯು ಸರ್ಕಾರದ ವಿಶೇಷಾಧಿಕಾರವಾಗಿದೆ~ ಎಂಬುದಾಗಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಪ್ರತಿಪಾದಿಸಿದರು.

ಭೂ ವ್ಯವಹಾರಗಳಿಗೆ ಸಂಬಂಧಿಸಿದ ಆರೋಪಗಳು ಸಾಬೀತಾದಲ್ಲಿ ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ನುಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT