ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ ಎರಡನೇ ವಾರದಲ್ಲಿ ಬಜೆಟ್

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಮಾರ್ಚ್ ಎರಡನೇ ವಾರದಲ್ಲಿ ಬಜೆಟ್ ಮಂಡಿಸುವ ಉದ್ದೇಶವಿದ್ದು, ಇದಕ್ಕಾಗಿ ಎಲ್ಲ ಪೂರ್ವ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಪೂರ್ತಿ ಒಂದು ತಿಂಗಳು ತಯಾರಿ ನಡೆಸಲಿದ್ದೇನೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.

ಆರ್‌ಎಸ್‌ಎಸ್ ಆಯೋಜಿಸಿರುವ `ಹಿಂದೂ ಶಕ್ತಿ ಸಂಗಮ~ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಶುಕ್ರವಾರ ನಗರಕ್ಕೆ ಆಗಮಿಸಿದ್ದ ಅವರು, ವರದಿಗಾರರ ಜೊತೆ ಮಾತನಾಡಿದರು.
 
`ಇದೇ 30ರಿಂದ ಫೆಬ್ರುವರಿ 10ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಬಜೆಟ್‌ಗೆ ಸಂಬಂಧಿಸಿದಂತೆ ಅಲ್ಲಿ ಬರುವ ಸಲಹೆಗಳನ್ನು ಆಲಿಸಲಿದ್ದೇನೆ. ಅಧಿವೇಶನ ಮುಗಿದ ನಂತರ ಒಂದು ತಿಂಗಳು ಬಜೆಟ್ ತಯಾರಿಗಾಗಿ ವಿಭಾಗ ಮಟ್ಟದಲ್ಲಿ ಸಭೆಗಳನ್ನು ಏರ್ಪಡಿಸಿ ಸಂಘ-ಸಂಸ್ಥೆಗಳ ಸಲಹೆ ಪಡೆಯುತ್ತೇನೆ. ಪ್ರತಿ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದೇನೆ~ ಎಂದು ಅವರು ವಿವರಿಸಿದರು.

`ನೀವೇ ಬಜೆಟ್ ಮಂಡಿಸುವೀರಾ~ ಎಂದು ಪ್ರಶ್ನಿಸಿದಾಗ, `ಎಲ್ಲರಲ್ಲಿ ಇಂತಹ ಸಂಶಯ ಏಕೆ ಮೂಡಿದೆಯೋ ನನಗೆ ಗೊತ್ತಿಲ್ಲ. ನಾನಂತೂ ಅದಕ್ಕಾಗಿ ತಯಾರಿ ನಡೆಸಿದ್ದೇನೆ~ ಎಂದು ಉತ್ತರಿಸಿದರು.

 ನಾಯಕತ್ವದ ವಿವಾದದ ಬಗೆಗೆ ಪ್ರಶ್ನಿಸಿದಾಗ, `ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಾನೊಬ್ಬ ಸ್ವಯಂಸೇವಕನಾಗಿ ಆರ್‌ಎಸ್‌ಎಸ್ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ~ ಎಂದರು. `ದೇಶಪ್ರೇಮದ ಆಧಾರದಲ್ಲಿ ಯುವಕರನ್ನು ಒಂದುಗೂಡಿಸುವ ಶಿಸ್ತುಬದ್ಧ ಸಂಘಟನೆ ಆರ್‌ಎಸ್‌ಎಸ್~ ಎಂದೂ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT