ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಡೀವ್ಸ್‌ ವಿಶ್ವದಲ್ಲೇ ಜನಪ್ರಿಯ ಪ್ರವಾಸಿ ತಾಣ

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಾಲೆ (ಐಎಎನ್‌ಎಸ್‌): ಮಾಲ್ಡೀವ್ಸ್‌ ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಕತಾರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ೨೦೧೩ನೇ ಸಾಲಿನ ‘ವಿಶ್ವ ಪ್ರವಾಸಿ ಪ್ರಶಸ್ತಿ’ ಪಡೆದುಕೊಂಡಿದೆ. ಮಾಲ್ಡೀವ್ಸ್‌ ಮೂರನೇ ಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ. ‘ವಿಶ್ವ ಪ್ರವಾಸಿ ಪ್ರಶಸ್ತಿ’ಯು ವಿಶ್ವ ಪ್ರವಾಸೋದ್ಯಮ ವಲಯದ ಆಸ್ಕರ್‌ ಪ್ರಶಸ್ತಿ ಎಂದು ಬಣ್ಣಿಸಲಾಗಿದೆ.

ಇಂಡೋನೇಷ್ಯಾದ ಬಾಲಿ, ವೆಸ್ಟ್‌­ಇಂಡೀಸ್‌ನ ಬಾರ್ಬೊಡಾಸ್‌, ಗ್ರೀಸ್‌ನ ಕುಕ್‌ ದ್ವೀಪ, ಮಡೇರಿಯಾ ದ್ವೀಪ, ಮಾರಿಷಸ್‌, ಸಿಷೇಲ್ಸ್‌, ಇಟಲಿಯ ಸಿಸಿಲಿ, ತಾಂಜಾನಿಯಾದ ಸೇಂಟ್‌ ಲೂಸಿಯಾ ಮತ್ತು ಜಂಜಿ­ಬಾರ್‌ ದ್ವೀಪಗಳೂ ಸಹ ಆಕರ್ಷಕ ಪ್ರವಾಸಿ ದ್ವೀಪಗಳ ಸಾಲಿನಲ್ಲಿದ್ದು, ಪ್ರಶಸ್ತಿಗೆ ಪೈಪೋಟಿ ನಡೆಸಿದವು ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರತಿಷ್ಠಿತ ಪ್ರಶಸ್ತಿಯ ಜತೆಗೆ ಮಾಲ್ಡೀವ್ಸ್‌ನ ಅನೇಕ ರೆಸಾರ್ಟ್‌ಗಳು ಹಲವು ಪ್ರಶಸ್ತಿಗಳನ್ನು ಬಾಚಿ­ಕೊಂಡಿವೆ.

ವಿಶ್ವದ ಪ್ರಮುಖ ಏರ್‌ಪೋರ್ಟ್‌ ದ್ವೀಪ ಪ್ರಶಸ್ತಿಯನ್ನು ಹುಲ್‌ಹುಲೇ ದ್ವೀಪ ಹೋಟೆಲ್‌ ಪಡೆದುಕೊಂಡಿದೆ. ಕನ್‌ರಾಡ್‌ ಮಾಲ್ಡೀವ್ಸ್‌ ರಂಗಾಲಿ ದ್ವೀಪವು ವಿಶ್ವದ
ಪ್ರಸಿದ್ದ ನೀರಿನಲ್ಲಿರುವ ರೆಸಾರ್ಟ್‌ ಪ್ರಶಸ್ತಿಗೆ ಭಾಜನ­ವಾಯಿತು. ವಿಶ್ವದ ಅತ್ಯಂತ ರಮ್ಯ ರೆಸಾರ್ಟ್‌ ಪ್ರಶಸ್ತಿ ಇದೇ ದ್ವೀಪದ ಬಾರೋಸ್‌ಗೆ ಸಂದಿದೆ. ‘ಈ ಶಸ್ತಿಗಳು ಮಾಲ್ಡೀವ್ಸ್‌ನಲ್ಲಿ ಪ್ರವಾಸಿಗರಿಗೆ ವಿಶಿಷ್ಠ ಸೌಲಭ್ಯ ದೊರೆಯುತ್ತವೆ ಎನ್ನುವುದಕ್ಕೆ ಸಾಕ್ಷಿ­ಯಾಗಿದೆ’ ಎಂದು ಮಾಲ್ಡೀವ್ಸ್‌ನ ಮಾರುಕಟ್ಟೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೇಳಿದೆ.

ನವೆಂಬರ್‌ ತಿಂಗಳೊಂದರಲ್ಲಿಯೇ ಹತ್ತು ಲಕ್ಷಕ್ಕೂ ಅಧಿಕ ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದು, ಇದು ಒಂದು ದಾಖಲೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT