ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ತಿ ಟ್ರಸ್ಟ್‌ಗೆ ಬೆಳ್ಳಿ ಸಡಗರ

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ಮಾಸ್ತಿಯವರೇ ಆರಂಭಿಸಿದ `ಜೀವನ ಕಾರ್ಯಾಲಯ~ವು ಮಾಸ್ತಿ ಅವರ ಕಾಲಾನಂತರದಲ್ಲಿ (ಜೂನ್ 1986) `ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್~ ಹೆಸರಿನಲ್ಲಿ ಮುಂದುವರಿದುಕೊಂಡು ಬಂದಿದೆ. ಇಲ್ಲಿ ಮಾಸ್ತಿ ಅವರ ಎಲ್ಲ ಕೃತಿಗಳನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಜೊತೆಗೆ ಪುಸ್ತಕ ಮಾರಾಟ, ಮರುಮುದ್ರಣ ಇತ್ಯಾದಿ ಚಟುವಟಿಕೆಗಳು ನಡೆಯುತ್ತಿವೆ.

ಮಾಸ್ತಿ ಅವರ ಎಲ್ಲ ಕೃತಿಗಳ ಸಂಪೂರ್ಣ ಹಕ್ಕು ಹೊಂದಿರುವ ಎಂ.ವಿ.ಜೆ.ಕೆ. ಟ್ರಸ್ಟ್ `ಮಾಸ್ತಿ ಮನೆ~ಯಿಂದ ಕಾರ್ಯ ನಿರ್ವಹಿಸುತ್ತಿದೆ. ಈಗ ಮಾಸ್ತಿ ಅವರ ಮೂರನೆಯ ಮಗಳು ಎನ್.ಆರ್. ಪದ್ಮಮ್ಮ ಅವರು ಟ್ರಸ್ಟ್‌ನ ಮುಖ್ಯಸ್ಥರಾಗಿದ್ದಾರೆ. ಮಾಸ್ತಿ ಅವರ ಇತರ ಮಕ್ಕಳು ಮತ್ತು ಮೊಮ್ಮಕ್ಕಳು ಧರ್ಮದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 ಈಗ ಈ ಟ್ರಸ್ಟ್‌ಗೆ ಬೆಳ್ಳಿಹಬ್ಬದ ಸಂಭ್ರಮ. ತನ್ನಿಮಿತ್ತ ವಿವಿಧ ಕಾರ್ಯಕ್ರಮ ನಡೆಸುತ್ತಿದೆ.

ಕೃತಿ ಸಮರ್ಪಣೆ
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್‌ನ ಬೆಳ್ಳಿಹಬ್ಬ: ಶನಿವಾರ ಧ್ವನಿಮುದ್ರಿಕೆ ಹಾಗೂ ಮಾಸ್ತಿ ಅವರ ಕೃತಿಗಳ ಸಮರ್ಪಣೆ. ಉದ್ಘಾಟನೆ: ನಾಡೋಜ ಪ್ರೊ. ಜಿ.ವೆಂಕಟಸುಬ್ಬಯ್ಯ. ನಂತರ ಸಂಗೀತ ಕಲಾನಿಧಿ ಡಾ. ಆರ್. ಕೆ.ಶ್ರೀಕಂಠನ್ ಅವರಿಂದ `ಚೇತನ~ ಸರಣಿಯ ಆರು ಧ್ವನಿಮುದ್ರಿಕೆಗಳ ಕುರಿತು ಒಂದೆರಡು ಮಾತು. ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಂದ ಮಾಸ್ತಿ ಕೃತಿಗಳ ನೂತನ ಪ್ರಕಟಣೆ ಕುರಿತು ವಿಶ್ಲೇಷಣೆ. ಗಣೇಶ್ ದೇಸಾಯಿ ಮತ್ತು ವೃಂದದವರಿಂದ ಸುಗಮ ಸಂಗೀತ.

ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಬೆಳಿಗ್ಗೆ 10.  

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT