ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಯಾಮಿ ಎಟಿಪಿ ಟೆನಿಸ್: ಮರ್ರೆಗೆ ಪ್ರಶಸ್ತಿ

Last Updated 1 ಏಪ್ರಿಲ್ 2013, 19:34 IST
ಅಕ್ಷರ ಗಾತ್ರ

ಮಿಯಾಮಿ: ಬ್ರಿಟನ್‌ನ ಆ್ಯಂಡಿ ಮರ‌್ರೆ ಮಿಯಾಮಿ ಎಟಿಪಿ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದರು.

ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಅವರು 2-6, 6-4, 7-6 ಸೆಟ್‌ಗಳಿಂದ ಸ್ಪೇನ್‌ನ ಡೇವಿಡ್ ಫೆರರ್ ವಿರುದ್ಧ ಜಯ ಸಾಧಿಸಿದರು. ಇದು ಆಂಡಿ ಮರ‌್ರೆ ವೃತ್ತಿ ಜೀವನದ 26ನೇ ಎಟಿಪಿ ಪ್ರಶಸ್ತಿಯಾಗಿದೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಮರ್ರೆ, `ಫೆರರ್ ವಿರುದ್ಧ ಜಯಿಸಲು ಹೆಚ್ಚಿನ ಶ್ರಮ ಪಡಬೇಕಾಯಿತು. ಅವರು ಉತ್ತಮ ಹೋರಾಟಗಾರ. ಮುಂದಿನ ದಿನಗಳಲ್ಲಿ ಅವರ ಜೊತೆ ಮತ್ತಷ್ಟು ಹೋರಾಟಕ್ಕೆ ಎದುರು ನೋಡುತ್ತೇನೆ' ಎಂದರು. ಈ ಗೆಲುವಿನೊಂದಿಗೆ ಆ್ಯಂಡಿ ಮರ್ರೆ ರ‌್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT