ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಚುರುಕು: ಕೃಷಿ ಕಾರ್ಯಕ್ಕೆ ಚಾಲನೆ

Last Updated 14 ಜೂನ್ 2012, 9:10 IST
ಅಕ್ಷರ ಗಾತ್ರ

ಕುಂದಾಪುರ: ಕಳೆದ ಎರಡು ಮೂರು ದಿನಗಳಿಂದ ಸುದರಿ ವರ್ಷಧಾರೆ ಬುಧವಾರ ನಿಯಂತ್ರಣಕ್ಕೆ ಬಂದಿದ್ದು, ತಾಲ್ಲೂಕಿನ ವಿವಿಧಡೆ ಕೃಷಿ ಕಾರ್ಯಗಳಿಗೆ ಚಾಲನೆ ದೊರೆತಿದೆ.

ಮೇ ತಿಂಗಳ ಕೊನೆಯ ದಿನಗಳಲ್ಲಿ ಮುಂಗಾರು ಕಾಣಬೇಕಾಗಿದ್ದ ತಾಲ್ಲೂಕಿನ ಜನತೆ ಜೂನ್ ಮೊದಲ ಎರಡನೆಯ ವಾರಕ್ಕೆ ಮುಂದಡಿ ಇಟ್ಟಿದ್ದರೂ, ಬಾರದ ವರುಣ ದೇವನ ಮುನಿಸನ್ನು ಕಂಡು ಜನರು ಆತಂಕಗೊಂಡಿದ್ದರು. 

ಮುಂಗಾರಿನ ಆಗಮನ ವಿಳಂಬವಾಗುತ್ತಿದ್ದನ್ನು ಕಂಡ ಮಲೆನಾಡ ಭಾಗದ ರೈತರು ಗದ್ದೆಗಳಿಗೆ ನೀರನ್ನು ಹಾಯಿಸಿ ಬೀಜಗಳಿಗೆ ತಂಪನ್ನು ಒದಗಿಸಿದ್ದರಿಂದ ಮೊದಲ ಮಳೆಯಲ್ಲಿಯೇ ಗದ್ದೆಗಳಲ್ಲಿ ನಾಟಿ ಕಾರ್ಯಗಳನ್ನು ಮುಗಿಸಿದ್ದಾರೆ. ಕರಾವಳಿ ಭಾಗದಲ್ಲಿ ಮಂಗಳವಾರದಿಂದ ಹಲವು ಕಡೆಗಳಲ್ಲಿ ನೇಜಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ.

ಹಿಂದೆಲ್ಲ ಪಾರಂಪರಿಕ ಕೃಷಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದ ತಾಲ್ಲೂಕಿನ ರೈತಾಪಿ ವರ್ಗ ಇದೀಗ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಂಡು ಕೃಷಿ ಕಾರ್ಯವನ್ನು ಪೂರೈಸುತ್ತಿದ್ದಾರೆ. ಕೂಲಿಯಾಳುಗಳ ಸಮಸ್ಯೆ ಹಾಗೂ ಯುವ ಜನಾಂಗಕ್ಕೆ ಕೃಷಿಯಲ್ಲಿ ಆಸಕ್ತಿ ಕಡಿಮೆ ಇರುವು ದರಿಂದ ಬದಲಾವಣೆ ಅನಿವಾರ್ಯ ಎಂಬುದು ಕೃಷಿಕರ ಅಭಿಪ್ರಾಯ.

ಗದ್ದೆಗಳಲ್ಲಿ ಉಳುಮೆ (ಹೂಟೆ) ಮಾಡಲು ಕೋಣ ಇಲ್ಲವೇ ಎತ್ತುಗಳನ್ನು ಸಾಕುತ್ತಿದ್ದರು. ತಾಲ್ಲೂಕಿನ ಹೆಚ್ಚಿನ ಕಡೆಗಳಲ್ಲಿ ಕೋಣಗಳ ಉಳುಮೆಗೆ ವಿದಾಯ ಹೇಳಿ ಯಾಂತ್ರಿಕ ಉಳುಮೆಯನ್ನು ಮಾಡಲಾಗುತ್ತಿದೆ. ಕಂಬಳದ ಕ್ರೀಡೆಗಳ ಪ್ರತಿಷ್ಠೆಗಾಗಿ ಕೋಣಗಳನ್ನು ಸಾಕುವ ದೊಡ್ಡ ರೈತರನ್ನು ಹೊರತುಪಡಿಸಿ ಸಣ್ಣ ರೈತರು ದೊಡ್ಡ ಬಂಡವಾಳವನ್ನು ಹೂಡಿ ಕೋಣಗಳನ್ನು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

 ಕೋಣಗಳನ್ನು ಖರೀದಿ ಮಾಡುವುದು ಮಾತ್ರವಲ್ಲ. ಅದನ್ನು ನಿಯಮಿತ ಪದ್ದತಿಯಲ್ಲಿ ಸಾಕಣೆ ಮಾಡದೇ ಇದ್ದರೆ ಕೋಣಗಳನ್ನು ಪಳಗಿಸಿ ಉಪಯೋಗ ಪಡೆದುಕೊಳ್ಳುವುದು ದೂರದ ಮಾತು ಎನ್ನುತ್ತಾರೆ ರೈತರು.

ಹಾಲಾಡಿ, ಶಂಕರನಾರಾಯಣ, ಹಳ್ಳಿಹೊಳೆ, ಬೀಜಾಡಿ, ಗೋಪಾಡಿ, ತೆಕ್ಕಟ್ಟೆ ಮುಂತಾದ ಕಡೆಗಳಲ್ಲಿ ನಾಟಿ ಕಾರ್ಯಕ್ಕೆ ಚಾಲನೆ ದೊರೆಕಿದೆ. ಬೈಂದೂರು, ಸಸಿಹಿತ್ಲು, ಬಿಜೂರು, ಉಪ್ಪುಂದ ಮುಂತಾದ ಕಡೆಗಳಲ್ಲಿ ಬಿತ್ತನೆ ಕಾರ್ಯಗಳು ಮುಗಿದಿದ್ದು, ಮಳೆರಾಯ ತಾತ್ಕಾಲಿಕ ವಿಶ್ರಾಂತಿ ಪಡೆದುಕೊಂಡಿ ರುವುದರಿಂದ ಭತ್ತದ ಗಿಡಗಳು ಮೇಲಕ್ಕೆ ಬಂದು ನಾಟಿ ಕಾರ್ಯವನ್ನು ಮುಗಿಸಬಹುದು ಎನ್ನುವ ಚಿಂತನೆಗಳು ಈ ಭಾಗದ ರೈತಾಪಿ ವರ್ಗದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT