ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ 2ನೇ ‘ಪ್ರಾಮಾಣಿಕ ನಗರ’

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ವಿಶ್ವದ ಅತಿ ಪ್ರಾಮಾಣಿಕ ನಗರಗಳ ಪೈಕಿ ಮುಂಬೈಗೆ ಎರಡನೇ ಸ್ಥಾನ ದೊರಕಿರುವುದರಿಂದ ಭಾರತದ ವಾಣಿಜ್ಯ ರಾಜಧಾನಿಯ  ಕಿರಿಟಕ್ಕೆ ಈಗ ಮತ್ತೊಂದು ಗರಿ.

ಫಿನ್ಲೆಂಡ್‌ ರಾಜಧಾನಿ ಹೆಲ್ಸಿಂಕಿ ಪ್ರಾಮಾ­ಣಿಕ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದರೆ, ಪೋರ್ಚು­ಗಲ್‌ ರಾಜಧಾನಿ ಲಿಸ್ಬನ್‌ ಕೊನೆಯ ಸ್ಥಾನ­ದಲ್ಲಿದೆ ಎಂದು ಸಮೀಕ್ಷಾ ವರದಿ­ಯೊಂದು ತಿಳಿಸಿದೆ.

ನಾಲ್ಕು ಉಪಖಂಡಗಳ ವಿವಿಧ ಮಹಾನಗರಗಳಲ್ಲಿ ನೂರಾರು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹಣದ ಪರ್ಸ್‌ಗಳನ್ನು ಬೀಳಿಸಿ ಎಷ್ಟು ಜನರು ಪ್ರಾಮಾಣಿಕವಾಗಿ ವಾಪಸ್‌ ಮಾಡಿ­ದ್ದಾರೆ ಎಂಬುದನ್ನುಪರಿಶೀಲಿಸಲಾಗಿದೆ.


ಯೂರೋಪ್‌, ದಕ್ಷಿಣ ಮತ್ತು ಉತ್ತರ ಅಮೆ­ರಿಕ ಹಾಗೂ ಏಷ್ಯಾ ಖಂಡಗಳ ಪ್ರಮುಖ ನಗರಗಳಲ್ಲಿ ಮೊಬೈಲ್‌ ಫೋನ್‌ ಸಂಖ್ಯೆ, ಕುಟುಂಬದ ಚಿತ್ರ, ಬ್ಯುಸಿನೆಸ್‌ ಕಾರ್ಡ್ ಮತ್ತು ಡಾಲರ್‌ಗಳನ್ನು ಹಾಕಿದ ಒಟ್ಟು 192 ಪರ್ಸ್‌ಗಳನ್ನು ಬೀಳಿಸಲಾಗಿತ್ತು. ಅವು­ಗಳಲ್ಲಿ ಶೇ 47ರಷ್ಟು, ಅಂದರೆ 90 ಪರ್ಸ್‌­ಗಳು ವಾರಸುದಾರರಿಗೆ ವಾಪಸ್‌ ಆಗಿವೆ. ಹೆಲ್ಸಿಂಕಿಯಲ್ಲಿ ಬೀಳಿಸಿದ್ದ 12 ಪರ್ಸ್‌ಗಳ ಪೈಕಿ 11, ಮುಂಬೈಯಲ್ಲಿ 12ರ ಪೈಕಿ 9 ಪರ್ಸ್‌ಗಳು ವಾಪಸಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT