ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಡೂರು ಸಮಸ್ಯೆಯ ಸರಮಾಲೆ

ಗ್ರಾಮ ಸಂಚಾರ
Last Updated 11 ಸೆಪ್ಟೆಂಬರ್ 2013, 10:37 IST
ಅಕ್ಷರ ಗಾತ್ರ

ಆಲೂರು: ತಾಲ್ಲೂಕಿನ ಕಣತೂರು ಗ್ರಾಮ ಪಂಚಾಯ್ತಿಗೆ ಸೇರಿದ ಮುರುಡೂರು ಗ್ರಾಮ ಕಣತೂರು ಕೂಡಿಗೆಯಿಂದ 6ಕಿ.ಮೀ ದೂರದಲ್ಲಿದೆ. ಈ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು ಹಲವಾರು ಸಮಸ್ಯೆಗಳ ಆಗರವಾಗಿದೆ.

ಗ್ರಾಮದಲ್ಲಿ 55ಕುಟುಂಬಗಳು ಇದ್ದು, ಜನಸಂಖ್ಯೆ  280ರಷ್ಟು ಇದೆ. ಗ್ರಾಮದ ಮಧ್ಯಭಾಗದಲ್ಲಿ ಇತಿಹಾಸ ಪ್ರಸಿದ್ಧವಾದ ಚೋಳರ ಕಾಲದ ಈಶ್ವರ ದೇವಾಲಯ ಮತ್ತು ವೀರಭದ್ರಸ್ವಾಮಿ ದೇವಾಲಯಗಳು ಇದ್ದು ಇವು ಶಿಥಿಲಗೊಂಡಿದ್ದು. ಇದರ ಕಾಮಗಾರಿಯನು್ನ ಗ್ರಾಮಸ್ಥರೇ ಕೈಗೊಂಡಿದ್ದಾರೆ. ಗ್ರಾಮದ ಪಕ್ಕದಲ್ಲಿಯೇ ಶಂಖ ತೀರ್ಥ ಹೊಳೆ ಹರಿಯುತಿದ್ದು ಈ ಹೊಳೆಗೆ ಮಾಜಿ ಶಾಸಕ ಬಿ.ಆರ್. ಗುರುದೇವ್‌ರವರು 10ಲಕ್ಷರೂ ವೆಚ್ಚದಲ್ಲಿ ಸೇತುವೆ ಕಟ್ಟಿಸಿದ್ದು ಇದರಿಂದ ಪಕ್ಕದ ಊರುಗಳಿಗೆ ಹೋಗಿ ಬರಲು ಅನುಕೂಲವಾಗಿದೆ.

ಇಲ್ಲಿಯ ನಿವಾಸಿಗಳ ಪ್ರಮುಖ ಉದ್ಯೋಗ ಕೃಷಿಯಾಗಿದ್ದು ಭತ್ತ, ಜೋಳ, ಕಾಫಿ, ಶುಂಠಿ, ಆಲೂಗೆಡ್ಡೆ ಬೆಳೆಯುತ್ತಾರೆ.
ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇದ್ದು ಇನ್ನೂ ಎರಡು ಕೊಠಡಿಗಳು ಬೇಕಾಗಿದೆ, ಅಂಗನವಾಡಿ ಕೇಂದ್ರವಿದೆ. ಕಣತೂರು ಕೂಡಿಗೆಯಿಂದ 3 ಕಿ.ಮೀ. ರಸ್ತೆಗೆ ಕಳೆದ 15ವರ್ಷಗಳ ಹಿಂದೆ ಭೂಸೇನೆಯಿಂದ ರಸ್ತೆ ಡಾಂಬರೀಕಣ ಕಂಡಿದ್ದು ಈಗ ಸಂಪೂರ್ಣವಾಗಿ ಹಾಳಾಗಿದ್ದು.ಅಲ್ಲದೆ ಉಳಿಕೆ ಮೂರು ಕಿ. ಮೀ ಮಣ್ಣಿನ ರಸ್ತೆ ಇದ್ದು ಅದು ಸಹ ಗುಂಡಿಗಳು ಮಳೆಗಾಲದಲ್ಲಿ  ನೀರು ತುಂಬಿಕೊಂಡು ವಾಹನ ಸಂಚಾರಕೆ್ಕ ಬಹು ಕಷ್ಟ.

ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಜ್ಯೋತಿ ಗುರುದೇವ್‌ರವರು 600 ಮೀಟರ್ ಡಾಂಬರೀಕರಣ ರಸ್ತೆ ಮಾಡಿಸಿದ್ದು ತಾಲ್ಲೂಕು ಪಂಚಾಯ್ತಿ ಸದಸ್ಯೆ ರತ್ಮಮ್ಮ ಕಾಂತರಾಜು 50ಸಾವಿರ ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಿ ಕೊಟ್ಟಿದ್ದಾರೆ. ಗ್ರಾಮದಲ್ಲಿ ಸ್ತ್ರೀ ಶಕ್ತಿ ಸಂಘಗಳು ಇದ್ದು ಆರ್ಥಿಕವಾಗಿ ಮುನ್ನಡೆ ಸಾಧಿಸಿವೆ. ಹಾಲಿ ಶಾಸಕ ಎಚ್.ಕೆ. ಕುಮಾರಸ್ವಾಮಿಯವರು ಸಮುದಾಯ ಭವನಕ್ಕೆ ಒಂದು ಲಕ್ಷರೂ ಅನುದಾನ ನೀಡಿದ್ದಾರೆ. ಉಳಿದ ಹಣ ಗ್ರಾಮಸ್ಥರ ನೆರವಿನಿಂದ ಸಮುದಾಯ ಭವನ ನಿರ್ಮಾಣ ಆಗಬೇಕಾಗಿದೆ, ಗ್ರಾಮದಲ್ಲಿ ಚರಂಡಿಗಳು ನಿಮಾರ್ಣವಾಗ ಬೇಕಿದ್ದು ಆಗಬೇಕಾಗಿದೆ.

ಗ್ರಾಮದ ಸುತ್ತಾ 6ಕೆರೆಗಳು ಇದ್ದು ಅದರಲ್ಲಿ 2 ಕೆರೆಯಲ್ಲಿ ನೀರು ಲಭ್ಯವಿದ್ದು ಇನ್ನೂ 4 ಕೆರೆ ನೀರು  ಪಕ್ಕದ ಹೊಳೆಗೆ ಹರಿದು ಹೋಗುತ್ತಿದ್ದು ಇವುಗಳ ಕಾಮಗಾರಿಯನು್ನ ಕೈಗೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT