ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯಕ್ಕೆ ಇನ್ನೂ 2 ಜೋಡಿ ಜೀಬ್ರಾ

Last Updated 26 ಜುಲೈ 2013, 9:27 IST
ಅಕ್ಷರ ಗಾತ್ರ

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಶೀಘ್ರದಲ್ಲೇ ಎರಡು ಜೋಡಿ  ಜೀಬ್ರಾಗಳು ಇಸ್ರೇಲ್‌ನಿಂದ ಬರಲಿವೆ.
ಇಸ್ರೇಲ್ ರಾಜಧಾನಿ ಟೆಲ್‌ಅವಿವ್‌ನ ಮೃಗಾಲಯದಿಂದ ಎರಡು ಗಂಡು ಹಾಗೂ ಎರಡು ಹೆಣ್ಣು ಜೀಬ್ರಾಗಳು ಆಗಮಿಸಿ ಪ್ರಾಣಿಪ್ರಿಯರ ಮನತಣಿಸಲಿವೆ.

ಈಗಾಗಲೇ ಚಾಮರಾಜೇಂದ್ರ ಮೃಗಾಲಯದಲ್ಲಿ ಎಡ್ವರ್ಡ್ ಹಾಗೂ ಎರಿನಾ ಎಂಬ ಗಂಡು ಹಾಗೂ ಹೆಣ್ಣು ಜೀಬ್ರಾಗಳಿವೆ. ಜ

ರ್ಮನಿಯಿಂದ 1980ರಲ್ಲಿ ಬಂದ ಅವುಗಳಿಗೆ ಈಗ 24-25 ವರ್ಷ. `ಅವುಗಳ ಆಯುಷ್ಯ 30. ಅವುಗಳಿಂದ ಸಂತಾನ ಮುಂದುವರಿಯಲಿಲ್ಲ.

ಹೀಗಾಗಿ, ಜೀಬ್ರಾಗಳ ಹುಡುಕಾಟದಲ್ಲಿದ್ದಾಗ ಇಸ್ರೇಲ್‌ನಿಂದ ತರಿಸಲು ಯತ್ನಿಸಿದೆವು. ಈ ಸಂಬಂಧ ಇ-ಮೇಲ್ ಮೂಲಕ ಪತ್ರ ವ್ಯವಹಾರ ನಡೆಯಿತು. ಎರಡು ಜೋಡಿಗಳನ್ನು ಕಳುಹಿಸಲು ಅಲ್ಲಿಯ ಮೃಗಾಲಯ ಒಪ್ಪಿದೆ' ಎಂದು ಸಂಭ್ರಮದಿಂದ ಹೇಳುತ್ತಾರೆ ಮೃಗಾಲಯದ ನಿರ್ದೇಶಕ ಬಿ.ಪಿ. ರವಿ.

`ನಮ್ಮ ಪ್ರಸ್ತಾವವನ್ನು ಕೇಂದ್ರ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ಸೂಚಿಸಿದೆ. ಕೇಂದ್ರೀಯ ಪರಿಸರ ಮತ್ತು ಅರಣ್ಯ ಮಂತ್ರಾಲಯವು ನಿರಪೇಕ್ಷಣಾ ಪತ್ರವನ್ನು ಕೊಡಬೇಕು. ಅಲ್ಲಿಂದ ಪತ್ರ ಬಂದ ಮೇಲೆ ಚೆನ್ನೈಯಲ್ಲಿನ ವನ್ಯಜೀವಿ ಕ್ರೈಮ್ ಬ್ಯೂರೋ ಒಪ್ಪಿಗೆ ಕೊಡಬೇಕು. ಈ ಎಲ್ಲ ಪ್ರಕ್ರಿಯೆಗಳು ಮುಗಿದ ಮೇಲೆ ವಿಮಾನ ಮೂಲಕ ಜೀಬ್ರಾಗಳು ಬರಲಿವೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT