ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲಿ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ಮೆಟ್ರೊ ರೈಲು ಉದ್ಘಾಟನೆಗೆ ಸಜ್ಜಾಗಿದೆ. ಬೆಂಗಳೂರು ನಗರದ ವೈಶಿಷ್ಟ್ಯಕ್ಕೆ ಮತ್ತು ಅದರ ಬೆರಗಿಗೆ ಮತ್ತೊಂದು ಸಾಕ್ಷಿಯಾಗಿದೆ. ಆದರೆ ಮೆಟ್ರೊಗಾಗಿ ಹಲವನ್ನು ಕಳೆದುಕೊಂಡಿದ್ದೇವೆ. ಅಭಿವೃದ್ಧಿಗಾಗಿ ಇವೆಲ್ಲ ಸರ್ವೆಸಾಮಾನ್ಯ ಎಂಬ ಸಮಜಾಯಿಷಿಗಳು ಅಧಿಕಾರಸ್ಥರಿಂದ ಬಂದಿವೆ.

ನೂರಾರು ವರ್ಷಗಳಿಂದಲೂ ಇದ್ದ ಅಂಗಡಿಗಳು, ತಲೆತಲಾಂತರದಿಂದ ವಾಸವಿದ್ದ ವಸತಿ ಕಟ್ಟಡಗಳು, ಸದಾ ಹಸಿರಿನಿಂದ ನಳನಳಿಸುತ್ತಿದ್ದ ಗಿಡಮರಗಳು, ಅಲ್ಲಿ ವಾಸವಿದ್ದ ಪಕ್ಷಿ ಜೀವ ಜಂತುಗಳು  ಮೆಟ್ರೊ ರೈಲಿಗೆ ಬಲಿಯಾಗಿವೆ. ಅದಕ್ಕಾಗಿ ಬಂದ ಪರಿಹಾರ ಮೊತ್ತ ಈಗಾಗಲೆ ಬರಿದಾಗಿದೆ. ನೊಂದ ಮನಸ್ಸುಗಳು ಮತ್ತೆ ಚೈತನ್ಯ ಪಡೆಯಲಾರದಷ್ಟು ಕುಸಿದಿವೆ. ಮೆಟ್ರೊ ಕಾಮಗಾರಿ ಸಾಗುತ್ತಿದ್ದ ಮಾರ್ಗದುದ್ದಕ್ಕೂ ಜನರ ಬದುಕು ಅಕ್ಷರಶಃ ನರಕವಾಗಿದೆ.

ಮೆಟ್ರೊಗಾಗಿ ಬದುಕನ್ನು ಕಳೆದುಕೊಂಡು ಅನೇಕರು ಬೀದಿಪಾಲಾಗಿದ್ದಾರೆ. ಇಂತಹವರಿಗೆ ಬಿಡಿಎ ಅಥವಾ ಕೆ.ಎಚ್.ಬಿ. ಆದ್ಯತೆ ಮೇಲೆ ನಿವೇಶನ ಅಥವಾ ಮನೆಗಳನ್ನು ನೀಡಬಹುದಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT