ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪ್ರವಾಸ ವೆಚ್ಚ ಮಾಹಿತಿಗೆ ನಕಾರ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): `ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತವರ ಸಚಿವರು ಕಳೆದ ಐದು ವರ್ಷಗಳಲ್ಲಿ ಕೈಗೊಂಡ ವಿದೇಶಿ ಪ್ರವಾಸದ ಖರ್ಚು, ವೆಚ್ಚಗಳ ಮಾಹಿತಿಯನ್ನು ಗುಜರಾತ್ ಸರ್ಕಾರ ನೀಡುತ್ತಿಲ್ಲ~ ಎಂದು ವಡೋದರಾ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತೆ ತೃಪ್ತಿ ಷಾ ಎಂಬುವರು ಬುಧವಾರ ಆರೋಪಿಸಿದ್ದಾರೆ.

ಮಹಿಳಾ ಸಶಕ್ತೀಕರಣ ಸಮ್ಮೇಳನಗಳಿಗೆ ಹೆಲಿಕಾಪ್ಟರ್‌ಗಳಲ್ಲಿ ತೆರಳಿದ ಖರ್ಚು, ವೆಚ್ಚಗಳ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ ಎಂದು ಅವರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪ್ರವಾಸಗಳ ಖರ್ಚು, ವೆಚ್ಚಗಳ ಮಾಹಿತಿ ಕೋರಿ 2007ರ ಜುಲೈ 18ರಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಶಾ ಅರ್ಜಿ ಸಲ್ಲಿಸಿದ್ದರು.

ಮೋದಿ ರಾಜ್ಯದಾದ್ಯಂತ ಹಮ್ಮಿಕೊಂಡ ವಿವೇಕಾನಂದ ಯಾತ್ರೆಗೆ ಎಲ್ಲಿಂದ ಹಣ ಬಂತು ಎಂಬುದನ್ನು ಬಹಿರಂಗ ಪಡಿಸಬೇಕು. ಮೋದಿ ಕೈಗೊಂಡ ವಿದೇಶ ಪ್ರವಾಸದ ವಿವರಗಳನ್ನು ನೀಡಬೇಕು. ಇಲ್ಲದಿದ್ದರೆ `ಗೋಲ್‌ಮಾಲ್~ ನಡೆದಿದೆ ಎಂದರ್ಥ ಎಂದು ಮತ್ತೊಬ್ಬ ಆರ್‌ಟಿಐ ಕಾರ್ಯಕರ್ತ ಭರತ್ ಸಿಂಗ್ ಝಾಲಾ ಆರೋಪಿಸಿದ್ದಾರೆ.

ಭೂಹಗರಣ: ಮೋದಿ ನಿರ್ದೋಷಿ
ಅಹಮದಾಬಾದ್ (ಪಿಟಿಐ): ಒಂಬತ್ತು ಭೂ ಮಂಜೂರಾತಿ ಪ್ರಕರಣಗಳ ತನಿಖೆ ಕೈಗೊಂಡಿದ್ದ ನ್ಯಾಯಾಂಗ ಆಯೋಗ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭ್ರಷ್ಟಾಚಾರ ಆರೋಪಗಳಿಂದ ಖುಲಾಸೆಗೊಳಿಸಿದೆ.

ನ್ಯಾಯಮೂರ್ತಿ ಎಂ.ಬಿ. ಷಾ ನೇತೃತ್ವದ ಏಕ ಸದಸ್ಯ ಆಯೋಗ ಈ ಪ್ರಕರಣಗಳಲ್ಲಿ ಮೋದಿ ಪಾತ್ರ ಇಲ್ಲ ಎಂದು ಮಧ್ಯಂತರ ವರದಿಯಲ್ಲಿ ತಿಳಿಸಿದೆ. ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾದ ದಿನವೇ ಸಚಿವ ಸಂಪುಟದ ಮುಂದೆ ವರದಿ ಮಂಡಿಸಲಾಗಿದ್ದು, ಕಾನೂನು ಪ್ರಕಾರವೇ ಉದ್ಯಮಗಳಿಗೆ ಭೂಮಿ ನೀಡಲಾಗಿದೆ ಎಂದು ರಾಜ್ಯದ ವಕ್ತಾರ ಜಯನಾರಾಯಣ ವ್ಯಾಸ್ ತಿಳಿಸಿದ್ದಾರೆ.

ಸೋನಿಯಾಗೆ ಬಿಜೆಪಿ ತಿರುಗೇಟು
ನವದೆಹಲಿ (ಪಿಟಿಐ): ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಹಗರಣ ನಡೆದಿರುವಾಗ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರಗಳ ವಿರುದ್ಧ ಟೀಕೆ ಮಾಡಲು ಸೋನಿಯಾ ಗಾಂಧಿ ಅವರಿಗೆ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT