ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪನಕ್ಕೆ ಗೈರು ಹಾಜರಿ

ಅಕ್ಷರ ಗಾತ್ರ

ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ಹಿರಿಯ ಅನುಭವಿ ಉಪನ್ಯಾಸಕರು ದ್ವಿತೀಯ ಪಿ.ಯು.ಸಿ. ಮೌಲ್ಯಮಾಪನ ಕೆಲಸಕ್ಕೆ ಗೈರು ಹಾಜರಾಗಿ, ಮನೆ ಪಾಠ ಮತ್ತು ಸಿ.ಇ.ಟಿ. ಬೋಧನೆಯ ದಂಧೆಯಲ್ಲಿ ತೊಡಗಿರುವುದು ಅವರ ಕರ್ತವ್ಯ ಹಾಗೂ ಜವಾಬ್ದಾರಿಯ ಬಗ್ಗೆ ಅನುಮಾನ ಉಂಟಾಗುತ್ತದೆ.

ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆಯಿಂದ ಮೌಲ್ಯಮಾಪನ ಕರೆಬಂದರೂ, ಹತ್ತಾರು ವರ್ಷಗಳಿಂದ ಮೌಲ್ಯ ಮಾಪನ ಕಾರ್ಯ ನಿರ್ವಹಿಸದೇ ಟ್ಯೂಷನ್ ದಂಧೆಯಲ್ಲಿ ನಿರತರಾಗಿರುವ ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಪದವಿಪೂರ್ವ ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯನ್ನು ತೋರಿಸುತ್ತದೆ.

ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಕಾಲೇಜುಗಳ ಶಿಕ್ಷಕರು ಮನೆ ಪಾಠ ಮಾಡುವುದು ನಿಷೇಧವಿದ್ದರೂ, ಮಂಡ್ಯ, ಮೈಸೂರು, ಬೆಂಗಳೂರು, ಹಾಸನ ಮುಂತಾದ ಕಡೆ ಅನಧಿಕೃತ ಟ್ಯೂಷನ್ ದಂಧೆ ನಿರಾತಂಕವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕದಿರುವುದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅದಕ್ಷತೆಯನ್ನು ತೋರುತ್ತದೆ.
- ಸುಬ್ರಹ್ಮಣ್ಯ, ಮಂಡ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT