ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಿಹಡಲಗಿ: ಭಾವ್ಯೆಕ್ಯದ ಮದರಸಾಬ್ ಉರುಸ್

Last Updated 4 ಏಪ್ರಿಲ್ 2013, 7:07 IST
ಅಕ್ಷರ ಗಾತ್ರ

ಐಗಳಿ (ಅಥಣಿ): ಸಮೀಪದ ಯಲಿಹಡಲಗಿ ಗ್ರಾಮದ ಮದರಸಾಬ್ ಉರುಸ್ ಭಕ್ತಿ ಶ್ರದ್ಧೆ ಹಾಗೂ ಭಾವ್ಯೆಕ್ಯ ಎದ್ದು ಕಾಣುತ್ತಿತ್ತು.
ಗ್ರಾಮದ ಜನರು ಜಾತಿ ಭೇದ ಮರೆತು ಎಲ್ಲರೂ ಒಗ್ಗೂಡಿ ಮದರಸಾಬ ಉರುಸ್ ಆಚರಿಸಿದರು. ದೇವರಿಗೆ ಹೊಸ ಗಲೀಫ್ ಗದ್ದುಗೆ ಮೇಲೆ ಹಾಕುತ್ತಿರುವುದು ಕಂಡು ಬಂತು. ಪರಸ್ಪರ ಸಕ್ಕರೆಯನ್ನು ಹಂಚಿ ಶುಭಾಶಯ ವ್ಯಕ್ತಪಡಿಸಿದರು. ಉರುಸ್ ಪ್ರಯುಕ್ತ ವಿವಿಧ ಮನ ರಂಜನೆಯ ಕಾರ್ಯಕ್ರಮ ಜರುಗಿದವು.

ಉರುಸ್ ಅಂಗವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಸ್ವಾಗತ ನಾಮಫಲಕಗಳು ರಾರಾಜಿಸುತ್ತಿದ್ದವು. ಮದರಸಾಬ್ ಗದ್ದುಗೆಗೆ ಐನೂರಕ್ಕೂ ಹೆಚ್ಚು ಗಲೀಫಾಗಳು ಉಡುಗೊರೆ ಯಾಗಿ ಬಂದವು.

ಸುಮಾರು ಇಪ್ಪತ್ತೈದು ಕ್ವಿಂಟಲ್ ಸಕ್ಕರೆ ಹಂಚಿದರು ಒಟ್ಟಿನಲ್ಲಿ ಮದರ ಸಾಬ ಉರುಸ್ ಯಲಿಹಡಲಗಿ ಸುತ್ತ ಮುತ್ತಲಿನ ಗ್ರಾಮದ ಜನತೆಯಲ್ಲಿ ಏಕತೆಯ ಸಂಕೇತವಾಗಿ ಪರಿಣಮಿಸಿತು.

ಪರೀಕ್ಷಾ ಕೇಂದ್ರಕ್ಕೆ ಭೇಟಿ
ತೆಲಸಂಗ: ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆ ಯುತ್ತಿರುವ ಇಲ್ಲಿಯ ಮಹಾತ್ಮಾ ಗಾಂಧಿ ಸಂಯುಕ್ತ ಪಿಯು ಕಾಲೇಜು ಕೇಂದ್ರಕ್ಕೆ ಬುಧವಾರ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ. ಜುಟ್ಟನವರ ಭೇಟಿ ನೀಡಿದರು.

ಹಾಲಳ್ಳಿ ಹಾಗೂ ತೆಲಸಂಗ ಪೈಕಿ ತೆಲಸಂಗದಲ್ಲಿ ಒಂದು ಪರೀಕ್ಷಾ ಕೇಂದ್ರ ವನ್ನು ತೆರೆಯಲಾಗಿದೆ. ಪ್ರಶ್ನೆಪತ್ರಿಕೆ ಬಹಿರಂಗ, ನಕಲು ಯಾವುದೇ ಅಹಿ ತಕರ ಘಟನೆ  ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT