ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ತರಬೇತಿಯಲ್ಲಿ ಚಿಣ್ಣರ ರಂಗು

Last Updated 14 ಅಕ್ಟೋಬರ್ 2012, 4:50 IST
ಅಕ್ಷರ ಗಾತ್ರ

ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಕಲಾಭಿಮಾನಿಗಳ ಸಂಘ ಹಮ್ಮಿಕೊಂಡಿದ್ದ ಮಕ್ಕಳ ರಂಗ ತರಬೇತಿ ಕಾರ್ಯಾಗಾರ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ.

40 ದಿನಗಳ ತರಬೇತಿಯಲ್ಲಿ ಅಭಿನಯ, ರಂಗಭೂಮಿ ಸಂಗೀತ, ಸಾಹಿತ್ಯ ಸೇರಿದಂತೆ ಹಲವು ವಿಧದ ರಂಗ ಭೂಮಿ ಆಯಾಮಗಳನ್ನು ತಿಳಿಸಿಕೊಡುವಲ್ಲಿ ಈ ಕಾರ್ಯಾಗಾರ ಯಶಸ್ವಿಯಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾದ ಈ ತರಬೇತಿ ಕೇವಲ ನಟನೆಗೆ ಸಂಬಂಧಿಸಿದ ಅಂಶಗಳನ್ನಷ್ಟೇ ಅಲ್ಲದೆ ಕೆಲವು ಮಾನವೀಯ ಅಂಶಗಳನ್ನು ಬಿತ್ತಲೂ ಕಾರಣವಾಗಿದೆ. ತರಬೇತಿ ಅವಧಿಯಲ್ಲಿ ಮಕ್ಕಳಿಂದಲೇ ಪ್ರದರ್ಶನಗೊಂಡ ಬಿ.ವಿ.ಕಾರಂತರರ `ಪಂಜರ ಶಾಲೆ~ಯ ನಾಟಕ ಪ್ರಸ್ತುತ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಗೇಲಿ ಮಾಡುವಂತೆ. ಸಾಹಿತಿ ಡಾ.ರವೀಂದ್ರನಾಥ ಟ್ಯಾಗೋರ್ ಅವರ `ತೋತಾ ಕಿ ಕಹಾನಿ~ ಎಂಬ ಬಂಗಾಳಿ ಕಾದಂಬರಿಯ ಕಥೆಯನ್ನಾಧರಿಸಿದ ಈ ನಾಟಕ ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳ ಸ್ವಾತಂತ್ರ್ಯ ಹಾನಿ ಮಾಡುತ್ತದೆ. ಇಂತಹ ಶೈಕ್ಷಣಿಕ ವ್ಯವಸ್ಥೆಯಲ್ಲಿರುವ ಪೊಳ್ಳುತನವನ್ನು ಹಾಗೂ ಈ ವ್ಯವಸ್ಥೆಯನ್ನು ವ್ಯಂಗ್ಯವಾಡಿಸುವ ನಾಟಕ ಇದಾಗಿದ್ದು, ಒಟ್ಟಾರೆ ಮಕ್ಕಳ ಮನಸ್ಸನ್ನು ಸೆರೆ ಹಿಡಿಯಲು ಯಶಸ್ವಿಯಾಯಿತು.
ಇಂತಹ ನಾಟಕವನ್ನು ತರಬೇತಿ ಪಡೆದ ಮಕ್ಕಳು ವೃತ್ತಿರಂಗ ಕಲಾವಿದರು ತಲೆದೂಗುವಂತೆ ಅಭಿನಯಿಸಿ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಗಳು ಮಕ್ಕಳ ಮೇಲೆ ಮಾಡುತ್ತಿರುವ ಪರಿಣಾಮಗಳನ್ನು ಪಾಲಕರ ಎದುರು ಅನಾವರಣಗೊಳಿಸಿದರು.

ರಂಗಭೂಮಿಯ ಚಟುವಟಿಕೆಗಳು ಶಾಲಾ ಕಾಲೇಜುಗಳಲ್ಲಿ ಕಡಿಮೆಯಾಗುತ್ತಿರುವ ಇಂದಿನ ಸಂದರ್ಭಗಳಲ್ಲಿ ಕರ್ನಾಟಕ ಕಲಾಭಿಮಾನಿ ಸಂಘ ಈ ರಂಗಚಟುವಟಿಕೆಗಳ ಮೂಲಕ ನಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸುವ ಹಾಗೂ ಮಾನವೀಯ ಸಂಬಂಧಗಳನ್ನು ಬೆಸೆಯುವುದರ ಜೊತೆಗೆ ಕಲೆಯ ಬಗ್ಗೆ ತರಬೇತಿ ನೀಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ತರಬೇತಿ ಪಡೆದ ಮಕ್ಕಳಾದ ಅಜಿತ್, ಆಕಾಶ ಮತ್ತು ಭೂಮಿಕಾ ಯಾಜಿ ಸೇರಿದಂತೆ ಇತರರು ಪ್ರತಿಕ್ರಿಯಿಸುತ್ತಾರೆ.

ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ದೃಷ್ಟಿಯಿಂದ ರಂಗಭೂಮಿ ಅತ್ಯಂತ ಸೂಕ್ತ ಕ್ಷೇತ್ರವಾಗಿದ್ದು, ಇಂತಹ ತರಬೇತಿ ಶಿಬಿರಗಳಿಂದ ತೃಪ್ತಿಯಾಗಿದೆ ಎನ್ನುತ್ತಾರೆ  ಸಂಘದ ಕಾರ್ಯದರ್ಶಿ ಡಾ.ಮೋಹನ್‌ಕುಂಟಾರ. 

ಕರ್ನಾಟಕ ಕಲಾಭಿಮಾನಿ ಸಂಘ ಕಳೆದ 17 ವರ್ಷಗಳಿಂದ ಯಕ್ಷಗಾನ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳಿಗೆ ಸೀಮಿತವಾಗಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಜನಪದ, ರಂಗಕಲೆಗಳ ಪ್ರದರ್ಶನ, ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆ ಸೇರಿದಂತೆ ಹತ್ತು ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಲು ಕಾರಣವಾಗಿದೆ.

                     
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT