ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಕಲಾವಿದರಿಗೆ ಶಿಸ್ತು ಮುಖ್ಯ

Last Updated 14 ಜುಲೈ 2012, 5:05 IST
ಅಕ್ಷರ ಗಾತ್ರ

ದಾವಣಗೆರೆ: ರಂಗಭೂಮಿ ಕಲಾವಿದರಿಗೆ ಶಿಸ್ತು ಮುಖ್ಯ. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಕಲಾವಿದರನ್ನು ಕೊಡುವುದು ಅಸಾಧ್ಯವಾಗಬಹುದು ಎಂದು ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಆತಂಕ ವ್ಯಕ್ತಪಡಿಸಿದರು.

ನಗರದ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಶುಕ್ರವಾರ ಜಿಲ್ಲಾ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಸ್ತು ಕಡಿಮೆಯಾಗುತ್ತಿರುವುದರಿಂದ ಇತರರು ನಮ್ಮನ್ನು ಕೀಳಾಗಿ ನೋಡುವಂತಾಗಿದೆ. ಕಲಾವಿದರು ಅದನ್ನು ಗಮನದಲ್ಲಿರಿಸಬೇಕು ಎಂದರು.

ಗ್ರಾಮೀಣ, ಎಲೆಮರೆಯ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಪರಿಶಿಷ್ಟ ಸಮುದಾಯದವರಿಗೆ ರಾಜ್ಯದ ವಿವಿಧ ಭಾಗಗಳಲಿ 40 ರಂಗತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಮಾಸಾಶನ ಸಿಗದ ಕಲಾವಿದರಿಗೆ ಆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಜುಲೈ 25ರಿಂದ ಪ್ರವಾಸ ಮಾಡಿ ಸಂದರ್ಶನ ನಡೆಸಲಾಗುವುದು. ತಮ್ಮ ಮೂರು ವರ್ಷದ ಅವಧಿ ಮುಗಿಯುವ ಮುನ್ನ ಮಾಸಾಶನವನ್ನು ್ಙ 3 ಸಾವಿರಕ್ಕೆ ಏರಿಸಲು ಪ್ರಯತ್ನಿಸಲಾಗುವುದು. ಕಲಾವಿದರಿಗೆ ಆಶ್ರಯ ಮನೆ  ಒದಗಿಸಲು ಬೇಕಾದ ಪ್ರಯತ್ನ ಮಾಡಬೇಕಿದೆ ಎಂದರು.

ಮೈಸೂರಿನ ರಂಗಾಯಣ ನಿರ್ದೇಶಕ ಹುಲಗಪ್ಪ ಕಟ್ಟಿಮನಿ ಮಾತನಾಡಿ, ರಂಗಾಯಣವನ್ನು ಮೂರುಭಾಗಗಳಾಗಿ ಒಡೆಯುವ ಪ್ರಯತ್ನ ಸಲ್ಲದು. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸಮಾಜ ನಿರ್ಮಾಣ ಮಾಡಬೇಕು. ಹಿಂದೆ ರಂಗಭೂಮಿ ಮೂಲಕ ಕ್ರಾಂತಿ ಮಾಡಲಾಗುತ್ತಿತ್ತು. ಆದರೆ, ಇಂದು ರಂಗಭೂಮಿ ಉಳಿಸಲು ಕ್ರಾಂತಿ ಮಾಡಬೇಕಿದೆ. ಆದ್ದರಿಂದ ನಾಟಕದ ಮೂಲಕ ಸಮಾಜವನ್ನು ಕಟ್ಟಬೇಕಿದೆ ಎಂದರು.

ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಟಿ.ಜಿ. ನರಸಿಂಹಮೂರ್ತಿ ಮಾತನಾಡಿ, ರಾಜ್ಯ ಸರ್ಕಾರವು ಅಕಾಡೆಮಿಯ ಅನುದಾನವನ್ನು ್ಙ 6 ಲಕ್ಷದಿಂದ ್ಙ 50 ಲಕ್ಷಕ್ಕೆ ಹೆಚ್ಚಿಸಿದೆ. ಲಲಿತಕಲೆ, ಸಂಗೀತಕ್ಕೆ ಕರ್ನಾಟಕ ಸರ್ಕಾರ ಕೊಟ್ಟಷ್ಟು ಉತ್ತೇಜನ ಬೇರೆ ಯಾವುದೇ ರಾಜ್ಯದ ಸರ್ಕಾರವೂ ಕೊಟ್ಟಿಲ್ಲ ಎಂದರು.

ಅಕಾಡೆಮಿ ಸದಸ್ಯ ಎ. ಭದ್ರಪ್ಪ, ಉಪ ಮೇಯರ್ ಮಹೇಶ್ ರಾಯಚೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್. ಶಿವರುದ್ರಪ್ಪ, ಪಾಲಿಕೆ ಸದಸ್ಯ ದಿನೇಶ್  ಕೆ. ಶೆಟ್ಟಿ, ಕೆ.ಜಿ. ಶಿವಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT