ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ವಹಿವಾಟು ಶೇ 44 ಹೆಚ್ಚಳ

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ರಫ್ತು ವಹಿವಾಟು ಆಗಸ್ಟ್ ತಿಂಗಳಿನಲ್ಲಿಯೂ ತನ್ನ ಏರಿಕೆ ಗತಿ ಕಾಯ್ದುಕೊಂಡಿದ್ದು, ಶೇ 44ರಷ್ಟು ವಾರ್ಷಿಕ ವೃದ್ಧಿ ದಾಖಲಿಸಿದೆ.

ದೇಶದ ಸಾಂಪ್ರದಾಯಿಕ ಮಾರುಕಟ್ಟೆಗಳಾದ ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ಉದ್ಭವಿಸಿದ್ದರೂ 24 ಶತಕೋಟಿ ಡಾಲರ್‌ಗಳಷ್ಟು (್ಙ 1,20,000 ಕೋಟಿ) ರಫ್ತು ವಹಿವಾಟು ಹೆಚ್ಚಳಗೊಂಡಿದೆ ಎಂದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸಿವೆ.

ಇದೇ ಸಮಯದಲ್ಲಿ ಆಮದು ಕೂಡ ಶೇ 42ರಷ್ಟು ಹೆಚ್ಚಳಗೊಂಡಿದೆ. ಒಟ್ಟು 38 ಶತಕೋಟಿ ಡಾಲರ್‌ಗಳಷ್ಟಾಗಿರುವ ಆಮದು ವಹಿವಾಟಿನಿಂದಾಗಿ (್ಙ 1,90,000 ಕೋಟಿ) ಆಗಸ್ಟ್ ತಿಂಗಳಲ್ಲಿ  ವ್ಯಾಪಾರ ಅಸಮತೋಲನವು (್ಙ 70,000 ಕೋಟಿ) 14 ಶತಕೋಟಿ  ಡಾಲರ್‌ಗಳಷ್ಟಾಗಿದೆ.

ಮುಂಬರುವ ತಿಂಗಳುಗಳಲ್ಲಿ ಇದೇ ಬಗೆಯ ವೃದ್ಧಿ ದರ ನಿರೀಕ್ಷಿಸುವಂತಿಲ್ಲ. ಪಶ್ಚಿಮದ ದೇಶಗಳಲ್ಲಿನ ಅನಿಶ್ಚಿತ ಮಾರುಕಟ್ಟೆ ಹಿನ್ನೆಲೆಯಲ್ಲಿ ರಫ್ತು ವಹಿವಾಟು ಇದೇ ಬಗೆಯಲ್ಲಿ ಗಮನಾರ್ಹವಾಗಿ ಹೆಚ್ಚಳಗೊಳ್ಳುವ ಸಾಧ್ಯತೆಗಳು ಇಲ್ಲ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಅವರು ವಿಶ್ಲೇಷಿಸಿದ್ದಾರೆ.

ಏಪ್ರಿಲ್‌ನಿಂದ ಆಗಸ್ಟ್ ಅವಧಿಯಲ್ಲಿ ದೇಶದ ರಫ್ತು ವಹಿವಾಟು ಶೇ 54ರಷ್ಟು  (134 ಶತಕೋಟಿ ಡಾಲರ್) ವೃದ್ಧಿಯಾಗಿದ್ದರೆ, ಆಮದು ಶೇ 40ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿನ ಒಟ್ಟಾರೆ ವ್ಯಾಪಾರ ಅಸಮತೋಲನವು 55 ಶತಕೋಟಿ ಡಾಲರ್‌ಗಳಷ್ಟಾಗಿದೆ ಎಂದು ಸರ್ಕಾರ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT