ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯದೊಂದಿಗೆ ಕ್ಷಿಪಣಿ ಒಪ್ಪಂದ: ವೆಚ್ಚ ಏರಿಕೆ ಇಲ್ಲ

Last Updated 22 ಡಿಸೆಂಬರ್ 2010, 10:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಭಾರತದ ಸಶಸ್ತ್ರ ಪಡೆಗಳಿಗೆ ರಷ್ಯದಿಂದ ಕ್ರೂಸ್ ಕ್ಷಿಪಣಿಗಳನ್ನು (ಕೆಳಮಟ್ಟದಲ್ಲಿ ಹಾರುತ್ತಾ ನಿರಂತರವಾಗಿ ಗುರಿಯತ್ತ ನಿರ್ದೇಶನ ಪಡೆಯುವ ಕ್ಷಿಪಣಿ) ಪೂರೈಸುವ ಕರಾರಿಗೆ ಬ್ರಹ್ಮೋಸ್ ಅಂತರಿಕ್ಷ ಘಟಕ ಹಾಗೂ ರಷ್ಯದ ಎನ್‌ಪಿಒ ಮಷಿನೊಸ್ಟ್ರೋಯಿನಿಯ ಮಂಗಳವಾರ ಒಳಪಟ್ಟಿವೆ.

‘ಒಪ್ಪಂದದ ಷರತ್ತುರಹಿತ ಜಾರಿಗೆ ಅಗತ್ಯವಾದ ಕ್ರಮಗಳಿಗೆ ಉಭಯ ರಾಷ್ಟ್ರಗಳೂ ಒಪ್ಪಿವೆ. ಇದೇ ಮೊದಲ ಬಾರಿ ಕೈಗೊಂಡಿರುವ ಇಂತಹ ನಿರ್ಧಾರ, ಒಪ್ಪಂದದ ಅವಧಿಯಲ್ಲಿ ಯಾವುದೇ ಬೆಲೆ ಹೆಚ್ಚಳಕ್ಕೆ ಅವಕಾಶ ಆಗದಂತೆ ನೋಡಿಕೊಳ್ಳಲಿದೆ’ ಎಂದು ಬ್ರಹ್ಮೋಸ್ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಅಡ್ಮಿರಲ್ ಗೋರ್ಕ್‌ಶೋವ್’ನಂತಹ ಬಾಹ್ಯಾಕಾಶ ನೌಕೆಯ ಅಭಿವೃದ್ಧಿ ವೆಚ್ಚವನ್ನು 974 ದಶಲಕ್ಷ ಡಾಲರ್‌ನಿಂದ 2.3 ಶತಕೋಟಿ ಡಾಲರ್‌ಗೆ ಹೆಚ್ಚಿಸಿರುವುದೂ ಸೇರಿದಂತೆ ಹಲವು ಒಪ್ಪಂದಗಳಲ್ಲಿ ರಷ್ಯ ಅಂದಾಜು ಬೆಲೆ ಏರಿಸುತ್ತಾ ಬಂದ್ದಿದ್ದರಿಂದ ಭಾರತಕ್ಕೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಪ್ರಮುಖವಾಗಿದೆಶಬ್ದವೇಗಕ್ಕಿಂತ ಐದು ಪಟ್ಟು ಹೆಚ್ಚು ತ್ವರಿತವಾಗಿ ಸಂಚರಿಸುವ 290 ಕಿ.ಮೀ ಸಾಮರ್ಥ್ಯದ ಈ ಕ್ಷಿಪಣಿಯ ಶಬ್ದಾತೀತ ಮಾದರಿಗಳನ್ನು ಅಭಿವೃದ್ಧಿಪಡಿಸುವ ವಾಗ್ದಾನಕ್ಕೆ ಎನ್‌ಪಿಒ ಮಹಾನಿರ್ದೇಶಕ ಹಾಗೂ ವಿನ್ಯಾಸ ಮಹಾನಿರ್ದೇಶಕ ಎ.ಜಿ.ಲಿಯೊನೋವ್, ಬ್ರಹ್ಮೋಸ್ ಮುಖ್ಯಸ್ಥ ಎ.ಶಿವತನು ಪಿಳ್ಳೈ ಸಹಿ ಹಾಕಿದ್ದಾರೆ.

ಪ್ರಸ್ತುತ ಭಾರತದಲ್ಲಿ ನಿರ್ಮಾಣವಾಗುವ ಈ ಬಗೆಯ ಕ್ಷಿಪಣಿಗಳ ತಯಾರಿಕೆಗೆ ಅಗತ್ಯವಾದ ತಂತ್ರಜ್ಞರ ಸಹಕಾರ ನೀಡಲು ಮಾಸ್ಕೊ ಸಂಪೂರ್ಣ ಬೆಂಬಲ ಸೂಚಿಸಿದೆ.
ಕ್ರೂಸ್ ಕ್ಷಿಪಣಿಗಳನ್ನು ಈಗಾಗಲೇ ಭಾರತದ ಸೇನಾ ಪಡೆ ಹಾಗೂ ನೌಕಾ ಪಡೆಯಲ್ಲಿ ಅಳವಡಿಸಲಾಗಿದೆ. ವಾಯು ಪಡೆಯಲ್ಲಿ ಅಳವಡಿಸುವ ಕಾರ್ಯಕ್ಕೆ ಈಗ ಚಾಲನೆ ದೊರೆತಿದೆ.

ಬ್ರಹ್ಮೋಸ್ ಅಂತರಿಕ್ಷ ಘಟಕವು ಎರಡೂ ರಾಷ್ಟ್ರಗಳ ನಡುವಿನ ಜಂಟಿ ಯೋಜನೆಯಾಗಿದೆ. ಭಾರತದ ರಕ್ಷಣಾ ಸಂಶೋಧನಾ ಸಂಸ್ಥೆಯಾದ ಡಿಆರ್‌ಡಿಒ ಹಾಗೂ ರಷ್ಯದ ಎನ್‌ಪಿಒ ಮಷಿನೊಸ್ಟ್ರೋಯಿನಿಯ ಇದನ್ನು ಪ್ರತಿನಿಧಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT