ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕಿಂಗ್ ಶ್ರೇಯಾ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಶ್ರೇಯಾ ಘೋಷಾಲ್ ಮೊದಲ ಸಲ ರಾಕ್ ಸಂಗೀತಕ್ಕೆ ಧ್ವನಿಯಾಗುತ್ತಿದ್ದಾರೆ. ಅಚ್ಚರಿಯಾಯಿತೆ?  ಶ್ರೇಯಾಗೆ ಮಧುರ ಹಾಡುಗಳು ಮಾತ್ರ ಹೇಳಿ ಮಾಡಿಸಿದಂತಿರುತ್ತವೆ. ಅವರ ಕಂಠ ಮಾಧುರ್ಯದಲ್ಲಿರುವ ಶಾಂತ ಹರಿವು ರಾಕ್‌ನ ಅಬ್ಬರದಲ್ಲಿ ಹೇಗಿರಬಹುದು ಎಂದೆಲ್ಲ ಯೋಚಿಸುತ್ತಿದ್ದರೆ, ನವೆಂಬರ್‌ವರೆಗೂ ಕಾಯಬೇಕು.

ಶ್ರೇಯಾ ಘೋಷಾಲ್ `ಪ್ರೇಮ್ ಮಾಯಿ~ ಚಿತ್ರಕ್ಕಾಗಿ ರಾಕ್ ಸಂಗೀತದಲ್ಲಿ ಹಾಡಲು ಒಪ್ಪಿಕೊಂಡಿದ್ದಾರೆ. ಮೊದಮೊದಲು ಅವರು ಹಿಂಜರಿದರೂ ಸಂಗೀತ ನಿರ್ಮಾಪಕ ಅಭಿಷೇಕ್ ರೇ ಒತ್ತಾಯಕ್ಕೆ ಶ್ರೇಯಾ ಒಪ್ಪಿದ್ದಾರೆ.

`ಪ್ರೇಮ್ ಮಾಯಿ~ ಚಿತ್ರದಲ್ಲಿ ಮಾಯಿ (ತಾಯಿ)ಯ ಪಾತ್ರವನ್ನು ಆಶಾ ಭೋಸ್ಲೆ ನಿರ್ವಹಿಸುತ್ತಿದ್ದಾರೆ. ಕೇವಲ ತಮ್ಮ ಹಾಡುಗಳ ವೀಡಿಯೊದಲ್ಲಿ ಕಾಣಿಸಿಕೊಳ್ಳುತ್ತಿದ್ದ ಆಶಾಜಿ ಇದೇ ಮೊದಲ ಸಲ ಹಿರಿತೆರೆಯಲ್ಲಿ ನಟಿಸುತ್ತಿದ್ದಾರೆ.

ಕೌಟುಂಬಿಕ ಚಿತ್ರ ಇದಾಗಿದ್ದು, ಎಲ್ಲರನ್ನೂ ಭಾವುಕಗೊಳಿಸುವ ಗುಣ ಹೊಂದಿದೆ ಎಂದು ಆಶಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ರಾಕ್ ಗೀತೆಗೆ ಶ್ರೇಯಾ ಹಾಡಲೇಬೇಕು ಎಂಬುದು ಅಭಿಷೇಕ್ ಹಟವಾಗಿತ್ತಂತೆ. `ಪಲ್ಚಿನ್~ ಎಂಬ ಹಾಡು ಜನಪ್ರಿಯವಾಗಲಿದೆ ಎಂಬುದು ಅವರ ವಿಶ್ವಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT