ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಆಟಗಾರರ ಬೆನ್ನು ತಟ್ಟಿದ ಸುಬ್ಬಯ್ಯ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಆದ ಕರ್ನಾಟಕ ತಂಡವನ್ನು `ಹಾಕಿ ಕರ್ನಾಟಕ~ ಕಾರ್ಯದರ್ಶಿ ಎ.ಬಿ.ಸುಬ್ಬಯ್ಯ ಶ್ಲಾಘಿಸಿದ್ದಾರೆ.

`ಇದೊಂದು ಅತ್ಯುತ್ತಮ ಪ್ರಯತ್ನ. ಚಾಂಪಿಯನ್‌ಷಿಪ್‌ನ ಪ್ರತಿ ಪಂದ್ಯದಲ್ಲಿ ಮನಮೆಚ್ಚುವಂತಹ ಪ್ರದರ್ಶನ ತೋರಿದ್ದಾರೆ. ಅದರಲ್ಲೂ ಯುವ ಆಟಗಾರ ಎಸ್.ಕೆ.ಉತ್ತಪ್ಪ ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆದರು~ ಎಂದು ಅವರು ತಿಳಿಸಿದರು.

`ಫೈನಲ್‌ನಲ್ಲೂ ನಮ್ಮ ತಂಡ ಗೆಲ್ಲಬಹುದಾಗಿತ್ತು. ಆದರೆ ಅವತ್ತು ಅದೃಷ್ಟ ನಮ್ಮ ಕಡೆ ಇರಲಿಲ್ಲ. ಲಭಿಸಿದ ಹಲವು ಅವಕಾಶಗಳನ್ನು ನಾವು ತಪ್ಪಿಸಿಕೊಂಡೆವು. ಅದೇನೆ ಇರಲಿ, ಪ್ರತಿ ಆಟಗಾರರು ಕಠಿಣ ಪ್ರಯತ್ನ ಹಾಕಿ ಆಡಿದ್ದಾರೆ. ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯ ದಿಲೀಪ್ ಟರ್ಕಿ ಅವರು ಡಿಫೆಂಡರ್ ಉತ್ತಪ್ಪ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತಪ್ಪ ಅವರಿಗೆ ಉತ್ತಮ ಭವಿಷ್ಯವಿದೆ. ಹಾಗೇ, ವಿ.ಆರ್.ರಘುನಾಥ್ ಹಾಗೂ ಭರತ್ ಚೆತ್ರಿ ಕೂಡ ಗಮನಾರ್ಹ ಆಟವಾಡಿದರು~ ಎಂದು ಭಾರತ ತಂಡದ ಮಾಜಿ ಗೋಲ್ ಕೀಪರ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಬೋಪಯ್ಯ ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT