ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಟ್ಟದ ಹೋಮಿಯೋಪಥಿ ಸಮ್ಮೇಳನ

Last Updated 8 ಫೆಬ್ರುವರಿ 2012, 8:25 IST
ಅಕ್ಷರ ಗಾತ್ರ

ವಿಜಾಪುರ: ಹೋಪಿಯೋಪಥಿ ವೈದ್ಯರ ರಾಜ್ಯಮಟ್ಟದ ಸಮ್ಮೇಳನವನ್ನು ಇದೇ 26ರಂದು ನಗರದಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ಸಂಘಟನಾ ಸಮಿತಿಯ ಅಧ್ಯಕ್ಷ ಡಾ.ಎಸ್.ಬಿ. ಮಿರಜಕರ, ಉಪಾಧ್ಯಕ್ಷ ಡಾ.ರವಿ ಕೋಟೆಣ್ಣವರ ತಿಳಿಸಿದರು.

ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ 300 ಜನ ಹೋಮಿಯೋಪಥಿ ವೈದ್ಯರು ಹಾಗೂ 200 ಜನ ಹೋಮಿಯೋಪಥಿ ವೈದ್ಯ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ದಿನನಿತ್ಯದ ಆರೋಗ್ಯ ಸಮಸ್ಯೆಗಳಿಗೆ ಹೋಮಿಯೋಪಥಿ~ ವಿಷಯದ ಮೇಲೆ ನಡೆಯುವ ಈ ಸಮ್ಮೇಳನದಲ್ಲಿ ರಾಜ್ಯದ ಹಿರಿಯ ಹೋಮಿಯೋಪಥಿ ಪರಿಣಿತ ರಾದ ಬೆಂಗಳೂರಿನ ಡಾ.ವೀರಬ್ರಹ್ಮಾ ಚಾರಿ, ಬೆಳಗಾವಿಯ ಡಾ.ಶ್ರೀವತ್ಸನ್, ಡಾ.ಎಂ.ಎಸ್. ಮುರಗೋಡ, ಮೂಡು ಬಿದಿರೆಯ ಡಾ.ವಿ.ವಿ. ವೆರ್ಣೇಕರ ಉಪನ್ಯಾಸ ನೀಡುವರು ಎಂದರು.

ಶಾಸಕ ಅಪ್ಪು ಪಟ್ಟಣಶೆಟ್ಟಿ ಸಮ್ಮೇಳನ ಉದ್ಘಾಟಿಸಲಿದ್ದು, ಅಲ್-ಅಮೀನ್ ಸಂಸ್ಥೆಯ ಡೀನ್ ಡಾ.ಬಿ.ಎಸ್. ಪಾಟೀಲ, ಡಿಎಚ್‌ಒ ಡಾ.ಗಲಗಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.

ಜಿಲ್ಲೆಯಲ್ಲಿ 80 ಜನ ಹಾಗೂ ರಾಜ್ಯದಲ್ಲಿ 15 ಸಾವಿರ ಜನ ಹೋಮಿಯೋಪಥಿ ವೈದ್ಯರಿದ್ದಾರೆ. ಹೋಮಿಯೋಪಥಿಯು ಪರಿಸರ ದೊಂದಿಗೆ ಅನುಸರಿಸಿಕೊಂಡು ಹೋಗುವ ಹಲವಾರು ತತ್ವಾಧಾರಗಳ ಮೇಲೆ ರೂಪಿತವಾಗಿದೆ. ಹೋಮಿಯೋ ಪಥಿ ಔಷಧಿಗಳು ತ್ವರಿತವಾಗಿ, ಸೌಮ್ಯವಾಗಿ ಯಾವುದೇ ದುಷ್ಪರಿಣಾ ಮವಿಲ್ಲದೆ ಸಂಪೂರ್ಣವಾಗಿ ರೋಗ ನಿರ್ಮೂಲನೆ ಮಾಡುತ್ತದೆ. ಇದು ಪರ್ಯಾಯ ವೈದ್ಯ ಪದ್ಧತಿ ಅಲ್ಲ. ಇವತ್ತಿನ ಜಗತ್ತಿಗೆ ಬೇಕಾದ ನಿಜವಾದ ವೈದ್ಯ ಪದ್ಧತಿ ಎಂದು ಅವರು ಹೇಳಿದರು.

ಈ ಪದ್ಧತಿಯಲ್ಲಿ ಶಿಶುಗಳಿಂದ ವಯೋವೃದ್ಧರವರೆಗೆ ಎಲ್ಲ ರೋಗಗ ಳನ್ನು ನಿರ್ಮೂಲನೆ ಮಾಡಬ ಹುದು ಮತ್ತು ತಡೆಗಟ್ಟಬಹುದು ಎಂದರು.

ಡಾ.ವಿದ್ಯಾ ಪತ್ತಾರ, ಡಾ.ಮುದಸ್ಸರ್, ಡಾ.ಸಮೀನಾ, ಡಾ.ಲೀನಾ ಮೆಹತಾ, ಡಾ.ಶಾಹೀರ್ ಮುಜಾವರ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT