ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಸ್ಪರ್ಧಿಗಳಿಗೆ ನಿರಾಸೆ

ಪ್ರವೇಶ ಪತ್ರ ಕಳುಹಿಸುವಲ್ಲಿಯೇ ಪ್ರಮಾದ
Last Updated 10 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ರಾಂಚಿಗೆ ತೆರಳಿದ್ದ ಅಥ್ಲೀಟ್‌ಗಳಲ್ಲಿ ಹಲವರು ಸ್ಪರ್ಧಿಸಲಾಗದೆ ನಿರಾಸೆಗೊಂಡಿದ್ದಾರೆ.

‘ಸ್ಕೂಲ್‌ ಗೇಮ್ಸ್ ಫೆಡರೇಷನ್‌ ಆಫ್‌ ಇಂಡಿಯಾ’ ವತಿಯಿಂದ ನಡೆಯುತ್ತಿ ರುವ ಈ ಕೂಟದಲ್ಲಿ 14ವರ್ಷ, 17 ವರ್ಷ ಮತ್ತು 19 ವರ್ಷದೊಳಗಿನ ಬಾಲಕ, ಬಾಲಕಿಯರನ್ನು ಒಳಗೊಂಡ ಒಟ್ಟು 150ಕ್ಕೂ ಹೆಚ್ಚು ಮಂದಿಯ ಕರ್ನಾಟಕ ತಂಡ ಭಾಗವಹಿಸುತ್ತಿದೆ.

ಆದರೆ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗಳಿಂದ ರಾಂಚಿಯ ರಾಷ್ಟ್ರೀಯ ಕೂಟದ ಸಂಘಟಕರಿಗೆ ಕಳುಹಿಸಲಾಗಿ ರುವ ರಾಜ್ಯ ತಂಡದ ಸ್ಪರ್ಧಿಗಳ ವಿವರಗಳಲ್ಲಿ ತಪ್ಪುಗಳಿದ್ದುದರಿಂದ   ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿ ಸ್ಪರ್ಧಿಗಳು ತಮ್ಮ ನೆಚ್ಚಿನ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಾಗದೆ ನಿರಾಸೆ ಗೊಂಡಿದ್ದಾರೆ.

ಶುಕ್ರವಾರ ನಡೆದ ಬಾಲಕರ 4x400ಮೀ. ರಿಲೆ ಮತ್ತು 4x100ಮೀ. ರಿಲೆ ಓಟದ ಸ್ಪರ್ಧೆಗಳಿಗೆ ಕೇವಲ ಮೂವರು ಓಟಗಾರರ ಹೆಸರನ್ನಷ್ಟೇ ಕಳುಹಿಸಿರುವುದರಿಂದ ತಂಡ ಸ್ಪರ್ಧೆಗಿಳಿಯಲಾಗಲಿಲ್ಲ. ಬೆಂಗಳೂರಿನ ಕಚೇರಿಯಿಂದ ಈ ಸ್ಪರ್ಧೆಗೆ ನಾಲ್ಕು ಮಂದಿಯ ಪ್ರವೇಶ ಪತ್ರವನ್ನು ಕಳುಹಿಸಬೇಕಾಗಿತ್ತು.

ಅದೇ ರೀತಿ 110ಮೀ. ಹರ್ಡಲ್ಸ್‌ನಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದವರ ಪ್ರವೇಶವನ್ನು ಕಳುಹಿಸಿರಲಿಲ್ಲ. ಆದರೆ ಇದರಲ್ಲಿ ಎರಡನೇ ಸ್ಥಾನ ಪಡೆದವರಿಗೆ ಅವಕಾಶ ಸಿಕ್ಕಿತ್ತು.

ಅವಕಾಶ ವಂಚಿತರಾದ ಕೆಲವು ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಇಂತಹ ಹಲವು ಅವ್ಯವಸ್ಥೆ ಬಗ್ಗೆ ನೊಂದು ನುಡಿದರು.

ನಿರಾಕರಣೆ: ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮಹಮ್ಮದ್‌ ಮೊಹಿಸಿನ್‌ ಅವರನ್ನು ಸಂಪರ್ಕಿಸಿದಾಗ ‘ಅಂತಹ ಯಾವುದೇ ಘಟನೆ ನಡೆದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT