ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಖೋ–ಖೋ ಪಂದ್ಯಾವಳಿಗೆ ಭರದ ಸಿದ್ಧತೆ

Last Updated 11 ಸೆಪ್ಟೆಂಬರ್ 2013, 9:20 IST
ಅಕ್ಷರ ಗಾತ್ರ

ಗುಳೇದಗುಡ್ಡ: ಸಮೀಪದ ಶಿರೂರ ಗ್ರಾಮದಲ್ಲಿ ಪ್ರಸಕ್ತ ಸಾಲಿನ ಬೆಳಗಾವಿ ವಿಭಾಗ ಹಾಗೂ ರಾಜ್ಯ ಮಟ್ಟದ ಪ್ರಾಥಮಿಕ, ಪ್ರೌಢ ಶಾಲೆಗಳ ಖೋ ಖೋ ಕ್ರೀಡಾಕೂಟ ಇದೇ 14ರಿಂದ ನಡೆಯಲಿದೆ.

ಜಿ.ಪಂ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಸರಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಮತ್ತು ಗ್ರಾಮಸ್ಥರ ಸಹಯೋಗದೊಂ­ದಿಗೆ ಕ್ರೀಡಾಕೂಟ ನಡೆಯಲಿದ್ದು, ಅದರ ಪೂರ್ವ ಸಿದ್ಧತೆ ಗ್ರಾಮದ ಸಿದ್ಧೇಶ್ವರ ಪ್ರೌಢಶಾಲಾ ಮೈದಾನದಲ್ಲಿ ಭರದಿಂದ ನಡೆದಿದೆ ಎಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಂ.ಎಸ್. ರಡ್ಡೇರ ಸುದ್ದಿಗಾರರಿಗೆ ತಿಳಿಸಿದರು.

ಬೆಳಗಾವಿ ವಿಭಾಗ ಹಾಗೂ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಖೋ ಖೋ ಕ್ರೀಡಾಕೂಟಕ್ಕೆ ಒಟ್ಟು ನಾಲ್ಕು ಮೈದಾನವನ್ನು ಸಿದ್ಧಪಡಿ­ಸಲಾಗಿದೆ. ರಾಜ್ಯಮಟ್ಟದ ಪಂದ್ಯಾವಳಿ­ಯಲ್ಲಿ ಪ್ರಾಥಮಿಕ ಶಾಲೆಯ 14 ವರ್ಷದ ವಯೋಮತಿ 14 ತಂಡಗಳು, 17 ವರ್ಷದ ಪ್ರೌಢ ಶಾಲೆಗಳ ವಯೋಮತಿ ಕ್ರೀಡಾ ವಿವಿಧ ತಂಡಗಳು ಸೇರಿದಂತೆ ಒಟ್ಟು 540 ಬಾಲಕಿ –ಬಾಲಕರ  ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 60 ಜನ ನಿರ್ಣಾಯಕರು, 50 ಸಹಾಯಕರು, 20 ಅಧಿಕಾರಿಗಳು, 200 ಸ್ವಯಂ ಸೇವಕರು ಹಾಗೂ ತಾಲ್ಲೂಕಿನ 20ಕ್ಕೂ ಹೆಚ್ಚು ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯ ನಿರ್ವಹಿಸಲಿದ್ದಾರೆ. ಮಹಿಳಾ ಕ್ರೀಡಾ ಪಟುಗಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಸತಿ ವ್ಯವಸ್ಥೆ. ಬಾಲಕ ಕ್ರೀಡಾಪಟುಗಳಿಗೆ ಆಶ್ರಯ ಕಾಲೊನಿ ಪ್ರಾಥಮಿಕ ಶಾಲೆ. ಕಿತ್ತೂರ ಚನ್ನಮ್ಮ ಶಾಲೆಯಲ್ಲಿ. ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು.

ವಿಭಾಗ ಮಟ್ಟದ ಬಾಗಲಕೋಟೆ, ವಿಜಾಪುರ, ಬೆಳಗಾವಿ, ಗದಗ, ಹಾವೇರಿ, ಚಿಕ್ಕೋಡಿ, ಕಾರವಾರ, ಶಿರಸಿ ಒಟ್ಟು 9 ಜಿಲ್ಲೆಗಳ ಕ್ರೀಡಾಪಟುಗಳು ಮತ್ತು ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಬೆಳಗಾವಿ, ಮೈಸೂರ, ಬೆಂಗಳೂರು, ಗುಲಬರ್ಗಾ ವಿಭಾಗ ಮಟ್ಟದಲ್ಲಿ ವಿಜೇತರಾದ 16 ತಂಡಗಳು 240ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ.ಮಾಚಾ ಹೇಳಿದರು.

14ರಂದು ನಡೆಯುವ ಬೆಳಗಾವಿ ವಿಭಾಗ ಹಾಗೂ ರಾಜ್ಯ ಮಟ್ಟದ ಕ್ರೀಡಾಕೋಟದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ, ಶಾಸಕ ಎಚ್.ವೈ. ಮೇಟಿ, ಜಿ.ಪಂ. ಅಧ್ಯಕ್ಷೆ ಶಾಂತಾ ಭೂಷಣ್ಣವರ, ಉಪಾಧ್ಯಕ್ಷ ಕೃಷ್ಣಾ ಓಗೇನ್ನವರ, ಜಿ.ಪಂ. ಸದಸ್ಯರು, ತಾ.ಪಂ. ಅಧ್ಯಕ್ಷರು, ಸದಸ್ಯರು ಡಿ.ಡಿ.ಪಿ.ಐ ಎ.ಎಂ. ಮಡಿವಾಳರ, ಬಿ.ಇ.ಓ. ಎನ್.ವೈ. ಕುಂದರಗಿ, ಜಿಲ್ಲಾ ದೈಹಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಎಂ.ಡಿ. ವಾಲಿ, ಶಿರೂರ ಗ್ರಾ. ಪಂ. ಅಧ್ಯಕ್ಷರು, ಸದಸ್ಯರು ಉಪಸ್ಥಿತರಿರುವರು ಎಂದು ಹೇಳಿದರು.

ಮೈದಾನ ಸಿದ್ಧಪಡಿಸುವ ಕಾರ್ಯ­ದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ. ರಾಂಪೂರ, ಎಚ್.ಎಸ್. ಗುಲಗಂಜಿ, ಎಸ್.ಎ. ಮೆಟಗುಡ್ಡ, ಎಸ್.ಎಫ್. ಬಾರಡ್ಡಿ, ಎಸ್.ಎಂ. ಹುಯಿಲಗೋಳ, ಎಚ್.ಬಿ. ಕೂಳ್ಳಪ್ಪನವರ, ಆರ್.ಎಸ್. ಹಳ್ಳದ, ರವಿ ಗಿರಿಜಾ, ಕುಮಾರ ನಡುವಿನಮನಿ, ಶಿವು ಕಾಮರಡ್ಡಿ, ನಾಗೇಶ ಬೂಂಬಲೆ, ಸಂಗಪ್ಪ ಚಿತ್ತರಗಿ, ಜಗದೀಶ ಬಾರಡ್ಡಿ, ಗ್ರಾ.ಪಂ. ಸದಸ್ಯರು ಪೂರ್ವ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT