ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: ಶೇ 7ರಷ್ಟು ಸದಸ್ಯರಿಗೆ ಅಪರಾಧ ಹಿನ್ನೆಲೆ

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಸಭೆಯ ಶೇಕಡ 7ರಷ್ಟು ಸದಸ್ಯ­ರು ಗಂಭೀರ ಸ್ವರೂಪದ ಕ್ರಿಮಿನಲ್‌ ಪ್ರಕರಣಗಳನ್ನು ಮತ್ತು ಶೇ 17ರಷ್ಟು ಸದಸ್ಯರು ಸಾಧಾರಣ ಸ್ವರೂಪದ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿ­ದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಕಣ್ಗಾವಲು (ಎನ್‌ಇಡಬ್ಲ್ಯೂ) ಮತ್ತು ಅಸೋಸಿ­ಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಂಸ್ಥೆಗಳು ನಡೆಸಿದ ಜಂಟಿ ಸಮೀಕ್ಷೆ ಬಹಿರಂಗಪಡಿಸಿದೆ.

ರಾಜ್ಯಸಭೆಯ 12 ಸ್ಥಾನಗಳಿಗೆ ರಾಷ್ಟ್ರಪತಿಗಳು ಸದಸ್ಯರ ನಾಮನಿರ್ದೇಶನ ಮಾಡುತ್ತಾರೆ. ಈ 12 ಮಂದಿ ತಮ್ಮ ಆಸ್ತಿ, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಿಲ್ಲ. ಜಂಟಿ ಸಮೀಕ್ಷೆಯು ಒಟ್ಟು 227 ರಾಜ್ಯಸಭಾ ಸದಸ್ಯರ ಪ್ರಮಾಣಪತ್ರಗಳನ್ನು ಪರಿಶೀಲನೆಗೆ ಒಳಪಡಿಸಿದೆ.

ಪರಿಶೀಲನೆಗೆ ಒಳಪಟ್ಟ ಸದಸ್ಯರ ಪೈಕಿ, ಕಾಂಗ್ರೆಸ್‌ನ ಸದಸ್ಯರ ಸರಾಸರಿ ಆಸ್ತಿ ₨ 16.74 ಕೋಟಿ. ಬಿಎಸ್‌ಪಿ ಸದಸ್ಯರ ಸರಾಸರಿ ಆಸ್ತಿ ₨ 13.82 ಕೋಟಿ. ಬಿಜೆಪಿ ಮತ್ತು ಸಿಪಿಎಂ ಪಕ್ಷಗಳ ಸದಸ್ಯರ ಸರಾಸರಿ ಆಸ್ತಿ ಕ್ರಮವಾಗಿ ₨ 8.51 ಕೋಟಿ ಮತ್ತು ₨ 39.65 ಲಕ್ಷ. ಎಲ್ಲ ಪಕ್ಷಗಳ ಸದಸ್ಯರ ಸರಾಸರಿ ಆಸ್ತಿ ₨ 20 ಕೋಟಿ.

ಶ್ರೀಮಂತ ಸದಸ್ಯರ ಪಟ್ಟಿಯಲ್ಲಿ ಜೆಡಿ(ಯು) ಪಕ್ಷದ ಮಹೇಂದ್ರ ಪ್ರಸಾದ್‌ (₨ 683 ಕೋಟಿ ಆಸ್ತಿ), ಪಕ್ಷೇತರ ಸದಸ್ಯ ವಿಜಯ್‌ ಮಲ್ಯ (₨ 615 ಕೋಟಿ) ಮತ್ತು ಸಮಾಜವಾದಿ ಪಕ್ಷದ ಜಯಾ ಬಚ್ಚನ್‌ (₨ 493 ಕೋಟಿ) ಮೊದಲ ಮೂರು ಸ್ಥಾನ ಪಡೆದುಕೊಂಡಿದ್ದಾರೆ. ಕಡಿಮೆ ಆಸ್ತಿ ಹೊಂದಿರುವ ಸದಸ್ಯರ ಪೈಕಿ, ಬಿಜೆಪಿಯ ಅನಿಲ್‌ ದವೆ (₨ 2.75 ಲಕ್ಷ), ತೃಣಮೂಲ ಕಾಂಗ್ರೆಸ್‌ನ ಮೊಹಮ್ಮದ್‌ ನದೀಮುಲ್ಲಾ (₨ 3.19 ಲಕ್ಷ) ಮತ್ತು ಸಿಪಿಎಂನ ಶೈಮಲ್ ಚಕ್ರವರ್ತಿ (₨ 5.47 ಲಕ್ಷ) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ಹಿರಿಯರ ಮನೆ ಎಂದೇ ಕರೆಸಿಕೊಳ್ಳುವ ರಾಜ್ಯಸಭೆ­ಸದಸ್ಯರ ಶೈಕ್ಷಣಿತ ಅರ್ಹತೆ ಉತ್ತಮವಾಗಿದೆ ಎಂಬು­ದನ್ನು ಜಂಟಿ ಸಮೀಕ್ಷೆ ಸ್ಪಷ್ಟಪಡಿಸಿದೆ. ಶೇಕಡ 84­ರಷ್ಟು ಸದಸ್ಯರು ಪದವಿ ಅಥವಾ ಉನ್ನತ ವ್ಯಾಸಂಗ ಮಾಡಿದವರಾಗಿದ್ದಾರೆ. ಶೇಕಡ 5ರಷ್ಟು ಸದಸ್ಯರು ಮಾತ್ರ ಎಸ್ಸೆಸ್ಸೆಲ್ಸಿ ಅಥವಾ ಅದಕ್ಕಿಂತ ಕಡಿಮೆ ಶೈಕ್ಷಣಿಕ ಅರ್ಹತೆಯವರು. ಅಂದಹಾಗೆ, ರಾಜ್ಯಸಭಾ ಸದಸ್ಯರ ಸರಾಸರಿ ವಯಸ್ಸು 80 ವರ್ಷಗಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT