ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ ಪಟ್ಟಕ್ಕೆ ಪುಟಾಣಿಗಳ ಹೋರಾಟ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಡಿಸ್ನಿ ಬಹುತೇಕರಿಗೆ ಪರಿಚಿತ. ಅದರಲ್ಲೂ ಡಿಸ್ನಿ ಪ್ರಿನ್ಸೆಸ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಅಚ್ಚುಮೆಚ್ಚು. ಬಣ್ಣಬಣ್ಣದ ಉಡುಗೆ ತೊಟ್ಟು ಮಿಂಚುವ ಆಕೆಯಂತೆ ತಾವೂ ಆದರೆ, ವಿಧವಿಧದ ಈ ಉಡುಗೆ ತೊಟ್ಟು ಎಲ್ಲರ ಮುಂದೆ ನಿಂತು ರಾಣಿಯಂತೆ ಕಂಗೊಳಿಸಬಹುದು ಎಂದು ಕೆಲವರಿಗೆ ಅನಿಸುವುದು ಸಹಜ.

ತಾನು ರಾಣಿಯಂತೆ ಸಿಂಗರಿಸಿಕೊಳ್ಳಬೇಕು ಎಂದು ಆಸೆಪಡುವ ಪುಟಾಣಿ ಮಗುವಿಗೂ, ಅಂದಚೆಂದದ ಬಟ್ಟೆ ತೊಟ್ಟು ಮುದ್ದಾಗಿ ಕಾಣುವ ಮಗಳನ್ನು ಕಣ್ತುಂಬಿಕೊಳ್ಳಬೇಕು ಎಂದು ಆಸೆಪಡುವ ತಾಯಂದಿರಿಗೂ ಡಿಸ್ನಿ ಪ್ರಿನ್ಸೆಸ್ ಅಕಾಡೆಮಿ ವಿನೂತನ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.

ಹೈದರಾಬಾದ್, ಕೋಲ್ಕತ್ತ, ದೆಹಲಿ, ಮುಂಬೈ ಹಾಗೂ ಬೆಂಗಳೂರಿನಲ್ಲಿರುವ ಪುಟಾಣಿ ಮಕ್ಕಳಿಗಾಗಿ ಡಿಸ್ನಿ ಪ್ರಿನ್ಸೆಸ್ ಸ್ಪರ್ಧೆ ಏರ್ಪಡಿಸಲಾಗಿದೆ. 3-10 ವರ್ಷದೊಳಗಿನ ಹೆಣ್ಣು ಮಕ್ಕಳು ಭಾಗವಹಿಸಿದ್ದಾರೆ.

“ಸ್ಪರ್ಧೆಯಲ್ಲಿ ವಿಜೇತರಾದ ನಾಲ್ಕು ಪುಟಾಣಿಗಳಿಗೆ ಪಾಲಕರೊಂದಿಗೆ ಹಾಂಕಾಂಗ್ ಸುತ್ತುವ ವಿನೂತನ ಅವಕಾಶವನ್ನು ಇದು ಕಲ್ಪಿಸಿಕೊಡುತ್ತದೆ. `ಮೈ ಲಿಟಲ್ ಪ್ರಿನ್ಸೆಸ್~ ಹೆಸರಿನ ಈ ಕಾರ್ಯಕ್ರಮದಲ್ಲಿ ಡಿಸ್ನಿ ಪ್ರಿನ್ಸೆಸ್ ಸರಣಿಯಲ್ಲಿ ರಾಣಿ ತೊಡುವಂಥ ವಿಧವಿಧವಾದ ಬಟ್ಟೆಯನ್ನು ವಿಜೇತರಾಗುವ ಮಕ್ಕಳು ತೊಟ್ಟು ಸಂಭ್ರಮಿಸಬಹುದು. ತೆಳು ನೀಲಿ, ಗುಲಾಬಿ, ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ಡಿಸ್ನಿ ಪ್ರಿನ್ಸೆಸ್ ರೀತಿ ಮಕ್ಕಳು ಮಿಂಚಬಹುದಾದ ಅವಕಾಶವದು. ಹಾಂಕಾಂಗ್ ಡಿಸ್ನಿಲ್ಯಾಂಡ್ ರೆಸ್ಟೋರೆಂಟ್‌ನಲ್ಲಿ ಮಕ್ಕಳಿಗೆ ಭವ್ಯ ಸ್ವಾಗತವಿದೆ. ಸುಂದರವಾಗಿ ಕೇಶಾಲಂಕಾರ ಮಾಡಿಕೊಂಡು, ವಸ್ತ್ರಗಳನ್ನು ತೊಟ್ಟ ಮಗುವನ್ನು ಛಾಯಾಚಿತ್ರ ಸರಣಿಗಳು ರಂಜಿಸಲಿವೆ. ಇದು ಮಕ್ಕಳ ಬದುಕಿನಲ್ಲಿ ಮರೆಯಲಾಗದ ಸುಂದರ ಕ್ಷಣವಾಗುವುದರಲ್ಲಿ ಸಂಶಯವಿಲ್ಲ~ ಎನ್ನುತ್ತಾರೆ ಡಿಸ್ನಿ ಯುಟಿವಿಯ ಗ್ರಾಹಕ ಉತ್ಪಾದನೆ, ಪ್ರಸಾರ ಹಾಗೂ ಮಾರಾಟ ಇಲಾಖೆ ವ್ಯವಸ್ಥಾಪಕ ನಿರ್ದೇಶಕಿ ರೋಶನಿ ಭಕ್ಷಿ.

ಕೇವಲ ಸುಂದರ ಉಡುಗೆ ತೊಟ್ಟು ಮುದ್ದುಮುದ್ದಾಗಿ ಕಾಣಿಸಿಕೊಳ್ಳುವುದಷ್ಟೇ ಅಲ್ಲ, ವಿಮಾನ ಹಾಗೂ ಹಡಗುಗಳಲ್ಲಿ ಡಿಸ್ನಿ ಪ್ರಿನ್ಸೆಸ್ ಜೊತೆಯಲ್ಲಿ ಪ್ರಯಾಣ ಮಾಡುವ ಹಾಗೂ ಸುತ್ತಾಡುವ ಮೋಜು ಸಿಗಲಿದೆ.

ಹಾಂಕಾಂಗ್‌ಗೆ ಹೋಗಲಿರುವ ಮಕ್ಕಳು ಎರಡು ದಿನ ಟಿಂಕರ್ ಬೆಲ್, ಅರೋರಾ, ಸಿಂಡ್ರೆಲ್ಲಾ, ಬೆಲ್ಲೆ, ಸ್ನೋ ವೈಟ್, ಜಿಸೆಲ್ಲಾರಂತೆ ನಲಿದಾಡಬಹುದು.

ಡಿಸ್ನಿ ಪ್ರಿನ್ಸೆಸ್ ಬ್ರ್ಯಾಂಡನ್ನು ದೇಶದ ವಿವಿಧೆಡೆ ಪರಿಚಯಿಸುವ ಉದ್ದೇಶದಿಂದ ಈ ರೀತಿಯ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಅಕಾಡೆಮಿಯು ವಿಜೇತರಿಗೆ ಉಡುಗೆ, ಕಿರೀಟ ಹಾಗೂ ಸಾಕಷ್ಟು ಉಡುಗೊರೆಗಳನ್ನು ನೀಡಿ ಖುಷಿಪಡಿಸಲಿದೆ.

ಬೆಂಗಳೂರಿನಲ್ಲಿರುವ ಮಕ್ಕಳಿಂದಲೂ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸೆಪ್ಟೆಂಬರ್ 25ರಿಂದ ಆರಂಭವಾದ ಆಯ್ಕೆ ಸುತ್ತಿನಲ್ಲಿ 360 ಚಿಣ್ಣರನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ವಿಜೇತರಾಗುವ ನಾಲ್ಕು ಮಕ್ಕಳು ಯಾರು ಎಂಬುದು ಅಕ್ಟೋಬರ್ 21ಕ್ಕೆ ಗೊತ್ತಾಗಲಿದೆ.

`ಇದೇ 23ರಂದು ತಾಜ್ ಹೋಟೆಲ್‌ನಲ್ಲಿ ಮಕ್ಕಳಿಗೆ ನೀತಿ ಪಾಠ. ಹಿರಿಯರಿಗೆ ಗೌರವ ನೀಡುವುದು ಹೇಗೆ, ಸುಂದರವಾಗಿ ಕಾಣಿಸಲು ಯಾವ ರೀತಿ ಮೇಕಪ್ ಮಾಡಿಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಲಾಗುವುದು~ ಎಂದು ರೋಶನಿ ವಿವರಿಸುತ್ತಾರೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT