ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ಸ್‌ ಜಯಭೇರಿ

ಕ್ರಿಕೆಟ್‌: ಪ್ರವೀಣ್‌, ಹಾಡ್ಜ್‌ ಮಿಂಚು
Last Updated 25 ಸೆಪ್ಟೆಂಬರ್ 2013, 20:02 IST
ಅಕ್ಷರ ಗಾತ್ರ

ಜೈಪುರ (ಪಿಟಿಐ):  ಬ್ರಾಡ್‌ ಹಾಡ್ಜ್‌ (ಔಟಾಗದೆ 46, 23ಎಸೆತ, 6  ಬೌಂಡರಿ, 2 ಸಿಕ್ಸರ್) ಅಬ್ಬರದ ಬ್ಯಾಟಿಂಗ್‌ ಮತ್ತು ಪ್ರವೀಣ್‌ ತಾಂಬೆ (15ಕ್ಕೆ4) ಚುರುಕಿನ ಬೌಲಿಂಗ್‌ ಬಲದಿಂದ ರಾಜಸ್ತಾನ ರಾಯಲ್ಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಹೈವೆಲ್ಡ್‌ ಲಯನ್ಸ್‌ ಎದುರಿನ ಪಂದ್ಯದಲ್ಲಿ 30 ರನ್‌ಗಳ ಗೆಲುವು ಸಾಧಿಸಿತು.

ಸವಾಯಿ ಮಾನಸಿಂಗ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಲಯನ್ಸ್‌ ಫೀಲ್ಡಿಂಗ್‌ ಆರಿಸಿಕೊಂಡಿತು. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ರಾಹುಲ್‌ ದ್ರಾವಿಡ್‌ ನೇತೃತ್ವದ ರಾಯಲ್ಸ್‌ ತಂಡ 20 ಓವರ್‌ಗಳಲ್ಲಿ 5  ವಿಕೆಟ್‌ ನಷ್ಟಕ್ಕೆ 183 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿತು.

ಈ ಗುರಿಯನ್ನು ಮುಟ್ಟುವ ಹಾದಿಯಲ್ಲಿ ಚಡಪಡಿಸಿದ ಲಯನ್ಸ್‌ ನಿಗದಿತ ಓವರ್‌ಗಳಲ್ಲಿ ಗಳಿಸಿದ್ದು 153 ರನ್‌ ಮಾತ್ರ. ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ 41 ವರ್ಷದ ಪ್ರವೀಣ್‌ ತಾಂಬೆ ರಾಯಲ್ಸ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ದ್ರಾವಿಡ್‌ ಬಳಗ ತವರಿನ ಅಂಗಳದಲ್ಲಿ ಪಡೆದ ಸತತ ಹತ್ತನೇ ಗೆಲುವು ಇದಾಗಿದೆ. ಐಪಿಎಲ್‌ ಆರನೇ ಆವೃತ್ತಿಯಲ್ಲಿ ಇಲ್ಲಿ ಆಡಿದ ಎಂಟೂ ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.

ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಪಡೆದಿರುವ ರಾಯಲ್ಸ್‌ ತಂಡ ‘ಎ’ ಗುಂಪಿನ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಒಟಾಗೊ ಎರಡನೇ ಸ್ಥಾನದಲ್ಲಿದೆ.

‌ಸಂಕ್ಷಿಪ್ತ ಸ್ಕೋರು: ರಾಜಸ್ತಾನ ರಾಯಲ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 183. (ರಾಹುಲ್‌ ದ್ರಾವಿಡ್‌ 31, ಸಂಜು ಸ್ಯಾಮ್ಸನ್‌ 12, ಶೇನ್‌ ವಾಟ್ಸನ್‌ 33, ಸ್ಟುವರ್ಟ್‌ ಬಿನ್ನಿ 38, ಬ್ರಾಡ್‌ ಹಾಡ್ಜ್‌ ಔಟಾಗದೆ 46; ಲೊನ್ವೊಬಾ ಸೊಸೊಬೆ 26ಕ್ಕೆ2).

ಹೈವೆಲ್ಡ್‌ ಲಯನ್ಸ್‌ 20  ಓವರ್‌ಗಳಲ್ಲಿ 9 ವಿಕೆಟ್‌ಗೆ 153. (ಹರ್ಡಸ್‌ ವಿಲ್‌ಜಿಯೊನ್‌ 24, ಅಲ್ವಿರೊ ಪೀಟರ್ಸನ್‌ 40, ತಿಮಿ ಸೋಲೇಕೆಲಿ 21; ವಿಕ್ರಮ್‌ಜೀತ್‌ ಮಲೀಕ್‌ 26ಕ್ಕೆ2, ಜೇಮ್ಸ್‌ ಫಾಕನರ್‌ 22ಕ್ಕೆ2, ಪ್ರವೀಣ್ ತಾಂಬೆ 15ಕ್ಕೆ4). ಫಲಿತಾಂಶ: ರಾಜಸ್ತಾನ ರಾಯಲ್ಸ್‌ಗೆ 30 ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT