ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕೊಕ್ಕೊ: ಕರ್ನಾಟಕ ತಂಡಗಳ ಶುಭಾರಂಭ

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ಚಂದರಗಿ (ಬೆಳಗಾವಿ ಜಿಲ್ಲೆ): ಕರ್ನಾಟಕದ ಬಾಲಕ ಹಾಗೂ ಬಾಲಕಿಯರು ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸ್ಕೂಲ್ ಗೇಮ್ಸ ಫೆಡರೇಷನ್ ಆಫ್ ಇಂಡಿಯಾ ಆಶ್ರಯದಲ್ಲಿ ಸೋಮವಾರ ಆರಂಭಗೊಂಡ 17 ವರ್ಷದೊಳಗಿನವರ ರಾಷ್ಟ್ರೀಯ ಕೊಕ್ಕೊ ಟೂರ್ನಿಯ ಬಾಲಕ ಹಾಗೂ ಬಾಲಕಿಯರ ವಿಭಾಗಗಳಲ್ಲಿ ಮೊದಲ ಜಯ ಸಾಧಿಸಿದ್ದಾರೆ.

ಇಲ್ಲಿನ ಕ್ರೀಡಾ ಶಾಲೆಯ ಆವರಣದಲ್ಲಿ ನಡೆದ ಬಾಲಕರ ವಿಭಾಗದ ಪಂದ್ಯದಲ್ಲಿ ಕರ್ನಾಟಕ ತಂಡದವರು ಹಿಮಾಚಲ ಪ್ರದೇಶ ತಂಡವನ್ನು 10 ಪಾಯಿಂಟ್‌ಗಳಿಂದ (13-3) ಮಣಿಸಿದರು. ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡದವರು ಉತ್ತರಾಖಂಡ ತಂಡವನ್ನು 9 ಪಾಯಿಂಟ್‌ಗಳಿಂದ (13-4) ಮಣಿಸಿದರು.

ಬೆಳಿಗ್ಗೆ ನಡೆದ ಬಾಲಕರ ವಿಭಾಗದ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮಧ್ಯಪ್ರದೇಶವನ್ನು ಕೇರಳ ತಂಡದವರು 11 ಪಾಯಿಂಟ್‌ಗಳಿಂದ ಹಿಮ್ಮೆಟ್ಟಿಸಿದರು. (ಸ್ಕೋರ್: 12-1). ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ನವದೆಹಲಿ ತಂಡ 6 ಪಾಯಿಂಟ್‌ಗಳ (11-5) ಜಯ ಸಾಧಿಸಿತು. ಎನ್‌ವಿವಿಎಸ್ ವಿರುದ್ಧ ಜಮ್ಮು ಕಾಶ್ಮೀರ ತಂಡ (8-4) ಜಯ ಗಳಿಸಿತು.

ಬಾಲಕಿಯರ ವಿಭಾಗದಲ್ಲಿ ಮಧ್ಯಪ್ರದೇಶ ತಂಡ ಹರಿಯಾಣವನ್ನು (13-12), ಕೇರಳ ತಂಡ    ನವದೆಹಲಿ ತಂಡವನ್ನು (21-10) ಹಾಗೂ ತಮಿಳುನಾಡು ತಂಡ ಗುಜರಾತ್ ತಂಡವನ್ನು (13-12) ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT