ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ ನಾಯಕನಹಟ್ಟಿ ವಿದ್ಯಾರ್ಥಿಗಳು ಆಯ್ಕೆ

Last Updated 12 ಡಿಸೆಂಬರ್ 2013, 9:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಗುಜರಾತ್ ರಾಜ್ಯದ ಅಹಮದಾಬಾದ್‌ನ ವಿಜ್ಞಾನ ನಗರಿಯಲ್ಲಿ ಡಿ.೧೩ರಿಂದ ೧೫ರವರೆಗೆ ಮೂರು ದಿನಗಳ ಕಾಲ ನಡೆಯುವ ರಾಷ್ಟ್ರೀಯ ವಿಜ್ಞಾನ ಶಿಬಿರಕ್ಕೆ ನಾಯಕನಹಟ್ಟಿಯ ನಾಲ್ಕು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ನಾಯಕನಹಟ್ಟಿ ಗ್ರಾಮದ ವಿದ್ಯಾ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕು ವಿದ್ಯಾರ್ಥಿಗಳು ವಿಜ್ಞಾನ ಕ್ಲಬ್‌ಗಳ ರಾಷ್ಟೀಯ ಸಮಾವೇಶದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಗುಜರಾತ್ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಳಿ, ಕೇಂದ್ರ ಸರಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಹಾಗು ದೆಹಲಿಯ ವಿಜ್ಞಾನ ಪ್ರಸಾರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಅಂತರರಾಷ್ಟ್ರೀಯ ನೀರಿನ ಸಹಕಾರ ವರ್ಷ ಆಚರಣೆ - ೨೦೧೩ರ ಅಂಗವಾಗಿ ಒಂದು ವರ್ಷದ ನಿರಂತರ ಸಮೀಕ್ಷಾ ಕಾರ್ಯವನ್ನು ವಿದ್ಯಾರ್ಥಿಗಳು ಕೈಗೊಂಡಿದ್ದರು. ನೀರಿನ ಸಂರಕ್ಷಣೆಯ ಪ್ರಾಚೀನ ವಿಧಾನಗಳು, ಈಗ ಅನುಸರಿಸುತ್ತಿರುವ ಪದ್ಧತಿಗಳು ಹಾಗೂ ಅವುಗಳ ಮಹತ್ವದ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಶಾಲೆಯ ವಿಜ್ಞಾನ ಕ್ಲಬ್‌ಗಳು ಸಲ್ಲಿಸಿದ್ದ ಎರಡು ಯೋಜನಾ ವರದಿಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿವೆ.

ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ೮೮ ಶಾಲೆಗಳ ವಿದ್ಯಾರ್ಥಿಗಳು ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳಲಿವೆ. ಸಮಾವೇಶದಲ್ಲಿ ಒಂಬತ್ತನೇ ತರಗತಿಯ ವೈ.ಎಂ. ಶಾರದ, ಪಿ.ಎಂ. ಚಂದನ, ಎಂಟನೇ ತರಗತಿಯ ಕೆ.ಟಿ. ಚಿನ್ಮಯ ಪ್ರಭು, ಎಂ.ಟಿ. ತರುಣ್ ತಂಡದಲ್ಲಿದ್ದಾರೆ. ಈ ಎರಡು ಯೋಜನೆಗಳಿಗೆ ಶಿಕ್ಷಕರಾದ ಕೆ.ಎಂ. ಶಿವಸ್ವಾಮಿ, ಎಂ.ಆರ್. ಸಿದ್ದೇಶ್‌ಕುಮಾರ್ ಮಾರ್ಗದರ್ಶಿ ಶಿಕ್ಷಕರಾಗಿದ್ದಾರೆ.

ತರಬೇತಿಗೆ ಅರ್ಜಿ ಆಹ್ವಾನ
ಹಿಂದೂಸ್ಥಾನ್ ಏರೋನಾಟಿಕ್ಸ್ ನಲ್ಲಿ ಅಪ್ರೆಂಟಿಸ್‌ಶಿಪ್‌ಗೆ ಡಿ.೨೧ ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ಐಟಿಐ ಉತ್ತೀರ್ಣ ರಾಗಿರಬೇಕು. ಖಾಲಿ ಸ್ಥಾನಗಳು ೫೪೭, ತರಬೇತಿ ಭತ್ಯೆ ₨ ೨,೮೦೦ ಆಗಿದೆ. ಆಸಕ್ತರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: ೦೮೧೯೪-೨೩೦೪೮೫ಗೆ ಸಂಪರ್ಕಿಸಲು ಪ್ರಕಟಣೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT