ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಸಿಇಟಿ ನಡೆಸಲು :ಪ್ರಾಧಿಕಾರ- ಕೇಂದ್ರ ಪ್ರಸ್ತಾವ

Last Updated 7 ಫೆಬ್ರುವರಿ 2012, 20:10 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರದೆಲ್ಲೆಡೆ ಇರುವ ಎಂಜಿನಿಯರಿಂಗ್ ಕಾಲೇಜುಗಳಿಗೆ ಅನ್ವಯವಾಗುವಂತೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಸಲುವಾಗಿ ರಾಷ್ಟ್ರೀಯ ಪ್ರಾಧಿಕಾರ ಸ್ಥಾಪಿಸುವ ಪ್ರಸ್ತಾವ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮುಂದಿದೆ. ಈ ಪ್ರಾಧಿಕಾರಕ್ಕೆ ಶಾಸನಬದ್ಧ ಸ್ಥಾನಮಾನ ನೀಡುವುದಕ್ಕಾಗಿ ಕರಡು ಮಸೂದೆಯನ್ನೂ ಇಲಾಖೆ ಸಿದ್ಧಪಡಿಸಲಿದೆ.

ಈ ಶಾಸನಬದ್ಧ ಪ್ರಾಧಿಕಾರ ರಚನೆಯಾಗುವ ತನಕ ಪರಿಶೀಲನಾ ಹಾಗೂ ಮೌಲ್ಯಾಂಕನ ಕೇಂದ್ರವೊಂದನ್ನು ಸ್ಥಾಪಿಸಲಾಗುತ್ತದೆ. ಈ ಕೇಂದ್ರವು 2013ರ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗುವ ನಿರೀಕ್ಷೆಯಲ್ಲಿರುವ ರಾಷ್ಟ್ರಮಟ್ಟದ ಏಕರೂಪ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲು ಸಿಬಿಎಸ್‌ಇ ಗೆ ನೆರವು ನೀಡಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ಸ್ವರೂಪದ ಬಗ್ಗೆ ನಿರ್ಧರಿಸಿರುವುದು ಈ ಮೌಲ್ಯಾಂಕನ ಕೇಂದ್ರದ ಪ್ರಮುಖ ಹೊಣೆಯಾಗಿರುತ್ತದೆ.ಅಮೆರಿಕದಲ್ಲಿ ನಡೆಯುವ ಸ್ಕೊಲ್ಯಾಸ್ಟಿಕ್ ಆಪ್ಟಿಟ್ಯೂಡ್ ಟೆಸ್ಟ್ (ಎಸ್‌ಎಟಿ) ಮಾದರಿಯಲ್ಲಿ ಈ ಸಿಇಟಿ ನಡೆಯಲಿದೆ. ಈ ಪರೀಕ್ಷಾ ಪದ್ಧತಿ ಜಾರಿಗೆ ಬರುತ್ತಿದ್ದಂತೆ ಜೆಇಇ, ಎಐಇಇಇ ಮತ್ತಿತರ ಪರೀಕ್ಷೆಗಳು ರದ್ದಾಗಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT