ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಕ್ಷಾ ಚಾಲಕ–ಮಾಲೀಕರ ಸಂಘ ಉದ್ಘಾಟನೆ

Last Updated 10 ಡಿಸೆಂಬರ್ 2013, 9:18 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ತಾಲ್ಲೂಕು ಜಯ­ಕರ್ನಾಟಕ ರಿಕ್ಷಾ ಚಾಲಕ–ಮಾಲೀಕರ ಸಂಘಟನೆ ಜನರ ವಿಶ್ವಾಸ ಗಳಿಸುವ ಮೂಲಕ ರಾಜ್ಯದಲ್ಲೇ ಮಾದರಿ ಸಂಘಟನೆಯಾಗಬೇಕು ಹಾಗೂ ಸಂಘಟನೆಯ ಸದಸ್ಯರ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ರಾಜ್ಯ ಜಯಕರ್ನಾಟಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಚ್.ಎನ್. ದೀಪಕ್ ಹೇಳಿದರು.

ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಜಯಕರ್ನಾಟಕ ರಿಕ್ಷಾ ಚಾಲಕ– ಮಾಲೀಕರ ಸಂಘಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಜನನಿ ದಿವಾಕರ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಿಕ್ಷಾ ಚಾಲಕ ಮಾಲೀಕರು ಪಕ್ಷ ರಾಜಕೀಯ ರಹಿತರಾಗಿ ಸಂಘಟನೆಯ ಸದಸ್ಯರಾಗಿ ವೃತ್ತಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳ­ಬೇಕು ಎಂದು ತಿಳಿಸಿದರು. ತೀವ್ರ ಅಸ್ವಸ್ಥರಾಗಿರುವ ಇಬ್ಬರು ರಿಕ್ಷ ಚಾಲಕರಿಗೆ ನೂತನ ಸಂಘದ ಅಧ್ಯಕ್ಷ ಕೆ. ರಮೇಶ್‌ ಶೆಟ್ಟಿ ವೈಯಕ್ತಿಕವಾಗಿ ಧನ ಸಹಾಯ ನೀಡಿದರು.

ರಾಜ್ಯ ಘಟಕದ ಪ್ರಧಾನ ಸಂಚಾಲಕ ಅಜಿತ್ ಪ್ರಸಾದ್‌, ಉಡುಪಿ ತುಳು­ಕೂಟದ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಉಡುಪಿ ಸಂಘಟನೆ ಗೌರವ ಕಾನೂನು ಸಲಹೆಗಾರ ಸಬೀನಾ ಆರ್.­ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ, ರಿಕ್ಷಾ ಚಾಲಕ ರಾಜೀವಿ ಪೆರ್ಣಂ­ಕಿಲ ಇದ್ದರು. ಅಣ್ಣಪ್ಪ ಕುಲಾಲ್ ಹೆಬ್ರಿ ಸಂಘದ ಪದಾಧಿಕಾ­ರಿಗಳ ವಿವರ ವಾಚಿಸಿ­ರು. ಸಂಘಟನಾ ಕಾರ್ಯದರ್ಶಿ ಮನೋ­ಜ್ ಶೆಟ್ಟಿ ಸಂತೆಕಟ್ಟೆ ಸ್ವಾಗತಿಸಿ, ಶಿಕ್ಷಕ ಸತೀಶ್ ಶೆಟ್ಟಿ ತೋನ್ಸೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT