ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು, ಕಾರ್ಮಿಕರು ದೇಶದ ಬೆನ್ನೆಲುಬು

Last Updated 5 ಜನವರಿ 2012, 8:15 IST
ಅಕ್ಷರ ಗಾತ್ರ

ರೋಣ: ಈ ದೇಶದ ಬೆನ್ನೆಲುಬು ರೈತರು ಮತ್ತು ಕಾರ್ಮಿಕರು. ಇವರು ಒಂದೇ ನಾಣ್ಯದ ಎರಡು ಮುಖಗಳಿದಂತೆ. ರಾಜ್ಯದಲ್ಲಿರುವ ಕಾರ್ಮಿಕರಲ್ಲಿ ಶೇ. 92 ರಷ್ಟು  ಅಸಂಘಟಿತ ಕಾರ್ಮಿಕರಿದ್ದಾರೆ. ಅವರಿಗಾಗಿ ಸರಕಾರವು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರಾತಾ ಮಂಡಳಿಗೆ 100 ಕೋಟಿ ರೂಗಳನ್ನು ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ಒದಗಿಸಬೇಕು ಎಂದು ಸರಕಾರಕ್ಕೆ ಭಾರತೀಯ ವಿಶ್ವಕರ್ಮ ಸೇವಾ ಪರಿಷತ್ತನ ರಾಷ್ಟ್ರೀಯ ಅಧ್ಯಕ್ಷರಾದ ಈಶ್ವರ ವಿಶ್ವಕರ್ಮ ಒತ್ತಾಯಿಸಿದರು.

ಅವರು ಪಟ್ಟಣದ ಕಾಳಿಕಾದೇವಿ ಆವರಣದಲ್ಲಿ ವಿಶ್ವಕರ್ಮ ರಥಯಾತ್ರೆಗೆ ಚಾಲನೆ ನೀಡಿ ಅಲ್ಲಿ  ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿಶ್ವಕರ್ಮ ರಥಯಾತ್ರೆಯಲ್ಲಿ ಸರಕಾರಕ್ಕೆ ಪ್ರಮುಖವಾಗಿ 6 ಬೇಡಿಕೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ವಿಶ್ವಕರ್ಮರ ಕಲೆಗಳ ಸಂಶೋಧನೆ ಮತ್ತು ಅಭಿವೃದ್ದಿ ಮಂಡಳಿಯನ್ನು ಸರಕಾರ ಸ್ಥಾಪಿಸಬೇಕು. ಸಪ್ಟಂಬರ 17 ವಿಶ್ವಕರ್ಮ ಮಹೋತ್ಸವದ ದಿನದಂದು ಸರಕಾರ ರಜೆಯನ್ನು ಘೋಷಣಿ ಮಾಡಬೇಕು. ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ ಸಾಂಪ್ರಾಯಿಕ ಕುಶಲ ಕರ್ಮಿಗಳಿಗೆ ನೀಡುತ್ತಿರುವ ನೇರ ಸಾಲವನ್ನು 35 ಸಾವಿರದಿಂದ 1 ಲಕ್ಷ ರೂಗಳಿಗೆ ಏರಿಸಬೇಕು. ಫಲಾನುಭವಿಗಳ ಆಯ್ಕೆಗೆ ತಾಲೂಕ ಮಟ್ಟದಲ್ಲಿ ತಹಶೀಲ್ದಾರ ನೇತತ್ವದಲ್ಲಿ ಆಯ್ಕೆ ಸಮಿತಿಯನ್ನು ರಚಿಸಬೇಕು. ಹಿಂದುಳಿದ ವರ್ಗಗಳ ಸಮುದಾಯ ಭವನದ ನಿರ್ಮಾಣಕ್ಕೆ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ 5 ಲಕ್ಷ ರೂಗಳ ಸಹಾಯಧನ ದೊರೆಯುತ್ತಿದ್ದು ಅದನ್ನು ಗರಿಷ್ಟ 25 ಲಕ್ಷ ರೂಗಳಿಗೆ ಏರಿಸಬೇಕು. 

 ಹಿಂದುಳಿದ ವರ್ಗ 2 ಎ ನಲ್ಲಿ ಒಳಮೀಸಲಾತಿ ಜಾರಿಗೆ ತರಬೇಕು. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ 1000 ಕೋಟಿಗಳ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ಒದಗಿಬೇಕು ಎನ್ನುವ ಆರು ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಈ ವಿಶ್ವಕರ್ಮ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸುಮಾರು 3 ಕೋಟಿ ಅಸಂಘಟಿತ ಕಾರ್ಮಿಕರು ರಾಜ್ಯದಲ್ಲಿದ್ದಾರೆ. ಇವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಇಡೀ ರಾಷ್ಟ್ರದಲ್ಲಿಯೇ ಪ್ರಥಮಬಾರಿಗೆ ಕರ್ನಾಟಕ ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಸ್ಥಾಪನೆಯಾಗಿದೆ.

ಈ ಮಂಡಳಿಯು 6 ಅಸಂಘಟಿತ ಕಾರ್ಮಿಕರ ವಲಯಗಳನ್ನು ಗುರುತಿಸಿದೆ.ಅಂದರೆ ದೋಬಿ, ಹಮಾಲಿಗಳು, ಆಟೋ, ಟಿಮಪೋ, ಟ್ಯಾಕ್ಸಿಗಳ ಚಾಲಕರು, ಹೊಟೆಲ ಕಾರ್ಮಿಕರು, ಟೈಲರುಗಳು, ಆಟೋ ಮೊಬೈಲ್, ವರ್ಕ್ಸ ಶಾಪ್ ಕೆಲಸಗಾರರು ಇವರಂತೆಯೇ ಇನ್ನೂ 58 ಅಸಂಘಟಿತ ಕಾರ್ಮಿಕ ವಲಯಗಳು ಇವೆ. ಇವರನ್ನು ಸಹ ಮಂಡಳಿಯವತಿಯಿಂದ ಗುರುತಿಸಿ ಅವರಿಗೆ ಗುರುತಿನ ಚೀಟಿಯನ್ನು ನೀಡಬೇಕು ಹಾಗೂ ಅವರಿಗೆ ಮಂಡಳಿಯಲ್ಲಿ ನಿರ್ದಾರವಾಗುವ ಕೆಲವು ಸವಲತ್ತುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಹಿಂದುಳಿದ ವರ್ಗ 2 ಎಗೆ ಶೇ.15 ರಷ್ಟು ಮೀಸಲಾತಿ ಇದೆ. ಇದರಲ್ಲಿ 102 ಜಾತಿಗಳು ಇದುವರೆಗೆ ಸೇರಿದ್ದವು ಪ್ರಸ್ತುತ ಬಲಿಜಿಗ ಜನಾಂಗವನ್ನು ಸರ್ಕಾರ 2 ಎ ಗೆ ಸೇರಿಸಿದೆ. ಈ ಸಂಖ್ಯೆ ಹೆಚ್ಚಾಗುತಿದೆ. ಆದರೆ ಮೀಸಲಾತಿ ಪ್ರಮಾಣ ಮಾತ್ರ ಹೆಚ್ಚಾಗಿಲ್ಲ. 2ಎ ನಲ್ಲಿ 4 ಸಮಾಜಗಳು ರಾಜಕೀಯ ಪ್ರಾಬಲ್ಯ ಹೊಂದಿರುವುದರಿಂದ 99 ಅತಿ ಹಿಂದುಳಿದ ವರ್ಗಗಳಿಗೆ 2 ಎ ನಲ್ಲಿ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ ಎಂದರು.

 2ಎ ಒಳಗಡೆ ಒಳಮಿಸಲಾತಿಯನ್ನು ತಂದು ಸಾಮಾಜಿಕ ನ್ಯಾಯವನ್ನು ಅತಿ ಹಿಂದುಳಿದ ವರ್ಗಗಳಿಗೆ ನೀಡಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಸಾನಿಧ್ಯವನ್ನು ಮಳೆ ರಾಜೇಂದ್ರಸ್ವಾಮಿಮಠದ ಜಗನಾಥ ಮಹಾಸ್ವಾಮಿಗಳು ಹಾಗೂ ಹೊಳೆ ಆಲೂರಿನ ಯಚ್ಚರಸ್ವಾಮಿಗಳು ವಹಿಸಿದ್ದರು.

ಅಧ್ಯಕ್ಷತೆಯನ್ನು ನಾರಾಯಣ ಪತ್ತಾರ ವಹಿಸಿದ್ದರು. ಲಿಂಗಪ್ಪ ಕಮ್ಮೋರ, ಎ.ಎನ್.ಬಡಿಗೇರ, ಮೌನೇಶ ಅಕ್ಕಸಾಲಿಗ, ಚಿದಾನಂದ ಬಡಿಗೇರ, ಕಾಲಪ್ಪ ಹೂಲಗೇರಿ ಮುಂತಾದವರು ಉಪಸ್ಥಿತರಿದ್ದರು. ಬಿ.ಎನ್.ಬಡಿಗೇರ ನಿರೂಪಿಸಿದರು. ಈಶ್ವರ ಪತ್ತಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT