ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಪ್ರಯಾಣ ದರ ಹೆಚ್ಚಳ?

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಎಲ್ಲ ದರ್ಜೆಗಳಿಗೂ ಅನ್ವಯವಾಗುವಂತೆ ರೈಲು ಪ್ರಯಾಣ ದರ ಹೆಚ್ಚಿಸುವ ಸುಳಿವನ್ನು ರೈಲ್ವೆ ಇಲಾಖೆ ನೀಡಿದ್ದು, ಬಸ್ ಪ್ರಯಾಣ ದರಕ್ಕೆ ಸರಿಸಮವಾದ ದರ ನಿಗದಿ ಮಾಡುವ ಚಿಂತನೆಯಲ್ಲಿದೆ.

ಹಣಕಾಸು ಸಚಿವಾಲಯ ಮತ್ತು ಕೇಂದ್ರ ವಾರ್ತಾ ಇಲಾಖೆ (ಪಿಐಬಿ) ಬುಧವಾರ ಏರ್ಪಡಿಸಿದ್ದ ವಾಣಿಜ್ಯ ಸಂಪಾದಕರ ಸಮಾವೇಶದಲ್ಲಿ ಮಾತನಾಡಿದ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಈ ಸುಳಿವು ನೀಡಿದ್ದಾರೆ.

ರೈಲು ಪ್ರಯಾಣ ದರವನ್ನು ಪರಿಷ್ಕೃತಗೊಳಿಸುವ ಕಾರ್ಯ ತುರ್ತಾಗಿ ಆಗಬೇಕಿದೆ. ಆದರೆ ಬಡಜನರಿಗೆ ಅನ್ಯಾಯವಾಗದಂತೆ ಇದನ್ನು ನಿಭಾಯಿಸಲಾಗುವುದು. ಪ್ರಯಾಣಿಕರ ವಿಭಾಗದಿಂದ ಬರುತ್ತಿರುವ ಶೇ 91ರಷ್ಟು ಆದಾಯವು ಮುಂಗಡ ಸೀಟು ಕಾಯ್ದಿರಿಸುವ ಸೌಲಭ್ಯವಿಲ್ಲದ ದ್ವಿತೀಯ ದರ್ಜೆಯಿಂದಲೇ ಬರುತ್ತಿದೆ.

ಇದನ್ನು ಗಮನದಲ್ಲಿರಿಸಿಕೊಂಡು ಜಾಣ್ಮೆಯಿಂದ ದರ ಹೆಚ್ಚಳ ನಿಗದಿ ಮಾಡಲಾಗುವುದು ಎಂದು ತ್ರಿವೇದಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT