ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಪ್ರಯಾಣಿಕರ ಗೋಳು

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು ಮತ್ತು ಮೈಸೂರು ನಡುವೆ ರೈಲಿನಲ್ಲಿ ಪ್ರತೀ ದಿನ ಸಾವಿರಾರು ಜನರು  ಪ್ರಯಾಣಿಸುತ್ತಾರೆ. ಆದರೆ ಪ್ರಯಾಣಿಕರನ್ನು ರೈಲ್ವೆ ಇಲಾಖೆಯು ಮನುಷ್ಯರು ಎಂದೇ  ಪರಿಗಣಿಸಿದಂತಿಲ್ಲ. ಮೈಸೂರಿನಿಂದ ಬೆಳಿಗ್ಗೆ 6.45ಕ್ಕೆ ಹೊರಡುವ ಚಾಮುಂಡಿ ಎಕ್ಸ್‌ಪ್ರೆಸ್‌, ಸಂಜೆ 5ರ ತಿರುಪತಿ ಎಕ್ಸ್ ಪ್ರೆಸ್‌,  ಮಧ್ಯಾಹ್ನ 3ರ ಟಿಪ್ಪು, ಸಂಜೆ 6.15ರ ಚಾಮುಂಡಿ ಎಕ್ಸ್ ಪ್ರೆಸ್‌ ಗಾಡಿಗಳಲ್ಲಿ ಎಷ್ಟು ಜನರು ಪ್ರಯಾಣಿಸುತ್ತಿ­ದ್ದಾರೆಂದರೆ ಸೀಟು ಸಿಕ್ಕಿ ಕುಳಿತು ಪ್ರಯಾಣಿಸುವವರಿಗಿಂತ ಎರಡು ಪಟ್ಟು ಹೆಚ್ಚು ಜನ, ಉಸಿರಾಡಲು ತೊಂದರೆ­ಪಡುವಷ್ಟು ಒತ್ತಟ್ಟಿನಲ್ಲಿ ನಿಂತುಕೊಂಡು ಪ್ರಯಾಣಿಸುತ್ತಾರೆ.

ಇವರಲ್ಲಿ ಚಿಕ್ಕ ಮಕ್ಕಳು, ವಯೋ­ವೃದ್ಧರೂ  ಹೆಚ್ಚಿನ ಸಂಖ್ಯೆಯಲ್ಲಿ  ಇರು­ತ್ತಾರೆ. ಈ ದಯನೀಯ ಸ್ಥಿತಿ ಕುರಿತು ರೈಲ್ವೆ ಇಲಾಖೆಯಲ್ಲಿ ಪೂರ್ಣ ಮಾಹಿತಿ ಇದ್ದರೂ ಸುಧಾರಣೆ  ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪ್ರಯಾಣಿಕ­ರಿಂದಲೇ ತಮ್ಮ ಇಲಾಖೆ ನಡೆಯುತ್ತಿದೆ ಎಂಬುದನ್ನಾದರೂ ತಿಳಿದುಕೊಂಡಲ್ಲಿ  ಈ ರೈಲುಗಳಿಗೆ ಕೊನೇ ಪಕ್ಷ ಅಗತ್ಯ ಇರುವಷ್ಟು ಹೆಚ್ಚಿನ ಬೋಗಿ­ಗಳ­ನ್ನಾದರೂ ಅಳವಡಿಸಿ ಪ್ರಯಾ­ಣಿಕರು ಈ ರೀತಿ ಕಷ್ಟಪಟ್ಟು ಪ್ರಯಾಣಿಸುವುದನ್ನು ತಪ್ಪಿಸ­ಬಹು­ದಲ್ಲವೇ? ರಾಜ್ಯ ಸರ್ಕಾರವೂ ಕೇಂದ್ರದ ಮೇಲೆ ಈ ಸಂಬಂಧ ಒತ್ತಡ ತರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT