ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರೋಗಿ ಜತೆ ಉತ್ತಮ ಸಂಬಂಧ ಅಗತ್ಯ'

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ರೋಗಗಳನ್ನು ಗುಣಪಡಿಸುವಲ್ಲಿ ವೈದ್ಯರು ಹಾಗೂ ರೋಗಿಗಳ ನಡುವಿನ ಸಂಬಂಧ ಮುಖ್ಯ ಪಾತ್ರವಹಿಸುತ್ತದೆ' ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧ್ಯಕ್ಷ ಪ್ರೊ.ಕೆ.ಶ್ರೀನಾಥ್ ರೆಡ್ಡಿ ಹೇಳಿದರು.

ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಕಮ್ಯುನಿಕೇಟ್, ಕೇರ್, ಕ್ಯೂರ್' ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

`ರೋಗಿ ಮತ್ತು ರೋಗಿಯ ಕುಟುಂಬದವರೊಂದಿಗೆ ವೈದ್ಯರೂ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಉತ್ತಮ ಬಾಂಧವ್ಯ ಹೊಂದಬೇಕು. ವೈದ್ಯಕೀಯ ಸೇವೆಯಲ್ಲಿ ಈ ಸಂಬಂಧ ಬಹಳ ಮುಖ್ಯವಾದುದು. ರೋಗಿಗಳೊಂದಿಗೆ ದಾದಿಯರು ಉತ್ತಮ ಸಂಬಂಧ ಕಾಪಾಡಿಕೊಳ್ಳವ ಕೋರ್ಸ್‌ನಲ್ಲೇ ಕಲಿಸಲಾಗುತ್ತದೆ. ಆದರೆ, ವೈದ್ಯಕೀಯ ವಿಷಯದ ಕಲಿಕೆಯಲ್ಲಿ ಈ ಅಂಶದ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿಲ್ಲ' ಎಂದು ಅವರು ತಿಳಿಸಿದರು.

`ವೈದ್ಯಕೀಯ ಸೇವೆಯು ವ್ಯಕ್ತಿಗತ ಕೆಲಸವಲ್ಲ. ಅದು ಇಡೀ ಆಸ್ಪತ್ರೆಯ ತಂಡವು ನಿರ್ವಹಿಸಬೇಕಾದ ಜವಾಬ್ದಾರಿಯುತ ಕಾರ್ಯ. ಈ ಕಾರ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದರ ಪರಿಣಾಮ ರೋಗಿಯ ಮೇಲಾಗುತ್ತದೆ. ರೋಗಿಯೊಂದಿಗಿನ ಸಂಬಂಧ ಹಾಗೂ ಆಸ್ಪತ್ರೆಯೊಳಗಿನ ಸಿಬ್ಬಂದಿಯ ನಡುವಿನ ಸಂಬಂಧದ ಬಗ್ಗೆ ಈ ಪುಸ್ತಕವು ಅನೇಕ ಒಳಹುಗಳನ್ನು ನೀಡುತ್ತದೆ. ಹೊಸದಾಗಿ ವೈದ್ಯಕೀಯ ಕ್ಷೇತ್ರಕ್ಕೆ ಬಂದವರಿಗೆ ಈ ಪುಸ್ತಕ ಹೆಚ್ಚು ಸಹಕಾರಿಯಾಗಬಲ್ಲದು' ಎಂದು ಅವರು ಹೇಳಿದರು.

ಆಸ್ಪತ್ರೆಯ ನಿರ್ದೇಶಕ ಡಾ.ಅಲೆಗ್ಸಾಂಡರ್ ಥಾಮಸ್ ಮಾತನಾಡಿ, `ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣಗಳು ಮತ್ತು ತರಬೇತಿ ಶಿಬಿರಗಳಲ್ಲಿ ಮಂಡಿಸಲಾದ ಲೇಖನಗಳನ್ನು ಪುಸ್ತಕವು ಒಳಗೊಂಡಿದೆ. ರೋಗಿಗಳೊಂದಿಗೆ ಆಸ್ಪತ್ರೆಯ ಸಿಬ್ಬಂದಿ ನಡೆದುಕೊಳ್ಳಬೇಕಾದ ಸೂಕ್ಷ್ಮತೆಗಳ ಬಗ್ಗೆ ಪುಸ್ತಕದಲ್ಲಿ ಲೇಖನಗಳಿವೆ. ನಾನು ಮತ್ತು ಡಾ.ನಾಗೇಶ್ ರಾವ್ ಸೇರಿ ಈ ಪುಸ್ತಕವನ್ನು ಸಂಪಾದಿಸಿದ್ದೇವೆ' ಎಂದರು. ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯು ಪ್ರಕಟಿಸಿರುವ ಈ ಪುಸ್ತಕದ ಬೆಲೆ 320 ರೂಪಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT