ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಿಮಾತೇ ದರ್ಶನಕ್ಕೆ ಭಕ್ತ ಸಮೂಹ

Last Updated 7 ಸೆಪ್ಟೆಂಬರ್ 2011, 8:55 IST
ಅಕ್ಷರ ಗಾತ್ರ

ಹುಮನಾಬಾದ್: ಪಟ್ಟಣದ ಮುರಘಾಮಠ ಪಕ್ಕದ ದತ್ತಕುಮಾರ ಚಿದ್ರಿ ನಿವಾಸದಲ್ಲಿ ಕಳೆದ ಐದು ದಶಕದಿಂದ ಪ್ರತಿಷ್ಠಾಪಿಸುತ್ತ ಬಂದಿರುವ ಲಕ್ಷ್ಮಿಮಾತೆ ದರ್ಶನವನ್ನು ಹುಮನಾಬಾದ್ ಪಟ್ಟಣ ಮತ್ತು ಪಕ್ಕದ ಜಿಲ್ಲೆಯ ಸಾವಿರಾರು ಸಂಖ್ಯೆಯ ಭಕ್ತರು ಮಂಗಳವಾರ ದರ್ಶನ ಆಶೀರ್ವಾದ ಪಡೆದರು.

ಹುಮನಾಬಾದ್ ಪಟ್ಟಣ ಮಾತ್ರವಲ್ಲದೇ ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ಮಹಾರಾಷ್ಟ್ರದಲ್ಲಿ ನೆಲೆಸಿರುವ ಚಿದ್ರಿ ಪರಿವಾರದ ಸಮಸ್ತ ಸದಸ್ಯರು ಸೋಮವಾರ ರಾತ್ರಿ ಒಂದೆಡೆ ಸೇರಿ ಮಾತೆಲಕ್ಷ್ಮಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆಸಲ್ಲಿಸಿ, ಮಂಗಳಾರತಿ ಮಾಡುವ ಮೂಲಕ ಭಕ್ತಿಸೇವೆ ಸಲ್ಲಿಸಿದರು.

ಮಂಗಳವಾರ ಬೆಳಿಗ್ಗೆ ಪ್ರತೀತಿಯಂತೆ ಚಿದ್ರಿ ಪರಿವಾರ ಸಮಸ್ತ ಸುಮಂಗಲೆಯರು ದಾರ ಕಟ್ಟಿಕೊಂಡರು. ನಂತರ ವಿಶೇಷ ಪೂಜೆ ಸಲ್ಲಿಸಿದರು. ಲಕ್ಷ್ಮಿಮಾತೆ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯ ಭಕ್ತರು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂತು.

ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ವೀರಣ್ಣ ಪಾಟೀಲ  ಈಶ್ವರ ಕಲ್ಬುರ್ಗಿ, ಸಂಗಮೇಶ ಪಾಟೀಲ, ಲಕ್ಷ್ಮಣರಾವ್ ಬುಳ್ಳಾ, ಮಲ್ಲಿಕಾರ್ಜುನ ಮಾಶೆಟ್ಟಿ ದರ್ಶನ ಪಡೆದರು. ಚಿದ್ರಿ ಪರಿವಾರ ವತಿಯಿಂದ ಇಟಗಿ ಮಹಾರಾಜರು ಗಣ್ಯರನ್ನು ಶಾಲುಹೊದಿಸಿ, ಆಶೀರ್ವದಿಸಿದರು.

ವಿ.ಆರ್.ಚಿದ್ರಿ, ಜಗನ್ನಾಥ ಚಿದ್ರಿ, ನಾರಾಯಣರಾವ ಚಿದ್ರಿ, ನಂದಕುಮಾರ ಚಿದ್ರಿ, ಸೂರ್ಯಕಾಂತ ಚಿದ್ರಿ, ಶ್ರೀನಿವಾಸ ಚಿದ್ರಿ, ವಸಂತಕುಮಾರ ಚಿದ್ರಿ, ಲಕ್ಷ್ಮಿಕಾಂತ ಚಿದ್ರಿ, ಗೋವಿಂದ ಚಿದ್ರಿ, ಜಾಜಿ,
ಗಾದಾ, ಜೀವಣಗಿ, ಕೊಟ್ಟರಗಿ, ಉಪ್ಪಲ್ಲಿ, ರಘೋಜಿ, ಮೊದಲಾದ ಪರಿವಾರಗಳ ಸದಸ್ಯರು, ರೋಟರಿ, ಮೊದಲಾದ ಸಂಘ ಸಂಸ್ಥೆ ಪದಾಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು, ವ್ಯಾಪಾರಸ್ಥರು, ಸಾವಿರಾರು ಸಂಖ್ಯೆ ಭಕ್ತರು ಮಾತೆ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT