ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಫ್ಟ್ ಸರಿಪಡಿಸಿ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಗರದ ಹೃದಯ ಭಾಗದಲ್ಲಿರುವ ನ್ಯಾಯಾಲಯಗಳ ಸಂಕೀರ್ಣದಲ್ಲಿ ನೂರಕ್ಕೂ ಅಧಿಕ ನ್ಯಾಯಾಲಯಗಳನ್ನು ಏಳು ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಸ್ಥಾಪಿಸಲಾಗಿದೆ.

ಅವುಗಳಿಗೆ ಸಂಬಂಧಿಸಿದ ಕಚೇರಿಗಳು, ಸುಮಾರು 30ಕ್ಕೂ ಅಧಿಕ ಅಭಿಯಂತರ ಕಚೇರಿಗಳು, ಕಾನೂನು ನೆರವು ಸಮಿತಿಯ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.

ನ್ಯಾಯಾಲಯ ಸಂಕೀರ್ಣದಲ್ಲಿ ಮೂರು ಕಡೆ ಲಿಫ್ಟ್ ವ್ಯವಸ್ಥೆ ಹಾಗೂ ಅದಕ್ಕೆ ಹೊಂದಿಕೊಂಡಂತೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಆದರೆ ಸದರಿ 2 ಲಿಫ್ಟ್‌ಗಳು  ಹಲವು ದಿನಗಳಿಂದ ಕೆಟ್ಟು ಹೋಗಿವೆ.

ದುರಸ್ತಿಯಾಗದ ಕಾರಣ ವಿವಿಧ ಮಹಡಿಗಳಲ್ಲಿರುವ ನ್ಯಾಯಾಲಯಗಳಿಗೆ ಹಾಗೂ ಅಭಿಯಂತರರ ಕಚೇರಿಗಳಿಗೆ ಹೋಗಲು ಕಕ್ಷಿದಾರರಿಗೆ ಹಾಗೂ ಸಾಕ್ಷಿದಾರರಿಗೆ ತುಂಬಾ ತೊಂದರೆಯಾಗುತ್ತಿದೆ.

ಕಾರಣ ನ್ಯಾಯಾಲಯಗಳ ಸಂಕೀರ್ಣದ ಮಧ್ಯೆ ಭಾಗದಲ್ಲಿರುವ ಲಿಫ್ಟ್‌ನ್ನು ತ್ವರಿತವಾಗಿ ದುರಸ್ತಿ ಮಾಡಿಸಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT