ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆವಿ ನೀತಿ: ಅಕ್ಕಿ ಗಿರಣಿ ಬಂದ್

Last Updated 18 ಡಿಸೆಂಬರ್ 2013, 5:47 IST
ಅಕ್ಷರ ಗಾತ್ರ

ಮಸ್ಕಿ: ಸರ್ಕಾರದ ಲೆವಿ ಅಕ್ಕಿ ನೀತಿ ವಿರೋಧಿಸಿ ಅಕ್ಕಿ ಗಿರಣಿ ಮಾಲೀಕರು ಸೋಮವಾರದಿಂದ ರಾಜ್ಯಾದ್ಯಂತ ಅರಂಭಿಸಿರುವ  ಅನಿರ್ದಿಷ್ಟ ಅವಧಿ ಮುಷ್ಕರ ಬೆಂಬಲಿಸಿ ಮಸ್ಕಿಯಲ್ಲಿ ಅಕ್ಕಿ ಗಿರಣಿಗಳನ್ನು ಬಂದ್‌ ಮಾಡಲಾಗಿದೆ.

ಸೋಮವಾರ ಬೆಳಿಗ್ಗೆಯಿಂದಲೇ  ಗಿರಣಿಗಳನ್ನು ಬಂದ್‌ ಮಾಡಿರುವುದ­ರಿಂದಾಗಿ ಕಾರ್ಮಿಕರು ಕೆಲಸ ಇಲ್ಲದ ಖಾಲಿ ಕುಳಿತಿದ್ದರು. ಮುಷ್ಕರ ಹಿನ್ನೆಲೆ­ಯಲ್ಲಿ ಪಟ್ಟಣದಲ್ಲಿರುವ ಎರಡು ಅಕ್ಕಿ ಗಿರಣಿಗಳನ್ನು ಮುಚ್ಚಲಾಗಿತ್ತು. ಗಿರಣಿಗೆ ಬಂದಿದ್ದ ಭತ್ತದ ಚೀಲಗಳನ್ನು ಹಾಗೇ ಇಡಲಾಗಿದೆ. 

ಅಕ್ಕಿ ಗಿರಣಿ ಮಾಲೀಕರ ಸಂಘದ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದೆವೆ. ಸರ್ಕಾರ ಅಕ್ಕಿ ಲೆವಿ ನೀತಿಯನ್ನು ಕೈಬಿಡಬೇಕು. ಸಂಘದ ರಾಜ್ಯ ಘಟಕದಿಂದ ಆದೇಶ ಬರುವವರಿಗೆ ಅಕ್ಕಿ ಗಿರಣಿಗಳನ್ನು ಬಂದ್‌ ಮಾಡಲಾಗುತ್ತದೆ ಎಂದು ಮಾಲೀಕ ಶ್ರೀನಿವಾಸ್‌ ಇಲ್ಲೂರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT