ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ್‌ ಮಸೂದೆ: ಇಂದು ಮಂಡನೆ

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಹುನಿರೀಕ್ಷಿತ ಲೋಕಪಾಲ್‌ ಮಸೂದೆಯನ್ನು ಶುಕ್ರ­ವಾರ ರಾಜ್ಯಸಭೆಯಲ್ಲಿ ಮಂಡಿಸಲಾ­ಗು­ತ್ತಿದ್ದು, ಮಸೂದೆಗೆ ಅಂಗೀಕಾರ ಪಡೆಯು­ವುದು ಸರ್ಕಾರದ ಆದ್ಯತೆ­ಯಾ­ಗಿದೆ ಎಂದು ಸಂಸದೀಯ ವ್ಯವ­ಹಾರ­ಗಳ ಸಚಿವ ಕಮಲನಾಥ ತಿಳಿಸಿ­ದರು.

ಪ್ರಸಕ್ತ ಅಧಿವೇಶನದಲ್ಲೇ ಲೋಕ­ಪಾಲ್‌ ಮಸೂದೆಯನ್ನು ಮಂಡಿಸ­ಲಾ­ಗು­ವುದು ಎಂದು ಸರ್ಕಾರ ಈ ಸಂಬಂಧ ನಿರಶನ ನಡೆಸುತ್ತಿರುವ ಸಾಮಾ­ಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಭರವಸೆ ನೀಡಿದೆ. ಆದರೆ ಮಸೂದೆಗೆ ಒತ್ತಾಯಿಸಿ ಅಣ್ಣಾ ತಮ್ಮ ಸ್ವಗ್ರಾಮ ಮಹಾರಾಷ್ಟ್ರದ ರಾಳೆ­ಗಣಸಿದ್ದಿಯಲ್ಲಿ ಕೈಗೊಂಡಿರುವ ಅನಿರ್ದಿ­ಷ್ಟಾವಧಿ ಉಪವಾಸ ಸತ್ಯಾಗ್ರಹ ಗುರುವಾರ ಮೂರನೆಯ ದಿನಕ್ಕೆ ಕಾಲಿಟ್ಟಿದೆ.

‘ಮಸೂದೆ ಜಾರಿಗೆ ತರಲು ಸರ್ಕಾ­ರಕ್ಕೆ ಆಸಕ್ತಿ ಇಲ್ಲ, ಇದೇ ಕಾರಣ­ಕ್ಕಾಗಿ ಅಧಿವೇಶನ ಅವಧಿಯನ್ನು ಕಡಿತ­ಗೊಳಿ­ಸುವ ಯತ್ನ ನಡೆದಿದೆ ’ ಎಂದು ಲೋಕ­ಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್‌ ಆರೋಪಿಸಿದ್ದಾರೆ.

ಮಸೂದೆಗೆ ತಮ್ಮ ವಿರೋಧ ಇದೆ ಎಂದು ಸಮಾಜವಾದಿ ಪಕ್ಷ ಸ್ಪಷ್ಟ­ಪಡಿಸಿದೆ. ‘ಜನರ ವಿಶ್ವಾಸ ಕಳೆದು­ಕೊಂಡಿ­ರುವ ಸರ್ಕಾರ ಯಾವುದೇ ಮಸೂದೆ ಮಂಡಿ­ಸಬಾರದು’ ಎಂದು ಎಸ್‌ಪಿ ನಾಯಕ ನರೇಶ್‌ ಅಗರ­ವಾಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT