ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ನೇಮಕಾತಿ: ಸುಪ್ರೀಂ ಮೆಟ್ಟಿಲೇರಿದ ಮೋದಿ ಸರ್ಕಾರ

Last Updated 19 ಜನವರಿ 2012, 12:05 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್ಎಸ್): ನ್ಯಾಯಮೂರ್ತಿ (ನಿವೃತ್ತ) ಆರ್.ಎ. ಮೆಹ್ತಾ ಅವರನ್ನು ರಾಜ್ಯದ ಲೋಕಾಯುಕ್ತರನ್ನಾಗಿ ನೇಮಕ ಮಾಡಿದ ರಾಜ್ಯಪಾಲರ ಕ್ರಮವನ್ನು  ಎತ್ತಿ ಹಿಡಿದು ರಾಜ್ಯ ಹೈಕೋರ್ಟ್ ನೀಡಿದ ತೀರ್ಪನ್ನು ಗುಜರಾತ್ ಸರ್ಕಾರ ಗುರುವಾರ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದೆ.

ಈ ದಿನ ಬೆಳಿಗ್ಗೆಯೇ ಈ ಸಂಬಂಧ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಮೆಹ್ತಾ ಅವರನ್ನು ಗುಜರಾತ್ ಲೋಕಾಯುಕ್ತರಾಗಿ ನೇಮಕ ಮಾಡಿ ರಾಜ್ಯಪಾಲ ಕಮಲಾ ಬೇನಿವಾಲ ಅವರು 2011ರ ಆಗಸ್ಟ್ 26ರಂದು ನೇಮಕ ಮಾಡಿದ್ದನ್ನು ಗುಜರಾತ್ ಹೈಕೋರ್ಟ್ ಬುಧವಾರ ಎತ್ತಿ ಹಿಡಿದಿತ್ತು. ಈ ನೇಮಕಾತಿಗೆ ಮುನ್ನ 7 ವರ್ಷಗಳ ಕಾಲ ಗುಜರಾತಿನಲ್ಲಿ ಲೋಕಾಯುಕ್ತರೇ ಇರಲಿಲ್ಲ.

ಲೋಕಾಯುಕ್ತರ ನೇಮಕಾತಿಗೆ ಮುನ್ನ ರಾಜ್ಯಪಾಲರು ಈ ವಿಷಯದ ಕುರಿತು ಸಮಾಲೋಚಿಸಿಲ್ಲ ಎಂಬ ಕಾರಣಕ್ಕಾಗಿ ನರೇಂದ್ರ ಮೋದಿ ಸರ್ಕಾರವು ಲೋಕಾಯುಕ್ತ ನೇಮಕಾತಿಯನ್ನು ಪ್ರಶ್ನಿಸಿ ಹೈಕೋರ್ಟ್ ಕಟ್ಟೆ ಏರಿತ್ತು.

ರಾಜ್ಯಪಾಲರು ಮಾಡಿದ ಲೋಕಾಯುಕ್ತ ನೇಮಕಾತಿಯನ್ನು ಎತ್ತಿ ಹಿಡಿದು ~ಭಿನ್ನ ತೀರ್ಪು~ ನೀಡಿದ ಹೈಕೋರ್ಟಿನ ವಿಭಾಗೀಯ ಪೀಠವು ~ನರೇಂದ್ರ ಮೋದಿ ಅವರ ಕುಚೇಷ್ಟೆಗಳು ಮಿನಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿವೆ~ ಎಂದು ಟೀಕಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT