ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನಿತೆಯರ ಕೈಯಲ್ಲಿ ಚುನಾವಣೆ ಚುಕ್ಕಾಣಿ

Last Updated 15 ಏಪ್ರಿಲ್ 2013, 9:31 IST
ಅಕ್ಷರ ಗಾತ್ರ

ಮೈಸೂರು: ವಿಧಾನಸಭೆ ಚುನಾವಣೆಯು ಈ ಬಾರಿ ಸಂಪೂರ್ಣವಾಗಿ ವನಿತೆಯರ ಸಾರಥ್ಯದಲ್ಲಿ ನಡೆಯುತ್ತಿದೆ.

ಜಿಲ್ಲೆಯಲ್ಲಿರುವ ಒಟ್ಟು 11 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಉಸ್ತುವಾರಿಯಲ್ಲಿ ಈ ಬಾರಿ ಮಹಿಳಾ ಅಧಿಕಾರಿಗಳದ್ದೇ ಪಾರುಪತ್ಯ. ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ, ಜಿಲ್ಲಾಧಿ ಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಸಿ.ಶಿಖಾ,  ಆಡಳಿತ ಮತ್ತು ತರಬೇತಿ ಸಂಸ್ಥೆ ನಿರ್ದೇಶಕಿ ಅಮಿತಾಪ್ರಸಾದ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ವಸುಂಧರಾದೇವಿ, ಕೃಷ್ಣರಾಜ ಕ್ಷೇತ್ರದ ಚುನಾವಣಾಧಿಕಾರಿ ಕೆ.ಎಂ.ಗಾಯತ್ರಿ, ಮೈಸೂರು ಉಪವಿಭಾಗಾಧಿಕಾರಿ ಎಚ್.ಆರ್. ಶೈಲಜಾ,  ಹುಣಸೂರು ಉಪವಿಭಾಗಾಧಿಕಾರಿ ವಿನುತ ಪ್ರಿಯಾ, ನಂಜನಗೂಡು  ಸಹಾಯಕ ಚುನಾವಣಾಧಿಕಾರಿ-ಸಮಾಜ ಕಲ್ಯಾಣಧಿಕಾರಿ ಸರಸ್ವತಿ, ಕೆ.ಆರ್.ನಗರ ತಹಶೀಲ್ದಾರ್ ಬಿ.ಎನ್. ವೀಣಾ, ಪಿರಿಯಾಪಟ್ಟಣ ತಹಶೀಲ್ದಾರ್ ಎಂ.ಕೆ. ಸವಿತಾ, ಎಚ್.ಡಿ.ಕೋಟೆ ಚುನಾವಣಾಧಿ ಕಾರಿಯಾಗಿರುವ, ಆಹಾರ-ನಾಗರಿಕ ಪೂರೈಕೆ ಉಪನಿರ್ದೇಶಕಿ ಕುಮುದಾ ಗಿರೀಶ್, ತಿ.ನರಸೀಪುರದ ಅಬಕಾರಿ ಇನ್ಸ್‌ಪೆಕ್ಟರ್ ಪದ್ಮಾ  ಪ್ರಮುಖರಾಗಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯು ತೀವ್ರ ಪೈಪೋಟಿಯಿಂದ ಕೂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಆದರೆ, ಘಟಾನುಘಟಿ ನಾಯಕರು ಸ್ಪರ್ಧೆಗಿಳಿದಿರುವ ಜಿಲ್ಲೆಯ ಚುನಾವಣೆ ಪ್ರಕ್ರಿಯೆಯನ್ನು ಸಾಂಗವಾಗಿ ನಡೆಸುವ ಜವಾಬ್ದಾರಿಯನ್ನು ಮಹಿಳಾ ಅಧಿಕಾರಿಗಳು ಹೊತ್ತುಕೊಂಡಿರುವುದು ವಿಶೇಷ.

ಬಿಜೆಪಿಯ ಎಸ್.ಎ.ರಾಮದಾಸ್, ಕಾಂಗ್ರೆಸ್‌ನ ಸಿದ್ದರಾಮಯ್ಯ, ತನ್ವೀರ್ ಸೇಟ್, ಜೆಡಿಎಸ್‌ನ ಜಿ.ಟಿ. ದೇವೇಗೌಡ, ಎಚ್.ಎಸ್.ಶಂಕರಲಿಂಗೇ ಗೌಡ, ಕೆಜೆಪಿಯ ಎಚ್.ವಿ.ರಾಜೀವ ಸೇರಿದಂತೆ ಹಲವು ಪ್ರಮುಖರು ಜಿಲ್ಲೆಯ ವಿವಿಧ ಕ್ಷೇತ್ರಗಳ ಚುನಾವಣೆ ಕಣದಲ್ಲಿದ್ದಾರೆ. 

11 ಕ್ಷೇತ್ರಗಳಲ್ಲಿ ಒಟ್ಟು 2578 ಮತಗಟ್ಟೆ ಗಳಲ್ಲಿ ಮತದಾನ ನಡೆಯಲಿದೆ. ಅದರಲ್ಲಿ  40 ಅಕ್ಸಿಲರಿ ಮತಗಟ್ಟೆಗಳು, 978 ಸೂಕ್ಷ್ಮ ಮತ್ತು 520 ಅತಿ ಸೂಕ್ಷ್ಮ ಮತಗಟ್ಟೆಗಳು ಸೇರಿವೆ.  ಪಿರಿಯಾಪಟ್ಟಣದಲ್ಲಿ 205, ಕೆ.ಆರ್.ನಗರದಲ್ಲಿ 246, ಹುಣಸೂರು 262, ಎಚ್.ಡಿ.ಕೋಟೆ 257, ನಂಜನಗೂಡು 232,  ಚಾಮುಂಡೇಶ್ವರಿ 266, ಕೃಷ್ಣರಾಜ 201, ಚಾಮರಾಜ 201, ನರಸಿಂಹರಾಜ 205, ವರುಣ 250, ತಿ.  ನರಸೀಪುರದಲ್ಲಿ 213 ಮತಗಟ್ಟೆಗಳು ಇವೆ.

ಮಾರ್ಚ್ 20ರಿಂದ ಜಾರಿಯಾಗಿರುವ ಚುನಾವಣಾ ನೀತಿ ಸಂಹಿತೆಯ ಪ್ರಕಾರ, ಒಟ್ಟು 44 ತುರ್ತು ವಿಚಕ್ಷಣ ದಳಗಳು, 49 ಕಣ್ಗಾವಲು ತಂಡಗಳು, 14 ವಿಡಿಯೋ ಕಣ್ಗಾವಲು ತಂಡಗಳು, 11 ವಿಡಿಯೋ ವೀಕ್ಷಕ ತಂಡಗಳು, 128 ಸೆಕ್ಟೋರಿಯಲ್ ಮ್ಯಾಜಿಸ್ಟ್ರಿಯಲ್ ತಂಡಗಳನ್ನು ರಚಿಸಲಾಗಿದೆ.

ಹಗಲು, ರಾತ್ರಿ ಓಡಾಡುತ್ತ ಚುನಾವಣಾ ಪ್ರಕ್ರಿಯೆಯ ಜಾಲವನ್ನು ನಿಭಾಯಿಸುತ್ತಿರುವ ಪ್ರಮುಖ  ಮಹಿಳಾ ಅಧಿಕಾರಿಗಳ ಜೊತೆಗೆ, ವಿವಿಧ ಇಲಾಖೆಗಳ ಇನ್ನಿತರ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ವನಿತೆಯರೂ, ಮಹಿಳಾ ಪೊಲೀಸರು ಎಲೆಮರೆಯ ಕಾಯಿಯಂತೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT