ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ರಯ: ಸಚಿವಾಲಯ ವಿಶ್ವಾಸ

Last Updated 13 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಷೇರುಪೇಟೆಗಳಲ್ಲಿ ತೀವ್ರ ಏರಿಳಿತ ಮುಂದುವರೆದಿದ್ದರೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದಾಜಿಸಲಾಗಿರುವ ರೂ  40 ಸಾವಿರ ಕೋಟಿಗಳ ಷೇರು ವಿಕ್ರಯದ ಗುರಿ ತಲುಪುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

`ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಅಸ್ಥಿರತೆ ಇದ್ದರೂ ಷೇರುವಿಕ್ರಯದ ಮೂಲಕ ನಿಗದಿಪಡಿಸಿರುವ  ಗುರಿ ತಲುಪುವ ಭರವಸೆ ಇದೆ~ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆರ್.ಗೋಪಾಲನ್ ಇಲ್ಲಿ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ ಸಭೆಯಲ್ಲಿ ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ  ಪವರ್ ಫೈನಾನ್ಸ್ ಕಾರ್ಪೊರೇಷನ್ (ಪಿಎಫ್‌ಸಿ) ಷೇರುವಿಕ್ರಯದ ಮೂಲಕ ಸರ್ಕಾರ ಕೇವಲ ್ಙ1,100 ಕೋಟಿ ಮಾತ್ರ ಸಂಗ್ರಹಿಸಿದೆ. `ಅಮೆರಿಕ, ಯೂರೋಪ್ ಒಕ್ಕೂಟದ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಒತ್ತಡ ಸೇರಿದಂತೆ ಹಲವು ಸಂಗತಿಗಳಿಂದ ಷೇರು ಪೇಟೆ ಕಳೆದ ಐದಾರು ತಿಂಗಳಿಂದ ತೀವ್ರ ಏರಿಳಿತದಲ್ಲಿದೆ. ಕೈಗಾರಿಕೆ ಉತ್ಪಾದನೆ ಸೂಚ್ಯಂಕವೂ 21 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ. 

ಸರ್ಕಾರ ಈಗಾಗಲೇ `ಒಎನ್‌ಜಿಸಿ. ಎಸ್‌ಎಐಎಲ್, `ಎನ್‌ಬಿಸಿಸಿ~ ಮತ್ತು `ಎಚ್‌ಸಿಎಲ್~ ಷೇರು  ವಿಕ್ರಯಕ್ಕೆ ಅನುಮೋದನೆ ನೀಡಿದೆ.  ಕಳೆದ ವರ್ಷ ಷೇರು ವಿಕ್ರಯದ ಮೂಲಕ ಕೇವಲ ್ಙ22,763ಕೋಟಿ ಮಾತ್ರ ಸಂಗ್ರಹವಾಗಿತ್ತು.

ಕೆನರಾ ಬ್ಯಾಂಕ್: 17 ಹೊಸ ಶಾಖೆ ಉದ್ಘಾಟನೆ

ಪ್ರಜಾವಾಣಿ ವಾರ್ತೆ
ಬೆಂಗಳೂರು:
ರಾಷ್ಟ್ರೀಕೃತ ಕೆನರಾ ಬ್ಯಾಂಕ್,  ಮಂಗಳವಾರ ಮಹಾರಾಷ್ಟ್ರದಲ್ಲಿ 17 ಹೊಸ ಬ್ಯಾಂಕ್ ಶಾಖೆಗಳನ್ನು ಆರಂಭಿಸಿದೆ.

ಸತಾರಾ ಜಿಲ್ಲೆಯಲ್ಲಿನ ವರ್ನೆ ಗ್ರಾಮದಲ್ಲಿನ ಶಾಖೆಯನ್ನು ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್  ಉದ್ಘಾಟಿಸಿದರು. ಬ್ಯಾಂಕ್‌ನ ಅಧ್ಯಕ್ಷ ಎಸ್. ರಾಮನ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಅರ್ಚನಾ ಎಸ್. ಭಾರ್ಗವ ಉಪಸ್ಥಿತರಿದ್ದರು.  ಆರ್ಥಿಕ ಸೇರ್ಪಡೆಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳಿಗೂ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT