ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚ್ಛೇದಿತರ ಮಕ್ಕಳ ನೆರವಿಗೆ ಸಂಸ್ಥೆ

Last Updated 14 ಜನವರಿ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: ವಿಚ್ಛೇದನ ಪಡೆದ ದಂಪತಿಗಳ ಮಕ್ಕಳು ಸಮಾಜದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವುದನ್ನು ತಡೆಯಲು `ಮಕ್ಕಳ ಹಕ್ಕುಗಳ ಕಾನೂನಿಗಾಗಿ ಸಹ ಪೋಷಕರ ಸಂಸ್ಥೆ~ ಮುಂದಾಗಿದೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕುಮಾರ್ ಜಾಹಗೀರ್‌ದಾರ್, `ವಿಚ್ಛೇದನ ಪಡೆದ ನಂತರ ಮಕ್ಕಳ ಮಾನಸಿಕ ತೊಳಲಾಟಗಳು ಹೆಚ್ಚಾಗುತ್ತವೆ. ತಂದೆ ಅಥವಾ ತಾಯಿಯ ವಾತ್ಸಲ್ಯದಿಂದ ದೂರವಾಗುವ ಮಕ್ಕಳು ಶೈಕ್ಷಣಿಕವಾಗಿಯೂ ಕುಗ್ಗಿ ಹೋಗುತ್ತಾರೆ. ಇದನ್ನು ತಡೆಯಲು ಮಕ್ಕಳ ಮೂಲ ಪೋಷಕರ ಸಹಭಾಗಿತ್ವದ ಅನಿವಾರ್ಯವನ್ನು ಒತ್ತಾಯಿಸುವ ಬಗ್ಗೆ ಅರಿವು ಮೂಡಿಸಲು ಮುಂದಿನ ದಿನಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು~ ಎಂದರು.

`ವಿಚ್ಛೇದನದ ನಂತರ ಕೇವಲ ಪರಿಹಾರವನ್ನು ಮಾತ್ರ ಪಡೆಯುವ ಪರಿಪಾಠವೇ ಹೆಚ್ಚು. ಆದರೆ ಮಕ್ಕಳ ಶೈಕ್ಷಣಿಕ ವಿಚಾರಗಳಲ್ಲಿ ಮೂಲ ಪೋಷಕರ ಅಭಿಪ್ರಾಯಗಳಿಗೂ ಬೆಲೆ ನೀಡಬೇಕು. ಅದು ಮಕ್ಕಳ ಹಕ್ಕು ಕೂಡ ಆಗಿರುತ್ತದೆ. ಈ ಎಲ್ಲಾ ವಿಚಾರಗಳ ಬಗ್ಗೆ ಪ್ರಧಾನಮಂತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗುವುದು. ಮಕ್ಕಳಿಗಾಗಿಯೇ ಪ್ರತ್ಯೇಕ ಇಲಾಖೆಯನ್ನೂ ಆರಂಭಿಸುವ ಅಗತ್ಯವಿದೆ~ ಎಂದು ಅವರು ಒತ್ತಾಯಿಸಿದರು. ಜಯನಾಥ್, ಸವಿರೋ ಪೆರೇರಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT