ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರ ಸಾಹಿತ್ಯ ಸಮ್ಮೇಳನ ಜು. 10ಕ್ಕೆ

Last Updated 3 ಜೂನ್ 2011, 5:30 IST
ಅಕ್ಷರ ಗಾತ್ರ

ವಿಜಾಪುರ: ಬರುವ ಜುಲೈ 10ರಂದು ವಿಜಾಪುರ ತಾಲ್ಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಇತ್ತೀಚೆಗೆ ಇಲ್ಲಿ ಸೇರಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಣಯಿಸಲಾಯಿತು.ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಶರಣಪ್ಪ ಕಂಚಾಣಿ, ಡಾ. ಎಮ್.ಎನ್.ವಾಲಿ,

ಸಿ.ಎಮ್. ನುಚಿ ಅವರ ಸಮ್ಮುಖದಲ್ಲಿ ಸಮ್ಮೇಳನ ಕುರಿತು ಸುದಿರ್ಘವಾಗಿ ಚರ್ಚಿಸಲಾಯಿತು ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಗಳು ವಿಜಾಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸರ್ವ ಸದಸ್ಯರು ಸಾಹಿತ್ಯಾಸಕ್ತರು ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಜಾಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 10ರಂದು ಸಮ್ಮೇಳನ ನಡೆಸುವ ಕುರಿತಂತೆ ಎಲ್ಲರ ಅಭಿಪ್ರಾಯ ಸಲಹೆ ಸೂಚನೆಗಳ ಮೇರೆಗೆ ನಿರ್ಣಯವನ್ನು ಕೈಗೊಳ್ಳಲಾಯಿತು.
ಡಾ. ಎಮ್.ಎನ್. ವಾಲಿ, ಶರಣಪ್ಪ ಕಂಚಾಣಿ, ಸಿ.ಎಮ್.ನುಚಿ ತಮ್ಮ ಸಲಹೆ ಸೂಚನೆಗಳನ್ನು ಸಭೆಗೆ ನೀಡಿದರು.

ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷ ಬಸವರಾಜ ಸ್ವಾಮಿ ಮೇಲುಪ್ಪರಗಿಮಠ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಖಾದ್ರಿ ಇನಾಮದಾರ, ರಂಗನಾಥ ಅಕ್ಕಲಕೋಟ, ಎಮ್.ಜಿ. ಯಾದವಾಡ, ಬಂಡೆಪ್ಪ ತೇಲಿ, ರಾಮಚಂದ್ರ ಹಂಚಿನಾಳ, ಬಸವರಾಜ ಕುಂಬಾರ,

ಸೋಮಶೇಖರ ಕೋರಳ್ಳಿ, ಇಂದುಮತಿ ಲಮಾಣಿ, ರೇಶ್ಮಾ ಪಡೆಕನೂರ ಮಹಾದೇವ ಗೋಕಾಕ, ಮೀನಾಕ್ಷಿ ಉಟಗಿ, ಸುವರ್ಣ ಹುರಕಡ್ಲಿ, ಡಾ. ರೇಖಾ ಪಾಟೀಲ, ಹೇಮಾ ವಸ್ತ್ರದ, ವಿ.ಎಮ್. ಬಾಗಾಯತ, ಶ್ರೀದೇವಿ ಉತ್ಲಾಸರ, ಸುಭಾಸ ಯಾದವಾಡ, ವೀರಭದ್ರಯ್ಯ ಮಠ, ಸುಮಂಗಲಾ ಪೂಜಾರಿ, ಪಂಚಾಕ್ಷರಿ ಮಠ ಉಪಸ್ಥಿತರಿದ್ದರು.ಮಹಾಂತೇಶ ಸಾಲಿಮಠ ಸ್ವಾಗತಿಸಿದರು. ಮುರುಗೇಶ ಸಂಗಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT